Amazon Prime Day Sale : ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಜೊತೆ ಸಿಗಲಿದೆ ಬಹಳಷ್ಟು ಪ್ರಯೋಜನ

Amazon Prime Day Sale : ಅಮೆಜಾನ್ ಪ್ರೈಮ್ ಇಂಡಿಯಾ ತನ್ನ 5 ನೇ ವಾರ್ಷಿಕೋತ್ಸವವನ್ನು ಜುಲೈ 26 ರಂದು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಪ್ರೈಮ್ ಡೇ ಸೇಲ್ ನಡೆಸಲಿದೆ. 

Written by - Ranjitha R K | Last Updated : Jul 9, 2021, 08:42 PM IST
  • 5ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಅಮೆಜಾನ್ ಪ್ರೈಮ್ ಇಂಡಿಯಾ
  • ಜುಲೈ 26 ರಿಂದ ಆರಂಭವಾಗಲಿದೆ Amazon Prime Day Sale
  • ಜುಲೈ 26 ರಿಂದ ಜುಲೈ 27 ರವರೆಗೆ ನಡೆಯಲಿದೆ ಸೇಲ್
Amazon Prime Day Sale : ಭಾರೀ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಜೊತೆ ಸಿಗಲಿದೆ ಬಹಳಷ್ಟು ಪ್ರಯೋಜನ title=
ಜುಲೈ 26 ರಿಂದ ಆರಂಭವಾಗಲಿದೆ Amazon Prime Day Sale (phot zee business)

ನವದೆಹಲಿ : Amazon Prime Day Sale : ಅಮೆಜಾನ್ ಪ್ರೈಮ್ ಇಂಡಿಯಾ ತನ್ನ 5 ನೇ ವಾರ್ಷಿಕೋತ್ಸವವನ್ನು ಜುಲೈ 26 ರಂದು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಮೆಜಾನ್ ಪ್ರೈಮ್ ಡೇ ಸೇಲ್ ನಡೆಸಲಿದೆ. ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪಡೆದ ಗ್ರಾಹಕರು ಇದರಿಂದ ಭಾರೀ ಲಾಭವನ್ನು ಗಳಿಸಲಿದ್ದಾರೆ. ಅಮೆಜಾನ್  ಟ್ವೀಟ್ ಮೂಲಕ ಈ ಸೇಲ್ ಬಗ್ಗೆಅಧಿಕೃತ ಘೋಷಣೆ ಮಾಡಿದೆ.  ಅಮೆಜಾನ್‌ನ ಈ ಸೇಲ್ ಜುಲೈ 26 ರಿಂದ ಜುಲೈ 27 ರವರೆಗೆ ನಡೆಯಲಿದೆ.  

ಮ್ಯಾನಿಫ್ಯಾಕ್ಚರರ್ , ಚಿಲ್ಲರೆ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಸ್ಥಳೀಯ ಅಂಗಡಿಯವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಸೇಲ್ ಅನ್ನ ಪ್ರಾರಂಭಿಸಲಾಗಿದೆ. ಕರೋನಾ (COVID-19) ಅವಧಿಯಲ್ಲಿ ಲಾಕ್ ಡೌನ್ (Lockdown) ಜಾರಿಯಾಗಿದ್ದರಿಂದ ಬಹುತೇಕ ಎಲ್ಲಾ ವರ್ಗದ ಕೆಲಸ  ಸ್ಥಗಿತಗೊಂಡಿತ್ತು. ಈ ಕಾರಣದಿಂದಾಗಿ, ಬಹುತೇಕ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿತ್ತು. ಈ ಮಾರಾಟದಲ್ಲಿ, ಗ್ರಾಹಕರು ಬೇರೆ ಬೇರೆ ವಿಭಾಗಗಳಲ್ಲಿ ಉತ್ತಮ ರಿಯಾಯಿತಿಗಳು, ಆಕರ್ಷಕ ಕೊಡುಗೆಗಳನ್ನು ಪಡೆಯಲಿದ್ದಾರೆ. 

ಇದನ್ನೂ ಓದಿ : Business Opportunity: ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಧನ ಸಹಾಯ

ಸ್ಮಾರ್ಟ್ ಟಿವಿ ಯಿಂದ ಹಿಡಿದು ಗೃಹೋಪಯೋಗಿ  ವಸ್ತುಗಳ ಮೇಲೆ ಸಿಗಲಿದೆ ರಿಯಾಯಿತಿ :   
ಅಮೆಜಾನ್ ಪ್ರೈಮ್ ಡೇ ಮಾರಾಟದಲ್ಲಿ (Amazon Prime Day Sale) 300 ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುವುದು. ಜುಲೈ 8 ರಿಂದ ಅಮೆಜಾನ್‌ನ ಮತ್ತೊಂದು ಸೇಲ್ (Amazon sale) ಪ್ರಾರಂಭವಾಗಿದ್ದು, ಇದು ಜುಲೈ 24 ರವರೆಗೆ ನಡೆಯಲಿದೆ. ಈ ಮಾರಾಟದಲ್ಲಿ, ಸಣ್ಣ ಮಾರಾಟಗಾರರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೆ, ಅಮೆಜಾನ್ ಹೇಳುವಂತೆ, 'ಈ ಮಾರಾಟದಲ್ಲಿ ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳ ಸಂಪೂರ್ಣ ಲಾಭವನ್ನು ಪ್ರೈಮ್ ಸದಸ್ಯರು ಪಡೆದುಕೊಳ್ಳಬಹುದು.  

ಜುಲೈ 8 ರಂದು ಬೆಳಿಗ್ಗೆ 5 ರಿಂದ ಆರಂಭವಾದ ಈ ಸೇಲ್ ಜುಲೈ 24 ರವರೆಗೆ ಮುಂದುವರಿಯುತ್ತದೆ. ಎಸ್‌ಎಂಬಿಗಳು ನೀಡುವ ಉತ್ಪನ್ನಗಳನ್ನು ಪ್ರೈಮ್ ಸದಸ್ಯರು ಸುಲಭವಾಗಿ ಖರೀದಿಸಬಹುದು. ಇದಲ್ಲದೆ ಗ್ರಾಹಕರು 150 ರೂ.ವರೆಗೆ 10 ಪ್ರತಿಶತದಷ್ಟು ಕ್ಯಾಶ್‌ಬ್ಯಾಕ್ (Cash back) ಸಿಗಲಿದೆ.  ಈ ಸೇಲ್ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳನ್ನು (Credit card) ಹೊಂದಿರುವ ಜನರಿಗೆ ಸಹ ಪ್ರಯೋಜನವನ್ನು ನೀಡುತ್ತದೆ. ಅವರು ಇಎಂಐ ವಹಿವಾಟಿನೊಂದಿಗೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ಅಲ್ಲದೆ, ಅಮೆಜಾನ್ ಪೇ (Amazon Pay) ಬಳಸಿ 1000 ರೂ ಕ್ಯಾಶ್‌ಬ್ಯಾಕ್ ಮತ್ತು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪ್ರೈಮ್ ಡೇ ನಲ್ಲಿ ಶಾಪಿಂಗ್ ಮಾಡಿದರೆ ಪ್ರೈಮ್ ಸದಸ್ಯರಿಗೆ 5% ಅನಿಯಮಿತ ರಿವಾರ್ಡ್ ಪಾಯಿಂಟ್‌ಗಳು ಸಿಗಲಿದೆ. 

ಇದನ್ನೂ ಓದಿ : ಆರ್ಥಿಕವಾಗಿ ತೊಂದರೆಗೊಳಗಾದ ಗ್ರಾಹಕರಿಗಾಗಿ ಮನೆ ಮನೆ ರೇಶನ್ ಸ್ಕೀಮ್ ಆರಂಭಿಸಿದ IDFC First Bank

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News