PM Kisan Mandhan Yojana: ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ನಡೆಸುತ್ತಿದೆ. ಇದರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಂದನ್ ಯೋಜನೆಯೂ ಒಂದು. ಈ ಯೋಜನೆಯಲ್ಲಿ ವೃದ್ದಾಪ್ಯದಲ್ಲಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಅವರಿಗೆ ಪಿಂಚಣಿಯನ್ನು ನೀಡಲಾಗುತ್ತದೆ. ಹಾಗಿದ್ದರೆ, ಈ ಯೋಜನೆಯ ಅನುಕೂಲವನ್ನು ಪಡೆಯಲು ರೈತರು ಏನು ಮಾಡಬೇಕು ಎಂದು ತಿಳಿಯೋಣ...
ಕೇಂದ್ರ ಸರ್ಕಾರದ "ಕಿಸಾನ್ ಮಾಂಧನ್ ಯೋಜನೆ":-
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ (SMF) ಪಿಂಚಣಿ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಕಿಸಾನ್ ಮನ್ಧನ್ ಯೋಜನೆ (PM-KMY) ಅನ್ನು ಸೆಪ್ಟೆಂಬರ್ 12, 2019 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ರೈತರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿಯನ್ನು ನೀಡಲಾಗುತ್ತದೆ. ಅದೇ ವೇಳೆ ಯಾವುದೇ ಕಾರಣದಿಂದ ಫಲಾನುಭವಿ ರೈತರು ಮೃತಪಟ್ಟರೆ ಅವರ ಪತ್ನಿಗೆ ಮಾಸಿಕ 1500 ರೂ.ನೀಡುವ ನಿಯಮವೂ ಇದೆ.
ಇದನ್ನೂ ಓದಿ- Home Loan ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ!
ಕಿಸಾನ್ ಮಾಂಧನ್ ಯೋಜನೆ ಪ್ರೀಮಿಯಂ:
ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು 18 ರಿಂದ 40 ವರ್ಷದೊಳಗಿನ ರೈತರು ನೋಂದಾಯಿಸಿಕೊಳ್ಳಬಹುದು. ರೈತರು ಈ ಯೋಜನೆಯ ಭಾಗವಾಗಲು ವಯಸ್ಸಿನ ಹೊರತಾಗಿಯೂ, ಅವರು ತಿಂಗಳಿಗೆ 55 ರಿಂದ 200 ರೂ. ವರೆಗೆ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ನೊಂದಾಯಿಸಿ ಪ್ರೀಮಿಯಂ ಪಾವತಿಸುವ ರೈತರು 60 ವರ್ಷ ದಾಟಿದ ನಂತರ ಪಿಂಚಣಿಯಾಗಿ ತಿಂಗಳಿಗೆ 3,000 ರೂ.ಗಳನ್ನು ಪಡೆಯುತ್ತಾರೆ. ವೃದ್ದಾಪ್ಯದಲ್ಲಿ ಈ ಪಿಂಚಣಿಯಿಂದ ರೈತರು ತಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಬಹುದು.
ಇದನ್ನೂ ಓದಿ- Debit-Credit Cards: ಈ ಸ್ಥಳಗಳಲ್ಲಿ ಮಿಸ್ ಆಗಿಯೂ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ
ಕಿಸಾನ್ ಮಾಂಧನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಕಿಸಾನ್ ಮಾಂಧನ್ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಕೃಷಿ ಖಾಸ್ರಾ ಖಾತೌನಿ ಮತ್ತು ಬ್ಯಾಂಕ್ ಖಾತೆ ಪಾಸ್‌ಬುಕ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.
>> ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ರೈತರು ಮೊದಲು 'ಕಿಸಾನ್ ಮನ್ಧನ್ ಯೋಜನೆ'ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
>> ಇದರ ನಂತರ ನೀವು ಮುಖಪುಟಕ್ಕೆ ಹೋಗಿ ಲಾಗಿನ್ ಆಗಬೇಕು.
>> ಲಾಗಿನ್ ಆದ ನಂತರ ರೈತರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
>> ಅದರ ನಂತರ, ಅದರಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ನಿಗದಿತ ಜಾಗದಲ್ಲಿ ಭರ್ತಿ ಮಾಡಬೇಕು.
>> ನಂತರ Generate OTP ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
>> ಇದಾದ ಬಳಿಕ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನೀವು ನಮೂದಿಸಬೇಕಾಗುತ್ತದೆ.
>> ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ನೀವು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.