ಟಾಟಾದ ಈ ಫ್ಯಾಮಿಲಿ ಕಾರಿನ ಮೇಲೆ ಸಿಗುತ್ತಿದೆ ಭಾರೀ Discount, 6 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಈ ಕಾರು

ಟಾಟಾ ಮೋಟಾರ್ಸ್ ತನ್ನ ಟಾಟಾ ಟಿಯಾಗೊ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.  

Written by - Ranjitha R K | Last Updated : Feb 11, 2022, 11:30 AM IST
  • ಟಾಟಾ ಟಿಯಾಗೊ ಕಾರಿನ ಮೇಲೆ ಭಾರೀ ಡಿಸ್ಕೌಂಟ್
  • ಕಾರಿನ ಮೇಲೆ 28,000 ವರೆಗೆ ರಿಯಿತಿಗಳನ್ನು
  • ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಮತ್ತು ಲಾಯಲ್ಟಿ ಡಿಸ್ಕೌಂಟ್ ರೂಪದಲ್ಲಿ ಲಭ್ಯ .
ಟಾಟಾದ ಈ ಫ್ಯಾಮಿಲಿ ಕಾರಿನ ಮೇಲೆ ಸಿಗುತ್ತಿದೆ ಭಾರೀ Discount, 6 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದು ಈ ಕಾರು  title=
ಟಾಟಾ ಟಿಯಾಗೊ ಕಾರಿನ ಮೇಲೆ ಭಾರೀ ಡಿಸ್ಕೌಂಟ್ (file photo)

ನವದೆಹಲಿ : ಟಾಟಾ ಮೋಟಾರ್ಸ್ (Tata Motors) ತನ್ನ ಟಾಟಾ ಟಿಯಾಗೊ (Tata Tiago) ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.  ಈ ಕೊಡುಗೆಗಳನ್ನು ನಗದು ರಿಯಾಯಿತಿ, ವಿನಿಮಯ ಬೋನಸ್ (Exchange bonus) ಮತ್ತು ಲಾಯಲ್ಟಿ ಡಿಸ್ಕೌಂಟ್ ರೂಪದಲ್ಲಿ ಪಡೆಯಬಹುದು. ಕಂಪನಿಯು ನೀಡುತ್ತಿರುವ ಆಫರ್ ಅಡಿಯಲ್ಲಿ, ಗ್ರಾಹಕರು  28,000 ರೂಪಾಯಿಗಳವರೆಗಿನ ದೊಡ್ಡ ಮೊತ್ತವನ್ನು ಉಳಿತಾಯ ಮಾಡಬಹುದು.  

ಏನಿದು ಆಫರ್ ? :
ಟಾಟಾ ಮೋಟಾರ್ಸ್ (Tata Motors) ಈ ತಿಂಗಳು ಟಾಟಾ ಟಿಯಾಗೊ (Tata Tiago) ಮಾಡೆಲ್ ನಲ್ಲಿ  28,000 ರೂ.ಗಳವರೆಗೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಇದರ ಮೇಲೆ, 10000 ರೂ ನಗದು ರಿಯಾಯಿತಿ,  15,000 ವರೆಗೆ ವಿನಿಮಯ ಬೋನಸ್ ಮತ್ತು  3000 ರೂ ಕಾರ್ಪೊರೇಟ್ ರಿಯಾಯಿತಿಯನ್ನು ಕಂಪನಿಯು ನೀಡುತ್ತಿದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಅಲ್ಲದೆ, ವಿವಿಧ ರಾಜ್ಯಗಳು ಮತ್ತು ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ, ಈ ಆಫರ್ ನಲ್ಲಿ ಬದಲಾವಣೆ ಇರಲಿದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಟಾಟಾ ಟಿಯಾಗೊದ ಸಿಎನ್‌ಜಿ ಮಾದರಿಯಲ್ಲಿ ಕಂಪನಿಯು ಯಾವುದೇ ರಿಯಾಯಿತಿಯನ್ನು ನೀಡುತ್ತಿಲ್ಲ.

ಇದನ್ನೂ ಓದಿ :  7th Pay Commission: ಡಿಎ ಕುರಿತಂತೆ ಹೊರ ಬಂದಿದೆ ಹೊಸ ಅಪ್ಡೇಟ್, ಸರ್ಕಾರಿ ನೌಕರರಿಗೆ ಒಂದೇ ಬಾರಿ ಸಿಗಲಿದೆ 2 ಲಕ್ಷ ರೂಪಾಯಿ

ಬೆಲೆ ಮತ್ತು ಮೈಲೇಜ್ :
ಟಾಟಾ ಟಿಯಾಗೊ ಕಾರು ಸುಮಾರು 20.09 kmpl ನಷ್ಟು ಅತ್ಯುತ್ತಮ ಮೈಲೇಜ್ ನೀಡುತ್ತದೆ. ಇದರ ಆರಂಭಿಕ ದೆಹಲಿ ಎಕ್ಸ್ ಶೋ ರೂಂ ಬೆಲೆ 5.19 ಲಕ್ಷ ರೂ.

ಎಂಜಿನ್ ಮತ್ತು ವಿನ್ಯಾಸ :
ಅಸ್ತಿತ್ವದಲ್ಲಿರುವ Tiago ಮತ್ತು Tigor ಜೊತೆಗೆ, ಕಂಪನಿಯು 1.2-ಲೀಟರ್ ಮೂರು-ಸಿಲಿಂಡರ್ Revetron ಪೆಟ್ರೋಲ್ ಎಂಜಿನ್ ನೀಡಿದೆ.  ಅದು 86 ಹಾರ್ಸ್ ಪವರ್  ಮತ್ತು 113 Nm ಪೀಕ್ ಟಾರ್ಕ್ ಅನ್ನು ಒಳಗೊಂಡಿದೆ. ಕಂಪನಿಯು ಈ ಕಾರಿನಲ್ಲಿ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಿದೆ. 

ಇದನ್ನೂ ಓದಿ: 10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

ಟಾಟಾ ಟಿಯಾಗೊ ಉದ್ದ 3765 ಎಂಎಂ, ಅಗಲ 1677 ಎಂಎಂ ಮತ್ತು ಎತ್ತರ 1535 ಎಂಎಂ. ಇದರ ವ್ಹೀಲ್ ಬೇಸ್ 2400 ಎಂಎಂ. ಇದು 35 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News