Budget 2024 : ಬಜೆಟ್ ಭಾಷಣವನ್ನು ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬಹುದು? Budget ಪ್ರಕ್ರಿಯೆಯ ಸಂಪೂರ್ಣ ಟೈಮ್ ಟೇಬಲ್ ಇಲ್ಲಿದೆ.

Budget 2024 :ಬಜೆಟ್‌ನ ಭಾಷಣದ ನೇರಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇದಕ್ಕಾಗಿ ಯಾವುದೇ ರೀತಿಯ ಚಿಂತೆಯ ಅಗತ್ಯವಿಲ್ಲ. ಬಜೆಟ್ ಅನ್ನು ಯಾವಾಗ ಮತ್ತು ಎಲ್ಲಿ ಲೈವ್ ಆಗಿ ವೀಕ್ಷಿಸಬಹುದು ಎನ್ನುವ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

Written by - Ranjitha R K | Last Updated : Jan 30, 2024, 09:55 AM IST
  • ಇನ್ನೆರಡು ದಿನಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ.
  • ನಿರ್ಮಲಾ ಸೀತಾರಾಮನ್ ದೇಶದ ಬಜೆಟ್ ಮಂಡಿಸಲಿದ್ದಾರೆ.
  • ಬಜೆಟ್‌ಗೆ ಸಂಬಂಧಿಸಿದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ.
Budget 2024 : ಬಜೆಟ್ ಭಾಷಣವನ್ನು ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬಹುದು? Budget ಪ್ರಕ್ರಿಯೆಯ ಸಂಪೂರ್ಣ ಟೈಮ್ ಟೇಬಲ್ ಇಲ್ಲಿದೆ.  title=

Budget 2024 : ಇನ್ನೆರಡು ದಿನಗಳಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಫೆ.1 ರಂದು  ಹಣಕಾಸು  ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಬಜೆಟ್ ಮಂಡಿಸಲಿದ್ದಾರೆ.ಬಜೆಟ್‌ಗೆ ಸಂಬಂಧಿಸಿದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ದೇಶದ ಬಜೆಟ್‌ನಿಂದ ಪ್ರತಿಯೊಬ್ಬರೂ ಯಾವಾಗಲೂ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಬಾರಿಯ ಬಜೆಟ್ ಲೋಕಸಭೆ ಚುನಾವಣೆಗೆ ಮುನ್ನ ಮಂಡಿಸಲಾಗುತ್ತಿರುವ ಲೆಕ್ಕಪತ್ರವಾಗಿರುವ ಕಾರಣ ಈ  ಮಧ್ಯಂತರ ಬಜೆಟ್ ಅನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತಿದೆ. 

ಬಜೆಟ್‌ನ ಭಾಷಣದ ನೇರಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ ಇದಕ್ಕಾಗಿ ಯಾವುದೇ ರೀತಿಯ ಚಿಂತೆಯ ಅಗತ್ಯವಿಲ್ಲ. ಬಜೆಟ್ ಅನ್ನು ಯಾವಾಗ ಮತ್ತು ಎಲ್ಲಿ ಲೈವ್ ಆಗಿ ವೀಕ್ಷಿಸಬಹುದು ಎನ್ನುವ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ. 

ಇದನ್ನೂ ಓದಿ : GK Quiz: ಭಾರತದಲ್ಲಿ ಒಟ್ಟು ಎಷ್ಟು ಅಂಚೆ ಕಚೇರಿಗಳಿವೆ ನಿಮಗೆ ತಿಳಿದಿದೆಯಾ?

ಫೆಬ್ರವರಿ 1 ರಂದು ಬಜೆಟ್ ಮಂಡನೆ :
ಫೆಬ್ರವರಿ 1 ರಂದು ಹಣಕಾಸು ಸಚಿವರು ದೇಶದ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಲಿದೆ. 

ಯಾವ ಸಮಯಕ್ಕೆ ಬಜೆಟ್ ಮಂಡಿಸಲಾಗುತ್ತದೆ?
ಬೆಳಗ್ಗೆ 11 ಗಂಟೆಯಿಂದ ಹಣಕಾಸು ಸಚಿವರು ಬಜೆಟ್ ಮಂಡನೆ ಆರಂಭಿಸುತ್ತಾರೆ. ಬಜೆಟ್ ಭಾಷಣವು ಸುಮಾರು ಒಂದು ಗಂಟೆ ಇರುತ್ತದೆ. ಕೆಲವೊಮ್ಮೆ ಇದು ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಕೂಡಾ ಇದೆ.  

ಇದನ್ನೂ ಓದಿ : Union Budget 2024: ಸ್ವತಂತ್ರ ಬಿಸ್ನೆಸ್ ಮಾಡುವವರಿಗೊಂದು ಭಾರಿ ದೊಡ್ಡ ಸಂತಸದ ಸುದ್ದಿ!

ಬಜೆಟ್ ಅನ್ನು ನೀವು ಎಲ್ಲಿ ಲೈವ್ ಆಗಿ ವೀಕ್ಷಿಸಬಹುದು?
ನಿಮ್ಮ ಮನೆಯಲ್ಲೇ ಕುಳಿತು ಬಜೆಟ್ ಅನ್ನು ಲೈವ್ ಆಗಿ ವೀಕ್ಷಿಸಬಹುದು.ದೂರದರ್ಶನ, Sansad TV, ಹಣಕಾಸು ಸಚಿವಾಲಯದ ಚಾನಲ್, PIB ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಜೆಟ್ ಣ ನೇರ ಪ್ರಸಾರ ವೀಕ್ಷಿಸಬಹುದು. ಇದಲ್ಲದೆ, ಯಾವುದೇ ಸುದ್ದಿ ವಾಹಿನಿಯಲ್ಲಿ ಬಜೆಟ್‌ನ ನೇರ ಪ್ರಸಾರವನ್ನು ವೀಕ್ಷಿಸಬಹುದು. 

ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗುವುದಿಲ್ಲ : 
ಆರ್ಥಿಕ ಸಮೀಕ್ಷೆಯನ್ನು ಯಾವಾಗಲೂ ಬಜೆಟ್‌ಗೆ ಮುನ್ನ ಮಂಡಿಸಲಾಗುತ್ತದೆ.ಆದರೆ ಈ ಬಾರಿ ಸರ್ಕಾರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದಿಲ್ಲ. ಮಧ್ಯಂತರ ಬಜೆಟ್‌ಗೆ ಮೊದಲು ಆರ್ಥಿಕ ಸಮೀಕ್ಷೆಯನ್ನು ಮಂಡಿಸುವ ಕ್ರಮ ಇಲ್ಲ. ಚುನಾವಣಾ ವರ್ಷವಾಗಿರುವ ಕಾರಣ ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಾಗುವುದು. ಹಣಕಾಸು ಸಚಿವಾಲಯದ ಪ್ರಕಾರ, ಸಾರ್ವತ್ರಿಕ ಚುನಾವಣೆಯ ನಂತರ ಮಂಡಿಸಲಿರುವ ಸಂಪೂರ್ಣ ಬಜೆಟ್‌ಗೆ ಮೊದಲು ಆರ್ಥಿಕ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News