ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 55 ರೂ. ಹೂಡಿಕೆ ಮಾಡಿ ಪಡೆಯಿರಿ 3 ಸಾವಿರ ರೂ. ಪಿಂಚಣಿ

ಸರ್ಕಾರಿ ಯೋಜನೆಗಳಲ್ಲಿ ಮಾಡುವ ಹೂಡಿಕೆ ಸುರಕ್ಷಿತವಾಗಿರುತ್ತದೆ. ಅಲ್ಲಿ ಜಮಾ ಮಾಡಿದ ಹಣ ದುರುಪಯೋಗವಾಗುವ ಭಯವಿರುವುದಿಲ್ಲ. ನಿಮ್ಮ ಭವಿಷ್ಯ ಮತ್ತು ನಿವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರೆ, ಈ ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Written by - Ranjitha R K | Last Updated : Aug 3, 2021, 06:16 PM IST
  • ತಿಂಗಳಿಗೆ ಹೂಡಿಕೆ ಮಾಡಿ ಕೇವಲ 55 ರೂಪಾಯಿ
  • ನಿವೃತ್ತಿ ಜೀವನದಲ್ಲಿ ಪಡೆಯಿರಿ 3 ಸಾವಿರ ರೂ. ಪಿಂಚಣಿ
  • ಯೋಜನೆಯ ಸಂಪೂರ್ಣ ಮಾಹಿತಿ ತಿಳಿಯಿರಿ
ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 55 ರೂ. ಹೂಡಿಕೆ ಮಾಡಿ ಪಡೆಯಿರಿ 3 ಸಾವಿರ ರೂ. ಪಿಂಚಣಿ title=
ತಿಂಗಳಿಗೆ ಹೂಡಿಕೆ ಮಾಡಿ ಕೇವಲ 55 ರೂಪಾಯಿ (file photo)

ನವದೆಹಲಿ : PM Kisan Mandhan Yojana: ಜೀವನದ ಒಂದು ಹಂತದಲ್ಲಿ ಹಣವನ್ನು ಉಳಿಸುವುದು ಬಹಳ ಮುಖ್ಯವಾಗಿರುತ್ತದೆ . ಪ್ರತಿಯೊಬ್ಬ ವ್ಯಕ್ತಿ ಕೂಡಾ ನಿವೃತ್ತಿ ಜೀವನದಲ್ಲಿ ಉತ್ತಮ ಪಿಂಚಣಿ (Pension) ಪಡೆಯಲು  ಬಯಸುತ್ತಾನೆ. ನೀವು ಕೂಡ ಅದೇ ರೀತಿ ಯೋಚಿಸುವುದಾದರೆ, ನಿಮಗೊಂದು ಸುವರ್ಣಾವಕಾಶವಿದೆ. ಈ ಯೋಜನೆಯಲ್ಲಿ, ಪ್ರತಿ ತಿಂಗಳು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ಪಿಂಚಣಿ ಪಡೆಯಬಹುದು. 

ಸರ್ಕಾರಿ ಯೋಜನೆಗಳಲ್ಲಿ ಸುರಕ್ಷಿತ ಹೂಡಿಕೆ : 
 ಸರ್ಕಾರಿ ಯೋಜನೆಗಳಲ್ಲಿ ಮಾಡುವ ಹೂಡಿಕೆ ಸುರಕ್ಷಿತವಾಗಿರುತ್ತದೆ. ಅಲ್ಲಿ ಜಮಾ ಮಾಡಿದ ಹಣ ದುರುಪಯೋಗವಾಗುವ ಭಯವಿರುವುದಿಲ್ಲ. ನಿಮ್ಮ ಭವಿಷ್ಯ ಮತ್ತು ನಿವೃತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರೆ, ಈ ಸರ್ಕಾರಿ ಯೋಜನೆಯಲ್ಲಿ (Government scheme) ಹೂಡಿಕೆ ಮಾಡಬಹುದು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರಲ್ಲಿ ಪ್ರತಿ ತಿಂಗಳಿಗೆ ಕೇವಲ 55 ರೂಪಾಯಿಯನ್ನು ಹೂಡಿಕೆ ಮಾಡಿ,  ತಿಂಗಳಿಗೆ 3,000 ರೂ. ಪಿಂಚಣಿ ಪಡೆಯಬಹುದು. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM Kisan Mandhan Yojana). 

ಇದನ್ನೂ ಓದಿ : SBI ನಿಂದ ಮಹಿಳೆಯರಿಗೆ ಸಿಹಿ ಸುದ್ದಿ : ಶೂನ್ಯ ಬಡ್ಡಿ ದರದಲ್ಲಿ ಗೃಹ ಸಾಲ ಯೋಜನೆ!

ಈ ಯೋಜನೆಯ ವಿಶೇಷತೆಗಳು : 
ನೀವು ಕೃಷಿಕರಾಗಿದ್ದರೆ ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಪ್ರತಿ ತಿಂಗಳು ಹಣವನ್ನು ಠೇವಣಿ ಮಾಡುವ ಷರತ್ತಿನ ಪ್ರಕಾರ, ದೇಶದ ಸಣ್ಣ ರೈತರು, ಇದರಲ್ಲಿ ಹೂಡಿಕೆ (invstment) ಮಾಡಬಹುದು. ಇಲ್ಲಿ ಹೂಡಿಕೆ ಮಾಡಬೇಕಾದರೆ  ಫಲಾನುಭವಿಯ ವಯಸ್ಸು 18ರಿಂದ 40 ವರ್ಷಗಳ ಒಳಗಿರಬೇಕು. 2 ಹೆಕ್ಟೇರ್ ಅಥವಾ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತರು ಮಾತ್ರ ಇದರಲ್ಲಿ ಹೂಡಿಕೆ ಮಾಡಬಹುದು. ಒಂದು ವೇಳೆ ಫಲಾನುಭವಿ ಮೃತಪಟ್ಟರೆ, ಯೋಜನೆಯ ಅಡಿಯಲ್ಲಿ ಪಿಂಚಣಿಯನ್ನು (pension) ಫಲಾನುಭವಿಯ ಪತ್ನಿಗೆ ನೀಡಲಾಗುವುದು. ಆದರೆ ಇಲ್ಲಿ ಪಿಂಚಣಿ ಮೊತ್ತದ ಅರ್ಧದಷ್ಟನ್ನು ಮಾತ್ರ ನೀಡಲಾಗುವುದು. 

ಸಿಗಲಿದೆ ಮೂರು ಸಾವಿರ ರೂ. ಪಿಂಚಣಿ : 
ನೀವು ಈ ಸರ್ಕಾರಿ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದರೆ, ತಿಂಗಳಿಗೆ 3,000 ರೂಪಾಯಿ ಪಿಂಚಣಿ ಪಡೆಯಬಹುದು. ಈ ಯೋಜನೆಯಡಿ, 50 ಪ್ರತಿಶತ ಪ್ರೀಮಿಯಂ ಅನ್ನು ಫಲಾನುಭವಿಗಳು ಪಾವತಿಸಿದರೆ, ಇನ್ನು ಉಳಿದ 50 ಪ್ರತಿಶತವನ್ನು ಕೇಂದ್ರ ಸರ್ಕಾರವು ನೀಡುತ್ತದೆ. 

ಇದನ್ನೂ ಓದಿ : Post Office Scheme: 25 ಸಾವಿರ ರೂ. ಹೂಡಿಕೆ ಮಾಡಿ, 21 ಲಕ್ಷದವರೆಗೆ ಗಳಿಸಿ, ಹೇಗೆಂದು ತಿಳಿಯಿರಿ...

ಅಗತ್ಯ ದಾಖಲೆಗಳು : 
ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ, ಕೆಲವೊಂದು ದಾಖಲೆ ಪತ್ರಗಳಿರಬೇಕು. ಅವುಗಳೆಂದರೆ, ಆಧಾರ್ ಕಾರ್ಡ್ (Aadhaar card), ಗುರುತಿನ ಚೀಟಿ, ಏಜ್ ಪ್ರೂಫ್, ಆದಾಯ ಪ್ರಮಾಣಪತ್ರ, ಜಮೀನಿನ ದಾಖಲೆ ಪತ್ರ, ಬ್ಯಾಂಕ್ ಖಾತೆಯ ಪಾಸ್‌ಬುಕ್, ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ..

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News