Company Notice Period :ನೀವು ಯಾವುದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದಾಗ, ಹಲವಾರು ಒಪ್ಪಂದಗಳ ಪೇಪರ್ ಗೆ ಸಹಿ ಹಾಕಿರುತ್ತೀರಿ, ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯವೂ ಹೌದು. ಇದರಲ್ಲಿ ನೋಟೀಸ್ ಪಿರಿಯೆಡ್ ಬಗ್ಗೆಯೂ ಉಲ್ಲೇಖಿಸಲಾಗಿರುತ್ತದೆ. ಅಂದರೆ ಒಂದು ವೇಳೆ ನೀವು ಹೊಸ ಕೆಲಸಕ್ಕೆ ಸೇರುವುದಾದರೆ, ರಾಜೀನಾಮೆ ಬಳಿಕ ಹಳೇ ಕಂಪನಿಯಲ್ಲಿ ಎಷ್ಟು ಸಮಯದವರೆಗೆ ಕೆಲಸ ಮಾಡಲೇ ಬೇಕು ಎನ್ನುವುದನ್ನು ಅದರಲ್ಲಿ ಸ್ಪಷ್ಟವಾಗಿ ಬರೆದಿರಲಾಗುತ್ತದೆ. ಈ ಮೂಲಕ ಎಷ್ಟು ತಿಂಗಳು ಅಥವಾ ದಿನಗಳ ನೋಟಿಸ್ ಪಿರಿಯೆಡ್ ಎನ್ನುವುದು ಉದ್ಯೋಗಿಗೆ ಮೊದಲೇ ತಿಳಿದಿರುತ್ತದೆ. ಕಂಪನಿಯ ತರ್ಕವೆಂದರೆ, ಈ ಅವಧಿಯಲ್ಲಿ ಹೊಸ ನೇಮಕಾತಿಗಳನ್ನು ಮಾಡಲಾಗುತ್ತದೆ. ನಿಮ್ಮ ಸ್ಥಳದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕಂಪನಿಗೆ ಸೇರಿಸಿಕೊಳ್ಳಲಾಗುತ್ತದೆ.
ನೋಟಿಸ್ ಪೀರಿಯೇಡ್ ಬಗ್ಗೆ ಪ್ರತಿ ಕಚೇರಿಯಲ್ಲಿಯೂ ಸಾಮಾನ್ಯವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ. ಅನೇಕ ಕಂಪನಿಗಳಲ್ಲಿ ಮೂರು ತಿಂಗಳವರೆಗೆ ನೋಟಿಸ್ ಅವಧಿ ಇರುತ್ತದೆ.ಆ ಸಂದರ್ಭದಲ್ಲಿ ಹೊಸ ಕಂಪನಿ ಅಷ್ಟು ಸಮಯ ಕಾಯದೆ ಹೋದರೆ ಉದ್ಯೋಗಿಯ ಮೇಲೆ ಎರಡೂ ಕಡೆಯಿಂದಲೂ ಒತ್ತಡ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಹಳೆಯ ಕಂಪನಿ ನೋಟೀಸ್ ಪೀರಿಯೇಡ್ ಅನ್ನು ಕಡಿಮೆ ಮಾಡುವುದನ್ನು ಸ್ಪಷ್ಟವಾಗಿ ನಿರಾಕರಿಸಿ ಬಿಡುತ್ತದೆ. ಹೀಗಿರುವಾಗ ನೋಟಿಸ್ ಅವಧಿ ಪೂರೈಸದೆ ಕೆಲಸ ಬಿಡಬಹುದೇ ? ನೋಟಿಸ್ ಪಿರಿಯೆಡ್ ಮಾಡದೇ ಕೆಲಸ ಬಿಟ್ಟರೆ ಏನಾಗುತ್ತದೆ? ಎನ್ನುವ ಪ್ರಶ್ನೆಗಳು ಉದ್ಯೋಗಿಯನ್ನು ಕಾಡುತ್ತದೆ.
ಇದನ್ನೂ ಓದಿ : Arecanut Rate Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
ಕಂಪನಿ ಒತ್ತಾಯಿಸುವಂತಿಲ್ಲ :
ಯಾವ ಕಂಪನಿ ಕೂಡಾ ನಿಮ್ಮನ್ನು ನೋಟಿಸ್ ಪೀರಿಯೇಡ್ ವಿಚಾರವಾಗಿ ಒತ್ತಾಯಿಸಲು ಸಾಧ್ಯವಿಲ್ಲ. ಕಂಪನಿಗೆ ರಾಜೀನಾಮೆ ನೀಡುವಾಗ ನೀವು ಸಹಿ ಮಾಡಿದ ಪಾಲಿಸಿಯಲ್ಲಿ ನೋಟಿಸ್ ಪೀರಿಯೇಡ್ ಷರತ್ತುಗಳು ಏನಿತ್ತು ಎನ್ನುವುದನ್ನು ಸರಿಯಾಗಿ ನೋಡಿಕೊಳ್ಳಿ. ಈ ಈ ಷರತ್ತುಗಳನ್ನು ನೀವು ಅನುಸರಿಸಬೇಕಾಗುತ್ತದೆ. ಪ್ರತಿ ಬಾರಿಯೂ ನೋಟಿಸ್ ಅವಧಿಯನ್ನು ಪೂರೈಸುವುದು ಅನಿವಾರ್ಯವಲ್ಲ, ಆದರೆ ಇದು ಹಣಕಾಸಿನ ನಷ್ಟವನ್ನು ಉಂಟುಮಾಡುತ್ತದೆ. ಅನೇಕ ಕಡೆಗಳಲ್ಲಿ ವೇತನಗಳನ್ನು ತಡೆಹಿಡಿಯಲಾಗುತ್ತದೆ. ಬಾಕಿ ಪಾವತಿಸುವುದಿಲ್ಲ. ನೋಟಿಸ್ ಅವಧಿಯನ್ನು ನೀಡಲು ಯಾವುದೇ ಕಂಪನಿಯು ನಿಮ್ಮನ್ನು ಒತ್ತಾಯಿಸುವುದಿಲ್ಲ. ಅನೇಕ ಕಂಪನಿಗಳಲ್ಲಿ ನೀವು ಉಳಿಸಿಕೊಂಡಿರುವ ರಜೆಯನ್ನು ನೋಟೀಸ್ ಪಿರಿಯೆಡ್ ಗೆ ಸರಿ ಹೊಂದಿಸಲಾಗುತ್ತದೆ. ಮತ್ತೆ ಕೆಲವು ಕಡೆ ನೋಟೀಸ್ ಪಿರಿಯೆಡ್ ಬದಲಿಗೆ ಅಷ್ಟು ತಿಂಗಳ ಅಥವಾ ದಿನಗಳ ಹಣವನ್ನು ತೆಗೆದುಕೊಳ್ಳುವ ಮೂಲಕ ನೋಟಿಸ್ ಅವಧಿಯನ್ನು ಮನ್ನಾ ಮಾಡಬಹುದು.
ಒಟ್ಟಿನಲ್ಲಿ ನಿಮ್ಮ ಕಂಪನಿ ಯಾವ ನೀತಿ ಅನುಸರಿಸಲು ಸಿದ್ದ ಎನ್ನುವುದನ್ನು ತಿಳಿದುಕೊಂಡು ಮುಂದುವರೆದರೆ ಯಾವುದೇ ಕಿರಿಕಿರಿಯಿಲ್ಲದೆ ಕಂಪನಿಯಿಂದ ಹೊರ ಬರಬಹುದು.
ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನದ ದರ ಮತ್ತೆ ಹೆಚ್ಚಳ: ಬೆಳ್ಳಿಯ ಬೆಲೆ ಇಳಿಕೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ