Budget 2023 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸುವ ಹಲವು ಘೋಷಣೆಗಳನ್ನು ಬಜೆಟ್ ನಲ್ಲಿ ಮಾಡಿದ್ದಾರೆ. ಹಣಕಾಸು ಸಚಿವರು ಮಂಡಿಸಿದ ಬಜೆಟ್ನ ಪ್ರಮುಖ ಅಂಶಗಳು ಇಲ್ಲಿವೆ.
ಬಜೆಟ್ 2023: ಹಣಕಾಸು ಸಚಿವರ ಭಾಷಣದ ಮುಖ್ಯಾಂಶಗಳು:
- ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದೆ. ಉಜ್ವಲ ಭವಿಷ್ಯದತ್ತ ಸಾಗುತ್ತಿದೆ.
- ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳಲು ಸುಮಾರು 80 ಕೋಟಿ ಜನರಿಗೆ 28 ತಿಂಗಳ ಕಾಲ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ.
- ಆಹಾರ ಮತ್ತು ಧಾನ್ಯ ವಿತರಣೆ ಯೋಜನೆಗೆ 2 ಲಕ್ಷ ಕೋಟಿ ಮೀಸಲಿಡಲಾಗಿದೆ.
- ಈ ಬಜೆಟ್ ದೇಶದ ಮುಂದಿನ 100 ವರ್ಷಗಳ ನೀಲನಕ್ಷೆಯಾಗಲಿದೆ.
- 9 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ವಿಶ್ವದ 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ಪ್ರಗತಿ ಹೊಂದಿದೆ. ದೇಶದ ಬೆಳವಣಿಗೆ ಶೇ.7ರಷ್ಟಿದೆ.
ಇದನ್ನೂ ಓದಿ : Budget 2023 Update: ಯಾವುದು ಅಗ್ಗವಾಯ್ತು, ಯಾವುದು ದುಬಾರಿಯಾಯ್ತು? ಇಲ್ಲಿದೆ ಲಿಸ್ಟ್
- ಜಾಗತಿಕ ಸವಾಲುಗಳ ಸಮಯದಲ್ಲಿ, ಭಾರತವು G20 ನೇತೃತ್ವ ವಹಿಸುತ್ತದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಲು ಇದು ಒಂದು ಅನನ್ಯ ಅವಕಾಶವನ್ನು ಒದಗಿಸಲಿದೆ.
- 2014 ರಿಂದ ಸರ್ಕಾರದ ಪ್ರಯತ್ನಗಳು ಎಲ್ಲಾ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನವನ್ನು ನೀದುಅವ್ಲ್ಲಿ ಯಶಸ್ವಿ
- ನಾವು 220 ಕೋಟಿ ಕರೋನಾ ಡೋಸ್ಗಳೊಂದಿಗೆ 102 ಕೋಟಿ ಜನರಿಗೆ ಲಸಿಕೆ.
- ಭಾರತವು 9 ವರ್ಷಗಳಲ್ಲಿ 5 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
- ದೇಶದ ಆರ್ಥಿಕ ಬೆಳವಣಿಗೆ ದರ 7% ಎಂದು ಅಂದಾಜಿಸಲಾಗಿದೆ.
- 11.4 ಕೋಟಿ ರೈತರಿಗೆ ಬ್ಯಾಂಕ್ಗಳ ಮೂಲಕ ನೇರ ನೆರವು ನೀಡಲಾಗಿದೆ.
- 2023ರಲ್ಲಿ ಇನ್ನೊಂದು ವರ್ಷಕ್ಕೆ ಉಚಿತ ಆಹಾರ ಧಾನ್ಯಗಳನ್ನು ನೀಡಲಾಗುವುದು.
ಇದನ್ನೂ ಓದಿ : ಪ್ಯಾನ್ ಕಾರ್ಡ್ ಬಗ್ಗೆ ಬಜೆಟ್ ನಲ್ಲಿ ಅತಿ ದೊಡ್ಡ ಘೋಷಣೆ! ಉದ್ಯಮಿಗಳಿಗೆ ಭರ್ಜರಿ ಗಿಫ್ಟ್
- ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.
- ಉಜ್ವಲ ಯೋಜನೆಯಡಿ 9.6 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ.
- ಜಮ್ಮು ಮತ್ತು ಕಾಶ್ಮೀರ, ಲಡಾಖ್ನ ಅಭಿವೃದ್ಧಿಗಾಗಿ ವಿವಿಧ ಹೊಸ ಯೋಜನೆಗಳನ್ನು ಪರಿಚಯಿಸಲಾಗಿದೆ.
- 47.8 ಕೋಟಿ ಜನಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
- 44.6 ಕೋಟಿ ಜನರು ಪ್ರಧಾನಮಂತ್ರಿ ವಿಮಾ ಯೋಜನೆಗೆ ಒಳಪಟ್ಟಿದ್ದಾರೆ.
- ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವುದು.
- ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ 6,000 ಕೋಟಿ ರೂ.
- ಪಶುಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಕ್ಕೆ 20 ಲಕ್ಷ ಕೋಟಿ ರೂ.
- ತೋಟಗಾರಿಕೆ ಇಲಾಖೆಗೆ ₹2,200 ಕೋಟಿ ಹಂಚಿಕೆ.
- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಆಂದೋಲನದ ಮೂಲಕ, 1 ಲಕ್ಷ ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರನ್ನು ಸೇರಿಸುವಲ್ಲಿ ಯಶಸ್ಸು
- ಕೃಷಿ ಕ್ಷೇತ್ರದಲ್ಲಿ ಹೊಸ ಸ್ಟಾರ್ಟ್ಅಪ್ಗಳ ಸೃಷ್ಟಿಗೆ ಉತ್ತೇಜನ ನೀಡಲಾಗುವುದು.
- ಮುಂಬರುವ ಆರ್ಥಿಕ ವರ್ಷದಲ್ಲಿ ರೂ 20 ಲಕ್ಷ ಕೋಟಿ ಕೃಷಿ ಸಾಲ ವಿತರಿಸುವ ಗುರಿ.
- ಮಕ್ಕಳು ಮತ್ತು ಯುವಕರಿಗಾಗಿ ಎಲ್ಲಾ ಗ್ರಾಮಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು .
- 157 ಹೊಸ ನರ್ಸಿಂಗ್ ಕಾಲೇಜುಗಳನ್ನು ರಚಿಸಲಾಗುವುದು.
- ಹಸಿರು ಇಂಧನ ಉತ್ಪಾದನೆಗೆ ಮುಂದುವರಿದ ಆದ್ಯತೆ.
- ಖಾಸಗಿ ಏಜೆನ್ಸಿ ಗಳು ICMR ಕೇಂದ್ರಗಳನ್ನು ಸಹ ಬಳಸಬಹುದು.
- 740 ಏಕಲೈವ ಶಾಲೆಗಳಿಗೆ 38,000 ಶಿಕ್ಷಕರ ನೇಮಕ
- ಪ್ರಧಾನಮಂತ್ರಿ ವಸತಿ ಯೋಜನೆಗೆ 70,000 ಕೋಟಿ ರೂ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.