Ration Card New Rules: ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿನಡಿಯಲ್ಲಿ ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) ಸಾಧನಗಳನ್ನು ಇಲೆಕ್ಟ್ರಾನಿಕ್ ಮಾಪಕಗಳನ್ನು ಜೋಡಿಸಿ ಕಾರ್ಡ್ ಹೊಂದಿರುವವರಿಗೆ ಸರಿಯಾದ ಪ್ರಮಾಣದ ಆಹಾರ ಪದಾರ್ಥಗಳು ಲಭ್ಯವಾಗುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
ಮೋದಿ ಸರ್ಕಾರ ತರಲು ಹೊರಟಿರುವ ಹೊಸ ಯೋಜನೆಯ ಪ್ರಕಾರ, ದೇಶದ ಯಾವುದೇ ಪಡಿತರ ಚೀಟಿದಾರರೂ ಸಹ ಎಂತಹದ್ದೇ ಪರಿಸ್ಥಿತಿಯಲ್ಲಿ ಕಡಿಮೆ ಪಡಿತರವನ್ನು ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಪಿಒಎಸ್ ) ಸಾಧನಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಈ ಉಚಿತ ಪಡಿತರ ಯೋಜನೆಯಲ್ಲಿ, ಅನೇಕ ಅನರ್ಹರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಮತ್ತು ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ದೊಡ್ಡ ಹೆಜ್ಜೆ ಇಟ್ಟಿದೆ. ಹಾಗಿದ್ರೆ, ಈ ಹೊಸ ನಿಯಮಗಳು ಏನು? ಇಲ್ಲಿದೆ ನೋಡಿ..
Ration Card Rule : ನೀವು ಪಡಿತರ ಚೀಟಿ ಫಲಾನುಭವಿಯಾಗಿದ್ದರೆ ನಿಮಗಾಗಿ ಪ್ರಮುಖ ಸುದ್ದಿ ಇದೆ. ಪಡಿತರ ಅಂಗಡಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ನಿಯಮಗಳನ್ನು ರೂಪಿಸಿದ್ದು, ಇನ್ನು ಮುಂದೆ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಸಿಗುವಂತಾಗಿದೆ.
ಪಡಿತರ ಚೀಟಿದಾರರಿಗೆ ಸಿಹಿ ಸುದ್ದಿ ಇದೆ. ಪಡಿತರ ಚೀಟಿಯ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಈಗ ನೀವು ಮನೆಯಲ್ಲಿ ಕುಳಿತುಕೊಂಡೆ ಪಡಿತರ ಪಡೆಯಬಹುದು. ಉಚಿತ ಪಡಿತರ ಸೌಲಭ್ಯವನ್ನು ಪಡೆಯುವ ಫಲಾನುಭವಿಗಳು ಅಂಗಡಿಗೆ ಭೇಟಿ ನೀಡುವ ಮೂಲಕ ಪಡಿತರ ಪಡೆಯಲು ಸಾಧ್ಯವಾಗದಿದ್ದರೆ, ಅವರು ಈಗ ಮನೆಯಲ್ಲಿ ಪಡಿತರವನ್ನು ಪಡೆಯುತ್ತಾರೆ ಎಂದು ಸರ್ಕಾರ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.