Finance Minister Nirmala Sitharaman: ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ನಿರ್ಮಲಾ ಸೀತಾರಾಮನ್ ಪಡೆಯುವ ವೇತನ ಎಷ್ಟು ಗೊತ್ತಾ ?

Finance Minister Nirmala Sitharaman:ಹಣಕಾಸು ಸಚಿವರು ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಲಿದೆ. ದೇಶದ ಅರ್ಥ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಹಣಕಾಸು ಸಚಿವರು ಪಡೆಯುತ್ತಿರುವ ವೇತನ ಎಷ್ಟು ಗೊತ್ತಾ ? 

Written by - Ranjitha R K | Last Updated : Jan 30, 2024, 12:46 PM IST
  • ನಿರ್ಮಲಾ ಸೀತಾರಾಮನ್ ಆರನೇ ಬಾರಿಗೆ ದೇಶದ ಬಜೆಟ್ ಮಂಡಿಸಲಿದ್ದಾರೆ.
  • ಸಚಿವರು ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ
  • ಈ ಮೂಲಕ ಅವರ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಲಿದೆ.
Finance Minister Nirmala Sitharaman:  ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ನಿರ್ಮಲಾ ಸೀತಾರಾಮನ್ ಪಡೆಯುವ ವೇತನ ಎಷ್ಟು ಗೊತ್ತಾ ?  title=

Finance Minister Nirmala Sitharaman : ಫೆಬ್ರವರಿ 1 ರಂದು ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರನೇ ಬಾರಿಗೆ ದೇಶದ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರು ಈ ಬಾರಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಅವರ ಹೆಸರಿನಲ್ಲಿ ಹಲವು ದಾಖಲೆಗಳು ದಾಖಲಾಗಲಿದೆ. ಸತತ 5 ಪೂರ್ಣ ಬಜೆಟ್ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಈ ಮೂಲಕ ನಿರ್ಮಲಾ ಸೀತಾರಾಮನ್ ಸರಿಗಟ್ಟಲಿದ್ದಾರೆ. ಅಷ್ಟೇ ಅಲ್ಲ, ಮೊದಲ ಪೂರ್ಣಾವಧಿ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಕೂಡಾ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. 

ಸೇಲ್ಸ್ ಗರ್ಲ್ ಆಗಿ ವೃತ್ತಿ ಜೀವನ ಆರಂಭ : 
ಐದು ಪೂರ್ಣ ಬಜೆಟ್ ಮಂಡಿಸಿ, ದೇಶದ ಆರ್ಥಿಕತೆಯನ್ನು ನೋಡಿಕೊಳ್ಳುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜಕೀಯ ಕುಟುಂಬದಿಂದ ಬಂದವರಲ್ಲ. ತಮಿಳುನಾಡಿನ ಸಾಮಾನ್ಯ ಕುಟುಂಬದಿಂದ ಬಂದ ನಿರ್ಮಲಾ ಅವರು ಸೇಲ್ಸ್ ಗರ್ಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದವರು. ಆದರೆ ಬಿಜೆಪಿ ಸೇರುವ ಮೂಲಕ ಕಡಿಮೆ ಸಮಯದಲ್ಲಿ ದೇಶದ ಹಣಕಾಸು ಸಚಿವೆಯ ಸ್ಥಾನವನ್ನು ಅಲಂಕರಿಸುವಂತಾಯಿತು. ಅವರು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಪರಿಗಣಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ :  OPS in Karnataka : ಹಳೆ ಪಿಂಚಣಿ ಯೋಜನೆಯ ಲಾಭ ನಿಮಗೂ ಸಿಗಬೇಕಾದರೆ ಹೀಗೆ ಅರ್ಜಿ ಸಲ್ಲಿಸಿ : ಈ ದಾಖಲೆಗಳು ನಿಮ್ಮ ಬಳಿ ಇರಲೇ ಬೇಕು

ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು : 
ನಿರ್ಮಲಾ ಸೀತಾರಾಮನ್ ಅವರು 18 ಆಗಸ್ಟ್ 1959 ರಂದು ತಮಿಳುನಾಡಿನ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ತಂದೆ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪದೇ ಪದೇ ವರ್ಗಾವಣೆಯಾಗುತ್ತಿತ್ತು. ಇದರಿಂದಾಗಿ ಅವರ ಶಿಕ್ಷಣವೂ ಬೇರೆ ಬೇರೆ ನಗರಗಳಲ್ಲಿ ಮುಂದುವರೆಯಿತು. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ನಂತರ ಸ್ನಾತಕೋತ್ತರ ಪದವಿಗಾಗಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಇಂಡೋ-ಯುರೋಪಿಯನ್ ಜವಳಿ ವ್ಯಾಪಾರದಲ್ಲಿ ತಮ್ಮ ಪಿಎಚ್‌ಡಿ ಸಂಶೋಧನೆ ಮಾಡಿದರು. ಇಲ್ಲಿಯೇ ಡಾ.ಪರಕಾಲ ಪ್ರಭಾಕರ್ ಅವರನ್ನು ಭೇಟಿಯಾಗಿ ನಂತರ ಅವರನ್ನೇ ವಿವಾಹವಾದರು.  

ಲಂಡನ್‌ನಲ್ಲಿ ಸೇಲ್ಸ್ ಗರ್ಲ್ ಕೆಲಸ  :
ಪತಿ ಅಧ್ಯಯನಕ್ಕಾಗಿ ಲಂಡನ್‌ಗೆ ಹೋದಾಗ ನಿರ್ಮಲಾ ಕೂಡ ಅವರೊಂದಿಗೆ ಹೋಗಿದ್ದರು. ಈ ಸಮಯದಲ್ಲಿ, ಅವರು ಮನೆ ಅಲಂಕಾರಿಕ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದ್ದಾರೆ. ನಂತರ ಅವರು ಲಂಡನ್‌ನ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಪ್ರೈಸ್ ವಾಟರ್ ಹೌಸ್ ಹೆಸರಿನ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿರುವ ಅನುಭವ ಇದೆ. ನಂತರ ಅವರು ಭಾರತಕ್ಕೆ ಹಿಂದಿರುಗಿ ಹೈದರಾಬಾದ್‌ನ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿಯಲ್ಲಿ  ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.  

ಇದನ್ನೂ ಓದಿ : ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆ ಪ್ರಕಟಿಸಿದ Paytm

ಅತ್ತೆ ಮಾವ ಕಾಂಗ್ರೆಸ್ ಹಿನ್ನೆಲೆಯವರು :
ನಿರ್ಮಲಾ ಸೀತಾರಾಮನ್ ಅವರ ಅತ್ತೆ ಮತ್ತು ಮಾವ ಕಾಂಗ್ರೆಸ್ ನಾಯಕರು. ಪರಕಾಲ ಪ್ರಭಾಕರ್ ಅವರ ಪೋಷಕರು ಕಾಂಗ್ರೆಸ್ಸಿನ ಖ್ಯಾತ ರಾಜಕಾರಣಿಗಳು. ಆದರೂ ಅವರು ಎಂದಿಗೂ ತಮ್ಮ ಸಿದ್ಧಾಂತವನ್ನು ತಮ್ಮ ಮಕ್ಕಳ ಮೇಲೆ ಹೇರಲಿಲ್ಲ. ಅತ್ತೆಗೆ ಕಾಂಗ್ರೆಸ್ ಹಿನ್ನೆಲೆ ಇದ್ದರೂ ನಿರ್ಮಲಾ ಸೀತಾರಾಮನ್ 2008ರಲ್ಲಿ ಬಿಜೆಪಿ ಸೇರಿದರು. ಅವರನ್ನು ಪಕ್ಷದ ವಕ್ತಾರರನ್ನಾಗಿ ಮಾಡಲಾಯಿತು.2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಮೋದಿ ಸರ್ಕಾರದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಸಿಕ್ಕಿತು. 2016 ರಲ್ಲಿ ಸಂಪುಟ ವಿಸ್ತರಣೆಯಲ್ಲಿ, ಅವರು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ  ಜವಾಬ್ದಾರಿಯನ್ನು ಪಡೆದರು. 

ಹಣಕಾಸು ಸಚಿವರ ಕುರ್ಚಿ : 
2017ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ರಕ್ಷಣಾ ಸಚಿವೆಯ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್‌ ಅವರಿಗೆ ಹಸ್ತಾಂತರಿಸಲಾಯಿತು. 2019 ರಲ್ಲಿ ಅವರಿಗೆ ಪೂರ್ಣಾವಧಿಯ ಹಣಕಾಸು ಸಚಿವರ ಜವಾಬ್ದಾರಿಯನ್ನು ನೀಡಲಾಯಿತು. ನಿರ್ಮಲಾ ಅವರು ಬಿಜೆಪಿ ಸರ್ಕಾರದ ಬೆನ್ನೆಲುಬು ಎಂಬುದನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. 

ಇದನ್ನೂ ಓದಿ : Budget 2024 : ಬಜೆಟ್ ಭಾಷಣವನ್ನು ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬಹುದು? Budget ಪ್ರಕ್ರಿಯೆಯ ಸಂಪೂರ್ಣ ಟೈಮ್ ಟೇಬಲ್ ಇಲ್ಲಿದೆ.

 ಹಣಕಾಸು ಸಚಿವರ ವೇತನ ಎಷ್ಟು? : 
ಕ್ಯಾಬಿನೆಟ್ ಸಚಿವರಾಗಿ, ಹಣಕಾಸು ಸಚಿವರು ಪ್ರತಿ ತಿಂಗಳು 1,00,000 ರೂ ಮೂಲ ವೇತನವನ್ನು ಪಡೆಯುತ್ತಾರೆ. ಇದಲ್ಲದೇ ಕ್ಷೇತ್ರ ಭತ್ಯೆ 70 ಸಾವಿರ, ಅಧಿಕೃತ ಭತ್ಯೆ 60 ಸಾವಿರ, ಆತಿಥ್ಯ ಭತ್ಯೆ 2 ಸಾವಿರ ರೂ.ಪಡೆಯುತ್ತಾರೆ. ಇದಲ್ಲದೇ ಬಂಗಲೆ, ಸಿಬ್ಬಂದಿ, ಕಾರು ಹೀಗೆ ಎಲ್ಲ ಸೌಲಭ್ಯಗಳೂ ಲಭ್ಯ. ಇವರ ನೆಟ್ ವರ್ತ್ ಎಷ್ಟು ಎಂದು ನೋಡುವುದಾದರೆ ನಿರ್ಮಲಾ ಸೀತಾರಾಮನ್  99,36,000 ಲಕ್ಷ ರೂಪಾಯಿ ಮೌಲ್ಯದ ಮನೆ ಮತ್ತು 16,02,000 ಲಕ್ಷ ರೂಪಾಯಿ ಮೌಲ್ಯದ ಕೃಷಿಯೇತರ ಭೂಮಿ ಹೊಂದಿದ್ದಾರೆ. ಅವರ ಬಳಿ ಸ್ಕೂಟರ್, 7,87,500 ಲಕ್ಷ ಮೌಲ್ಯದ ಚಿನ್ನ, 80 ಸಾವಿರ ಮೌಲ್ಯದ ಬೆಳ್ಳಿ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News