PM Kisan ರೈತರಿಗೆ ಸಿಹಿ ಸುದ್ದಿ : ಈ ನಂಬರ್​ಗೆ ಕರೆ ಮಾಡಿ, ಖಾತೆಗೆ ಹಣ ಯಾವಾಗ ಬರುತ್ತೆ ತಿಳಿಯಿರಿ!

ನಿಮ್ಮ ಖಾತೆಗೆ ಮುಂದಿನ ಕಂತಿನ ಹಣ ಯಾವ ದಿನ ಬರುತ್ತದೆ ಎಂದು ನೀವು ಸಹ ಯೋಚಿಸುತ್ತಿದ್ದರೆ, ಈ ನಂಬರ್​ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಇದಕ್ಕೆ ಕೇಂದ್ರ ಸರ್ಕಾರವು ಕೆಲವು ವಿಶೇಷ ನಂಬರ್​ಗಳನ್ನು ನೀಡಿದ್ದು, ನೀವು ಸಹಾಯ ವಾಣಿಗೆ ಕರೆ ಮಾಡುವ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

Written by - Channabasava A Kashinakunti | Last Updated : Sep 12, 2022, 07:18 PM IST
  • ಸೆಪ್ಟೆಂಬರ್‌ನಲ್ಲಿ ಬರಬಹುದು ಹಣ
  • ಈ ನಂಬರ್​ಗೆ ಕರೆ ಮಾಡಿ ತಿಳಿದುಕೊಳ್ಳಬಹುದು
  • ಟ್ವೀಟ್ ಮೂಲಕ ಮಾಹಿತಿ ನೀಡಿದ ಸರ್ಕಾರ
PM Kisan ರೈತರಿಗೆ ಸಿಹಿ ಸುದ್ದಿ : ಈ ನಂಬರ್​ಗೆ ಕರೆ ಮಾಡಿ, ಖಾತೆಗೆ ಹಣ ಯಾವಾಗ ಬರುತ್ತೆ ತಿಳಿಯಿರಿ! title=

PM Kisan Yojana Update : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತುಗಾಗಿ ಕಾಯುತ್ತಿರುವ ಎಲ್ಲಾ ರೈತರಿಗೆ ಸಿಹಿ ಸುದ್ದಿಯೊಂದು ಸರ್ಕಾರ ನೀಡಿದೆ. ನಿಮ್ಮ ಖಾತೆಗೆ ಮುಂದಿನ ಕಂತಿನ ಹಣ ಯಾವ ದಿನ ಬರುತ್ತದೆ ಎಂದು ನೀವು ಸಹ ಯೋಚಿಸುತ್ತಿದ್ದರೆ, ಈ ನಂಬರ್​ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಇದಕ್ಕೆ ಕೇಂದ್ರ ಸರ್ಕಾರವು ಕೆಲವು ವಿಶೇಷ ನಂಬರ್​ಗಳನ್ನು ನೀಡಿದ್ದು, ನೀವು ಸಹಾಯ ವಾಣಿಗೆ ಕರೆ ಮಾಡುವ ಮೂಲಕ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಸೆಪ್ಟೆಂಬರ್‌ನಲ್ಲಿ ಬರಬಹುದು ಹಣ 

ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರವು 12 ನೇ ಕಂತಿನ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಬಹುದು. ಅಂದರೆ, ಶೀಘ್ರದಲ್ಲೇ ಕೋಟ್ಯಂತರ ರೈತರ ಖಾತೆಗೆ 2000 ರೂಪಾಯಿ ಕಂತು ಬರಬಹುದು. ಈ ಬಗ್ಗೆ ಸರಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ : LPG Cylinder Price: ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ, 300 ರೂ. ಅಗ್ಗದ ದರದಲ್ಲಿ ಸಿಗುತ್ತಿದೆ ಸಿಲಿಂಡರ್, ಈಗಲೇ ಬುಕ್ ಮಾಡಿ

ಟ್ವೀಟ್ ಮೂಲಕ ಮಾಹಿತಿ ನೀಡಿದ ಸರ್ಕಾರ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಾಗಿ ಮಾಡಿದ ಅರ್ಜಿಯ ಸ್ಟೇಟಸ್ ತಿಳಿದುಕೊಳ್ಳಲು ದೇಶದ ರೈತರು 155261 ಗೆ ಕರೆ ಮಾಡಬಹುದು ಎಂದು ಅಗ್ರಿಕಲ್ಚರ್ ಇಂಡಿಯಾ ತನ್ನ ಅಧಿಕೃತ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ. ಇಲ್ಲಿ ನೀವು ಕಂತಿನ ಅಪ್ಡೇಟ್ ಬಗ್ಗೆ ಮಾಹಿತಿ ಬಡೆದುಕೊಳ್ಳಬಹುದು.

ಪ್ರತಿ ವರ್ಷ ಸಿಗಲಿದೆ 6000 ರೂ.

ಈ ಯೋಜನೆಯಡಿ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ 6000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ ಲಾಭವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.

ನಿಮ್ಮ ಕಂತು ಸ್ಟೇಟಸ್ ಹೀಗೆ ಪರಿಶೀಲಿಸಿ-

1. ನೀವು ಮೊದಲು ಅಧಿಕೃತ ವೆಬ್‌ಸೈಟ್ https://pmkisan.gov.in/ ಗೆ ಹೋಗಬೇಕು.
2. ಇದರ ನಂತರ ನೀವು ಬಲಭಾಗದಲ್ಲಿ 'Farmers Corne' ಆಯ್ಕೆಯನ್ನು ನೋಡುತ್ತೀರಿ.
3. ನೀವು 'Beneficiary Status' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
4. ಇಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ.
5. ಈಗ ನೀವು ನಿಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯಿಂದ ಯಾವುದಾದರೂ ಒಂದು ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
6. ನಿಮ್ಮ ಖಾತೆಗೆ ಹಣ ಬರುತ್ತದೋ ಇಲ್ಲವೋ ಎಂಬುದನ್ನು ಈ 2 ಸಂಖ್ಯೆಗಳ ಮೂಲಕ ಪರಿಶೀಲಿಸಬಹುದು.
7. ಈ ಎರಡರಲ್ಲಿ ಯಾವುದಾದರೂ ಒಂದರ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು 'Get Data' ಮೇಲೆ ಕ್ಲಿಕ್ ಮಾಡಬೇಕು.
8. ಅದರ ಮೇಲೆ ಕ್ಲಿಕ್ ಮಾಡಿದ ನಂತರ, ನೀವು ಎಲ್ಲಾ ವ್ಯವಹಾರಗಳ ವಿವರಗಳನ್ನು ಪಡೆಯುತ್ತೀರಿ.

ಇದನ್ನೂ ಓದಿ : GST On Rent: ಬಾಡಿಗೆ ಮನೆಯ ಮೇಲೂ 18% ಜಿಎಸ್‌ಟಿ ಪಾವತಿಸಬೇಕೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News