Edible Oil Prices: ಆಮದು ಸುಂಕದಲ್ಲಿ ಕಡಿತ, ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ

ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು. 

Written by - Ranjitha R K | Last Updated : Aug 20, 2021, 04:17 PM IST
  • ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ
  • ಆಮದು ಸುಂಕ ಕಡಿತಗೊಳಿಸಿದ ಸರ್ಕಾರ
  • ಸಾಮಾನ್ಯ ಜನರಿಗೆ ಸಿಗಲಿದೆ ನೇರ ಲಾಭ
Edible Oil Prices: ಆಮದು ಸುಂಕದಲ್ಲಿ ಕಡಿತ, ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ title=
ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ (file photo)

ನವದೆಹಲಿ :  Edible Oil Prices: ಬೆಲೆ ಏರಿಕೆಯ ಈ ಸಮಯದಲ್ಲಿ ಅಡುಗೆ ಅನಿಲ ಸ್ವಲ್ಪ ಮಟ್ಟಿನ ಪರಿಹಾರ ನೀಡಲಿದೆ. ಸರ್ಕಾರವು ಸೋಯಾ ಎಣ್ಣೆ (Soya oil)ಮತ್ತು ಸೂರ್ಯಕಾಂತಿ ಎಣ್ಣೆಯ (Sunflower oil) ಆಮದು ಸುಂಕವನ್ನು 15% ರಿಂದ 7.5% ಕ್ಕೆ ಇಳಿಸಿದೆ. ಈ ಹಿಂದೆ ಸರ್ಕಾರವು ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಕಡಿತಗೊಳಿಸಿತ್ತು. ಈಗ ನೋಡಿದರೆ, ಎಲ್ಲಾ ತೆರಿಗೆಗಳನ್ನು ಸೇರಿಸಿ ಪರಿಣಾಮ ಸುಂಕ ಕಡಿತವನ್ನು 8.25% ಕ್ಕೆ ಇಳಿಸಲಾಗಿದೆ. ಒಟ್ಟು ಸುಂಕ 38.50 ಶೇಕಡದಿಂದ 30.25 ಕ್ಕೆ ಇಳಿದಿದೆ. 

ಸಾಮಾನ್ಯ ಜನರಿಗೆ ನೇರ ಲಾಭ : 
ಆಮದು ಸುಂಕ ಕಡಿತದ ನೇರ ಪರಿಣಾಮ ಸಾಮಾನ್ಯ ಜನರ ಕಿಚನ್ ಬಜೆಟ್ (Kitchen budget)ಮೇಲೆ ಬೀರಲಿದೆ. ಆದರೆ, ಈ ಆಮದು ಸುಂಕದ ಕಡಿತವು ಸೆಪ್ಟೆಂಬರ್ 30 ರವರೆಗೆ ಮಾತ್ರ ಅನ್ವಯವಾಗಲಿದೆ. ಪ್ರಸ್ತುತ, ಸರ್ಕಾರವು ವಾರ್ಷಿಕವಾಗಿ 15 ಮಿಲಿಯನ್ ಟನ್ ಖಾದ್ಯ ತೈಲವನ್ನು (Edible Oil) ಆಮದು ಮಾಡಿಕೊಳ್ಳುತ್ತದೆ. ಇದರ ಬೆಲೆ ಸುಮಾರು 70,000 ಕೋಟಿ ರೂ. ತಾಳೆ ಎಣ್ಣೆಯನ್ನು (Palm oil) ಮಲೇಷ್ಯಾ ಮತ್ತು ಇಂಡೋನೇಷ್ಯಾ ಎರಡರಿಂದಲೂ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತವು ಕಳೆದ ವರ್ಷ ಮಲೇಷ್ಯಾ ಮತ್ತು ಇಂಡೋನೇಷಿಯಾದಿಂದ 7.2 ಮಿಲಿಯನ್ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಂಡಿದೆ. ಒಟ್ಟು ಆಮದುಗಳಲ್ಲಿ ತಾಳೆ ಎಣ್ಣೆಯ ಪಾಲು ಸುಮಾರು 55 ಪ್ರತಿಶತ. ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ 34 ಲಕ್ಷ ಟನ್ ಸೋಯಾ ಎಣ್ಣೆಯನ್ನು (Soya oil) ಆಮದು ಮಾಡಿಕೊಳ್ಳಲಾಗಿದೆ ಮತ್ತು 2.5 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು (Sun flower oil) ರಷ್ಯಾ ಮತ್ತು ಉಕ್ರೇನ್ ನಿಂದ ಆಮದು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ : ಗ್ರಾಮೀಣ ಭಾಗದಲ್ಲಿ Honda ಮೋಟಾರ್ಸ್ ಸಾವಿರ ಹೊಸ ಗ್ರಾಹಕ ಕೇಂದ್ರ

ಸಂಪುಟದಲ್ಲಿ ಘೋಷಣೆ :
ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ (Cabinet meet) ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು.  ಖಾದ್ಯ ತೈಲಗಳ ವಿಷಯದಲ್ಲಿ ಭಾರತವನ್ನು ಆತ್ಮ ನಿರ್ಭರ (Atma nirbhar) ಮಾಡುವ ಉದ್ದೇಶದಿಂದ ಸರ್ಕಾರ (central government) ಈ ಕ್ರಮ ಕೈಗೊಂಡಿದೆ. ಸರ್ಕಾರದ ಈ ಧ್ಯೇಯವು ತಾಳೆ ಎಣ್ಣೆಯ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ. ತೈಲ ಉದ್ಯಮಕ್ಕೂ ಇದು ಪ್ರಯೋಜನವಾಗಲಿದೆ. 

ಇದನ್ನೂ ಓದಿ : EPFO ಖಾತೆದಾರರಿಗೊಂದು ಮಹತ್ವದ ಸುದ್ದಿ! ಇಂದೇ ಈ ಕೆಲಸ ಮುಗಿಸಿ... ಇಲ್ದಿದ್ರೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News