Central Data: 2022 ರ ಡಿಜಿಟಲ್‌ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ

Digital Payment : ಡಿಜಿಟಲ್‌ ಪಾವತಿ ವಹಿವಾಟಿಗೆ ಸಂಬಂಧಿಸಿ 2022ರ ವಿಶ್ವದ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಜೂನ್‌ 10) ಬಿಡುಗಡೆಗೊಳಿಸಿದ ದತ್ತಾಂಶ ತಿಳಿಸಿದೆ.   

Written by - Savita M B | Last Updated : Jun 11, 2023, 11:30 AM IST
  • ಡಿಜಿಟಲ್‌ ಪಾವತಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ
  • ಕಳೆದ 9 ವರ್ಷಗಳಲ್ಲಿ ಇದು ಅತ್ಯಧಿಕವಾಗಿದೆ.
  • ಈ ಕುರಿತು ಮೈ ಗವರ್ನ್‌ಮೆಂಟ್‌ ಇಂಡಿಯಾ ಟ್ವಿಟ್‌ ಮಾಡಿದೆ.
Central Data: 2022 ರ ಡಿಜಿಟಲ್‌ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ  title=

Online Transaction : ಭಾರತ ಇದೀಗ ನಗದು ರಹಿತ ವ್ಯವಹಾರದಲ್ಲಿ ಇತರ ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತವು ಸದ್ಯಕ್ಕೆ ನಗದು ರಹಿತ ಎಂದರೆ ಡಿಜಿಟಲ್‌ ವ್ಯಹಾರದಲ್ಲಿ ಇತರ ಎಲ್ಲ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಸರ್ಕಾರ ವರದಿ ಮಾಡಿದೆ. 2022 ರಲ್ಲಿ ಭಾರತವು ಜಾಗತಿಕ ಆನ್‌ಲೈನ್‌ ಪಾವತಿಯಲ್ಲಿ ಶೇ. 46ರಷ್ಟು ಪಾಲು ಹೊಂದಿದೆ. ಅಲ್ಲದೆ ಡಿಜಿಟಲ್‌ ಪಾವತಿಯ ವಹಿವಾಟಿನಲ್ಲಿ ದಾಖಲೆಯನ್ನೆ ಸೃಷ್ಠಿಸಿದ್ದು, ಡಿಜಿಟಲ್‌ ಪಾವತಿಯಲ್ಲಿರುವ ನಂತರದ ನಾಲ್ಕು ಸ್ಥಾನಗಳನ್ನು ಅಲಂಕರಿಸಿರುವ ಒಟ್ಟುಗೂಡಿಸಿದರೂ ಭಾರತದ ವಹಿವಾಟು ಅದಕ್ಕಿಂತ ಹೆಚ್ಚಾಗಿಯೇ ಇದೆ. 

ಇದನ್ನೂ ಓದಿ-Rajnath Singh: 2027 ರವರೆಗೆ ಭಾರತ ವಿಶ್ವದ ಟಾಪ್-3 ಅರ್ಥವ್ಯವಸ್ಥೆಗಳಲ್ಲಿ ಒಂದಾಗಲಿದೆ ಎಂದ ರಾಜನಾಥ್ ಸಿಂಗ್

ಈ ಮೂಲಕ ಭಾರತವು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಈ ಕುರಿತು ಭಾರತ ಸರ್ಕಾರದ ನಾಗರಿಕ ಭಾಗವಹಿಸುವಿಕೆಯ ವೇದಿಕೆಯಾದ ಮೈ ಗವರ್ನ್‌ಮೆಂಟ್‌ ಇಂಡಿಯಾ ಟ್ವಿಟ್‌ ಮಾಡಿದೆ. 

"ಡಿಜಿಟಲ್‌ ಪಾವತಿ ವ್ಯವಹಾರದಲ್ಲಿ ಭಾರತ ತನ್ನ ಅಧಿಪತ್ಯವನ್ನು ಮುಂದುವರೆಸುತ್ತಿದೆ. ವಿನೂತನ ಪರಿಹಾರ, ಹೊಸ ತಂತ್ರಜ್ಞಾನ, ಕೈಗೆಟುಕುವ ಹಾಗೂ ಸರಳವಾಗಿರುವ ಪಾವತಿ ವ್ಯವಸ್ಥೆ ಮೂಲಕ ಭಾರತ ಅತೀ ದೊಡ್ಡ ನಗದು ರಹಿತ ವ್ಯವಹಾರದ ಆರ್ಥಿಕತೆಯಾಗಿ ಹೊರಹೊಮ್ಮಿದೆ" ಎಂದು ತಿಳಿಸಿದೆ. 

ಇದನ್ನೂ ಓದಿ-Today Gold Price : ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌, ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ನಗದು ರಹಿತ ಪಾವತಿಯಲ್ಲಿ 2022ರಲ್ಲಿ ಅಗ್ರಸ್ಥಾನ ಪಡೆದ ವಿಶ್ವದ ರಾಷ್ಟ್ರಗಳು ಇಲ್ಲಿವೆ ನೋಡಿ : ಭಾರತ-8.95 ಕೋಟಿ ವಹಿವಾಟು,  ಬ್ರೆಜಿಲ್‌-2.92ಕೋಟಿ, ಚೀನಾ-1.76 ಕೋಟಿ, ಥಾಯ್ಲೆಂಡ್‌-1.65 ಕೋಟಿ ಮತ್ತು ದಕ್ಷಿಣ ಕೊರಿಯಾ-80 ಲಕ್ಷ ವಹಿವಟು ನಡೆಸಿವೆ ಎಂದು ಡೇಟಾ ಹೇಳಿದೆ. 

ಕಳೆದ 9 ವರ್ಷದಲ್ಲಿ ಭಾರತ ಡಿಜಿಟಲ್‌ ಇಂಡಿಯಾ ಮೂಲಕ ಬಹುದೂರ ಸಾಗಿದೆ. ಭಾರತದಲ್ಲಿ ಕೃತಕ ಬುದ್ಧಿ ಮತ್ತೆ ನಿರ್ವಹಣೆಯನ್ನು ಡಿಜಿಟಲ್‌ ನಾಗರಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಲಲಾಗುತ್ತದೆ ಎಂದು ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News