ITR Refund ಸಂಬಂಧಿತ ಈ ಮೆಸೇಜ್ ಬಗ್ಗೆ ಇರಲಿ ಎಚ್ಚರ!

ITR Refund Fraud: ಈ ತಂತ್ರಜ್ಞಾನ ಯುಗದಲ್ಲಿ ವಂಚಕರು ಹೊಸ ಹೊಸ ರೀತಿಯಲ್ಲಿ ಜನರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಟಿಆರ್ ಮರುಪಾವತಿಗೆ ಸಂಬಂಧಿಸಿದ ಸಂದೇಶ ಕಳುಹಿಸುವ ಮೂಲಕ ವಂಚನೆಗಳು ಮುನ್ನಲೆಗೆ ಬರುತ್ತಿವೆ. 

Written by - Yashaswini V | Last Updated : Jan 22, 2024, 09:47 AM IST
  • ಪ್ರಸ್ತುತ ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್/ಗ್ಯಾಜೆಟ್‌ಗಳು ಇದ್ದೇ ಇರುತ್ತದೆ.
  • ಹೆಚ್ಚಾದ ಮೊಬೈಲ್ ಫೋನ್/ಗ್ಯಾಜೆಟ್‌ಗಳ ಬಳಕೆಯೂ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಸಾಧನಗಳಾಗಿವೆ.
  • ಆದಾಯ ತೆರಿಗೆ ಹೆಸರಿನಲ್ಲಿ ಇತ್ತೀಚೆಗೆ ಅಂತಹದ್ದೇ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ.
ITR Refund ಸಂಬಂಧಿತ ಈ ಮೆಸೇಜ್ ಬಗ್ಗೆ ಇರಲಿ ಎಚ್ಚರ!  title=

ITR Refund Fraud: ಪ್ರಸ್ತುತ ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್ ಫೋನ್/ಗ್ಯಾಜೆಟ್‌ಗಳು ಇದ್ದೇ ಇರುತ್ತದೆ. ಇವು ಕುಳಿತಿರುವಲ್ಲಿಯೇ ನಮ್ಮ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಲು ತುಂಬಾ ಸಹಕಾರಿ. ತಂತ್ರಜ್ಞಾನ ಮುಂದುವರೆದಂತೆ ಅದು ನಮ್ಮ ಬಹುತೇಕ ಕೆಲಸಗಳನ್ನು ಬಹಳ ಸುಲಭಗೊಳಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಕೆಲವು ವಂಚಕರು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ. ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡ ಹೆಚ್ಚಾಗಿದ್ದು, ಪ್ರಸ್ತುತ ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿರುವುದು ಮುನ್ನಲೆಗೆ ಬಂದಿದೆ. 

ಹೌದು, ಸದ್ಯ ಐಟಿಆರ್ ಮರುಪಾವತಿ ಹೆಸರಿನಲ್ಲಿ ಸೈಬರ್ ಕ್ರೈಮ್ ಅಪರಾಧಿಗಳು ಜನರನ್ನು ವಂಚನೆಯ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ. ನೀವೂ ಸಹ ಐ‌ಟಿ‌ಆರ್ ಮರುಪಾವತಿಗೆ ಸಂಬಂಧಿಸಿದಂತೆ ಇಂತಹ ಸಂದೇಶಗಳನ್ನು ಸ್ವೀಕರಿಸಿದ್ದರೆ ಎಚ್ಚರ! ಎಚ್ಚರ! 

ಐಟಿಆರ್ ಮರುಪಾವತಿ ಹೆಸರಿನಲ್ಲಿ ವಂಚಕರು ಕಳುಹಿಸುತ್ತಿರುವ ಸಂದೇಶ ಈ ಕೆಳಕಂಡಂತಿದೆ: 
"ನಿಮ್ಮ 15,490/- ತೆರಿಗೆ ಮರುಪಾವತಿಯನ್ನು ಅನುಮೋದಿಸಲಾಗಿದೆ, ಈ ಮೊತ್ತವನ್ನು ನಿಮ್ಮ ಖಾತೆ ಸಂಖ್ಯೆ 5xxxxx6755 ಗೆ ಜಮಾ ಮಾಡಲಾಗುತ್ತದೆ. ಇದು ಸರಿಯಾಗಿಲ್ಲದಿದ್ದರೆ, ದಯವಿಟ್ಟು ಕೆಳಗಿನ ಲಿಂಕ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಬ್ಯಾಂಕ್ ಖಾತೆ ಮಾಹಿತಿಯನ್ನು ನವೀಕರಿಸಿ" ಎಂದು ಸಂದೇಶ ಕಳುಹಿಸಲಾಗುತ್ತಿದೆ. 

ಇದನ್ನೂ ಓದಿ- Union Budget 2024: ಇನ್ಫ್ರಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಸಾಧ್ಯತೆ, ವೇತನ ವರ್ಗದ ಜನರಿಗೂ ಸಿಗಲಿದೆ ನೆಮ್ಮದಿಯ ಸುದ್ದಿ!

ಒಂದೊಮ್ಮೆ ನೀವು ಸಹ ಐ‌ಟಿ‌ಆರ್ ಮರುಪಾವತಿಗೆ ಸಂಬಂಧಿಸಿದಂತೆ ಇಂತಹ ಸಂದೇಶವನ್ನು ಸ್ವೀಕರಿಸಿದ್ದರೆ ಅಪ್ಪಿತಪ್ಪಿಯೂ ಸಂದೇಶದಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ವಾಸ್ತವವಾಗಿ, ಇದು ಹೊಸ ಫಿಶಿಂಗ್ ಹಗರಣವಾಗಿದ್ದು, ಇದರಲ್ಲಿ ಬಳಕೆದಾರರು ತಪ್ಪು ಬ್ಯಾಂಕ್ ಖಾತೆ ಸಂಖ್ಯೆಗಳೊಂದಿಗೆ ಆದಾಯ ತೆರಿಗೆ ರಿಟರ್ನ್ ಮರುಪಾವತಿ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಐ‌ಟಿ‌ಆರ್ ಹಣ ಪಡೆಯುವ ಉದ್ದೇಶದಿಂದಾಗಿ ಸಂದೇಶದಲ್ಲಿ ನೀಡಲಾದ ಲಿಂಕ್ ಗೆ ಹೋಗುವ ಮೂಲಕ ಅವರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ.

ಈ ರೀತಿ ಅನಾಮಧೇಯ ಲಿಂಕ್ ಕ್ಲಿಕ್ ಮಾಡಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಶೇರ್ ಮಾಡುವುದರಿಂದ ವಂಚಕರು ವೈಯಕ್ತಿಕ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಅವರ ರಿಟರ್ನ್ಸ್‌ನಲ್ಲಿ ಅಕ್ರಮಗಳನ್ನು ಉಲ್ಲೇಖಿಸಿ ದಂಡದ ಹೆಸರಿನಲ್ಲಿ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಲೂಟಿ ಮಾಡುತ್ತಾರೆ. ಹಾಗಾಗಿ ಇಂತಹ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. 

ಇದನ್ನೂ ಓದಿ- Business Idea: ಟೀ ಮಾರಾಟದ ಬಿಸ್ನೆಸ್ ಆರಂಭಿಸಿ ತಿಂಗಳಿಗೆ ₹1 ಲಕ್ಷ ಸಂಪಾದಿಸಿ, ಈ ರೀತಿ 'ಚಾಯ್ ಸುಟ್ಟಾ ಬಾರ್' ಫ್ರಾಂಚೈಸಿ ಪಡೆದುಕೊಳ್ಳಿ!

ಇಂತಹ ಸೈಬರ್ ಕ್ರೈಂ ವಂಚನೆಗಳಿಂದ ರಕ್ಷಣೆಗಾಗಿ ಏನು ಮಾಡಬೇಕು? 
ಈ ರೀತಿಯ ವಂಚನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಂತಹ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಈ ಕೆಳಗೆ ನೀಡಲಾದ ಸಲಹೆಗಳನ್ನು ಅನುಸರಿಸಿ... 
* ಸಂದೇಶವು ಬಂದ ಸಂಖ್ಯೆಯನ್ನು ವರದಿ ಮಾಡುವುದು
* ಇಂತಹ ಸಂದೇಶಗಳಿಗೆ ಉತ್ತರಿಸದಿರುವುದು
* ಸಂದೇಶದಲ್ಲಿ ನೀಡಲಾಗಿರುವ ಯಾವುದೇ ಲಿಂಕ್ ಅಥವಾ ಲಗತ್ತನ್ನು ಕ್ಲಿಕ್ ಮಾಡದಿರುವುದು 
* ನಿಮ್ಮ ಕಂಪ್ಯೂಟರ್‌ನಲ್ಲಿ ಆಂಟಿ-ವೈರಸ್ ಮತ್ತು ಆಂಟಿ-ಸ್ಪೈವೇರ್ ಸಾಫ್ಟ್‌ವೇರ್ ಅನ್ನು ಬಳಸುವುದು ಅತ್ಯಗತ್ಯವಾಗಿದೆ. 

ಆದಾಯ ತೆರಿಗೆ ವೆಬ್‌ಸೈಟ್ ಪ್ರಕಾರ: "ನೀವು ಮೇಲ್ಕಂದ ಸಂದೇಶದಂತೆ ಇಮೇಲ್ ಸ್ವೀಕರಿಸಿದರೆ ಅಥವಾ ಆದಾಯ ತೆರಿಗೆ ಇಲಾಖೆಯ ಹೆಸರಿನಲ್ಲಿ ಯಾವುದೇ ರೀತಿಯ ಸಂದೇಶವನ್ನು ಸ್ವೀಕರಿಸಿದರೆ ಅಥವಾ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್ ರೀತಿಯ ನಕಲಿ ವೆಬ್‌ಸೈಟ್ ಅನ್ನು ನೀವು ಕಂಡುಕೊಂಡರೆ, ದಯವಿಟ್ಟು ಇಮೇಲ್ ಅಥವಾ ವೆಬ್‌ಸೈಟ್ URL ಅನ್ನು webmanager@incometax.gov.in ಗೆ ಕಳುಹಿಸಿ . ಒಂದು ಪ್ರತಿಯನ್ನು incident@cert-in.org.in ಗೆ ಕಳುಹಿಸಬಹುದು. ನೀವು ರಶೀದಿಯ ಮೇಲೆ ಸಂದೇಶವನ್ನು ಫಾರ್ವರ್ಡ್ ಮಾಡಬಹುದು ಅಥವಾ ಇಮೇಲ್‌ನ ಇಂಟರ್ನೆಟ್ ಹೆಡರ್ ಅನ್ನು ಒದಗಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/xFI-KJNrEP8?si=miBicRGRD6W5W6j8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News