Ration Card Rule: ರೇಶನ್ ಕಾರ್ಡ್ ದಾರರೇ ಗಮನಿಸಿ : ಪಡಿತರ ತೆಗೆದುಕೊಳ್ಳಲು ಸರ್ಕಾರ ರೂಪಿಸಿದೆ ಹೊಸ ನಿಯಮ

Ration Card Rule : ನೀವು ಪಡಿತರ ಚೀಟಿ ಫಲಾನುಭವಿಯಾಗಿದ್ದರೆ ನಿಮಗಾಗಿ ಪ್ರಮುಖ ಸುದ್ದಿ ಇದೆ. ಪಡಿತರ ಅಂಗಡಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ನಿಯಮಗಳನ್ನು ರೂಪಿಸಿದ್ದು, ಇನ್ನು ಮುಂದೆ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಸಿಗುವಂತಾಗಿದೆ. 

Written by - Ranjitha R K | Last Updated : May 14, 2022, 01:02 PM IST
  • ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಸಿಗಲಿದೆ ಆಹಾರ ಧಾನ್ಯ
  • ಮೋಸಕ್ಕೆ ಕಡಿವಾಣ ಹಾಕುವ ಕ್ರಮವನ್ನು ಸರ್ಕಾರ ಅನುಸರಿಸಿದೆ.
  • ಅಗತ್ಯ ನಿಯಮಗಳನ್ನು ಜಾರಿಗೊಳಿಸಿದ ಇಲಾಖೆ
 Ration Card Rule: ರೇಶನ್ ಕಾರ್ಡ್ ದಾರರೇ  ಗಮನಿಸಿ : ಪಡಿತರ ತೆಗೆದುಕೊಳ್ಳಲು ಸರ್ಕಾರ ರೂಪಿಸಿದೆ ಹೊಸ ನಿಯಮ  title=
Ration Card Rule (file photo)

ಬೆಂಗಳೂರು : Ration Card Rule : ಪಡಿತರ ಚೀಟಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅಗತ್ಯ ನಿಯಮಗಳನ್ನು ರೂಪಿಸಿದೆ. ಪಡಿತರ ಖರೀದಿ ವೇಳೆ ಎಷ್ಟೋ ವೇಳೆ ತೂಕದಲ್ಲಿ ಮೋಸ ಮಾಡುವ ಮೂಲಕ ಪಡಿತರ ಚೀಟಿದಾರರಿಗೆ ಕಡಿಮೆ ಪಡಿತರವನ್ನು ವಿತರಿಸಲಾಗುತ್ತದೆ.  ಆದರೆ ಇದೀಗ ಈ ಮೋಸಕ್ಕೆ ಕಡಿವಾಣ ಹಾಕುವ ಕ್ರಮವನ್ನು ಸರ್ಕಾರ ಅನುಸರಿಸಿದೆ.  ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅನ್ನು ಕಡ್ಡಾಯಗೊಳಿಸಿದೆ. 

ಅಗತ್ಯ ನಿಯಮಗಳನ್ನು ಜಾರಿಗೊಳಿಸಿದ ಇಲಾಖೆ : 
ಪಡಿತರ ಚೀಟಿದಾರರು ಸರಿಯಾದ ಪ್ರಮಾಣದ ಪಡಿತರವನ್ನು ಪಡೆಯುವುದನ್ನು ಖಚಿತಗೊಳಿಸುವ ಸಲುವಾಗಿ, ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಲಾಗಿದೆ.   ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ತೂಕ ಮಾಡುವಾಗ ಪಾರದರ್ಶಕತೆ ಹೆಚ್ಚಿಸಲು ಮತ್ತು ಯಾವುದೇ ರೀತಿಯ ಮೋಸವಾಗದಂತೆ ತಡೆಯುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ : PM Kisan yojana: ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಪಟ್ಟಿ ಬಿಡುಗಡೆ- ನಿಮ್ಮ ಹೆಸರನ್ನು ಈ ರೀತಿ ಪರಿಶೀಲಿಸಿ

ಏನು ಹೇಳುತ್ತದೆ ನಿಯಮ ? :
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ, ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕಿಲೋಗ್ರಾಂಗಳಷ್ಟು ಗೋಧಿ ಮತ್ತು ಅಕ್ಕಿಯನ್ನು ಕೆಜಿಗೆ ಅನುಕ್ರಮವಾಗಿ 2-3 ರೂಪಾಯಿಗಳ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ದೇಶದ ಸುಮಾರು 80 ಕೋಟಿ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. 

 ಆಗಿರುವ ಬದಲಾವಣೆ ಏನು ? 
ಇಪಿಒಎಸ್ ಸಾಧನಗಳ ಮೂಲಕ ಪಡಿತರ ನೀಡಲು ರಾಜ್ಯಗಳನ್ನು ಉತ್ತೇಜಿಸುವ ಸಲುವಾಗಿ ಪ್ರತಿ ಕ್ವಿಂಟಲ್‌ಗೆ 17.00 ರೂ. ಹೆಚ್ಚುವರಿ ಲಾಭದೊಂದಿಗೆ ಉಳಿತಾಯವನ್ನು ಉತ್ತೇಜಿಸಲು ಆಹಾರ ಭದ್ರತೆ 2015 ರ ಉಪ ನಿಯಮ (2) ರ ನಿಯಮ 7 ಅನ್ನು ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಅಸಾನಿ ಎಫೆಕ್ಟ್‌ನಿಂದ ವಾತಾವರಣದಲ್ಲಿ ಏರುಪೇರು: ತರಕಾರಿ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆಯೇ?

ಹೊಸ ನಿಯಮದ ಪ್ರಕಾರ, ಪಾಯಿಂಟ್ ಆಫ್ ಸೇಲ್ ಸಾಧನವನ್ನು ಖರೀದಿಸಲು ಮತ್ತು ಅದರ ನಿರ್ವಹಣಾ ವೆಚ್ಚಕ್ಕೆ ಪ್ರತ್ಯೇಕ ಮಾರ್ಜಿನ್ ನೀಡಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News