ಸರ್ಕಾರವು ಅಡುಗೆಗೆ(Cooking Oil) ಬಳಸುವ ಪಾಮ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಕೃಷಿ ಸೆಸ್ ಮತ್ತು ಕಸ್ಟಮ್ ಸುಂಕವನ್ನು ಕಡಿಮೆ ಮಾಡಿದೆ. ಈ ಹಿಂದೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ತೈಲ ಮತ್ತು ಎಣ್ಣೆಬೀಜಗಳ ಮೇಲೆ ಸ್ಟಾಕ್ ಮಿತಿಗಳನ್ನು ವಿಧಿಸಲು ಆದೇಶ ಹೊರಡಿಸಿತ್ತು. ಸ್ಟಾಕ್ ಮಿತಿ ಮಾರ್ಚ್ 31, 2022 ರವರೆಗೆ ಅನ್ವಯವಾಗುತ್ತದೆ. ಆದೇಶಗಳನ್ನು ಹೊರಡಿಸಲು ಮತ್ತು ಅದನ್ನು ಕಟ್ಟುನಿಟ್ಟಾಗಿ ಅನುಸರಿಸಲು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.
ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು.
ಅಕ್ಟೋಬರ್ 1 ರಿಂದ ಸಾಸಿವೆ ಎಣ್ಣೆಯಲ್ಲಿ ಮಿಶ್ರಣ ಮಾಡುವುದನ್ನು ನಿಷೇಧಿಸಿರುವುದರಿಂದ ಬೆಲೆಗಳೂ ಹೆಚ್ಚಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ ಹಬ್ಬದಂದು ಬಳಸುವ ಸಾಸಿವೆ ಎಣ್ಣೆಯಿಂದ ಅಡುಗೆಮನೆಯ ಬಜೆಟ್ ಕೂಡ ಹೆಚ್ಚಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.