Aadhaar Card ನವೀಕರಣದಲ್ಲೂ ಮೋಸದ ಜಾಲ, ನಕಲಿ ವೆಬ್ ಸೈಟ್ ಗಳ ಬಗ್ಗೆ ಇರಲಿ ಎಚ್ಚರ..!

ಆಧಾರ್ ಹೆಸರಿನಲ್ಲಿಯೂ   ಮೋಸ ಮಾಡುವ ಅನೇಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ಕಾರ್ಡ್ ಮಾಡಿಸುವ ಅಥವಾ ಆಧಾರ್ ತಿದ್ದುಪಡಿ ಮತ್ತು ಆಧಾರ್ ನವೀಕರಿಸುವ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಗಳು ಕಾರ್ಯನಿರ್ವಹಿಸುತ್ತಿವೆ.

Written by - Ranjitha R K | Last Updated : Jan 24, 2021, 06:03 PM IST
  • ಆಧಾರ್ ನವೀಕರಣದ ಹೆಸರಲ್ಲಿ ನಡೆಯುತ್ತಿದೆ ನಕಲಿ ವೆಬ್ ಸೈಟ್ ಗಳು
  • ಸಾಮಾನ್ಯ ಸೇವಾ ಕೇಂದ್ರದಂತೆಯೇ ಕೆಲಸ ಮಾಡುತ್ತವೆ ನಕಲಿ ವೆಬ್ ಸೈಟ್ ಗಳು
  • UIDAI ಆಧಾರ್ ನ ಅಧಿಕೃತ ವೆಬ್ ಸೈಟ್
Aadhaar Card ನವೀಕರಣದಲ್ಲೂ ಮೋಸದ ಜಾಲ, ನಕಲಿ ವೆಬ್ ಸೈಟ್ ಗಳ ಬಗ್ಗೆ ಇರಲಿ ಎಚ್ಚರ..! title=
ಆಧಾರ್ ನವೀಕರಣದ ಹೆಸರಲ್ಲಿ ನಡೆಯುತ್ತಿದೆ ನಕಲಿ ವೆಬ್ ಸೈಟ್ ಗಳು (file photo)

ದೆಹಲಿ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ  ಆಧಾರ್ ಕಾರ್ಡ್ (Aadhaarcard) ಅನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲಾಗುತ್ತದೆ.  ಆಧಾರ್ ಹೆಸರಿನಲ್ಲಿಯೂ   ಮೋಸ ಮಾಡುವ ಅನೇಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ಕಾರ್ಡ್ ಮಾಡಿಸುವ ಅಥವಾ ಆಧಾರ್ ತಿದ್ದುಪಡಿ ಮತ್ತು ಆಧಾರ್ ನವೀಕರಿಸುವ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಗಳು (Fake website) ಕಾರ್ಯನಿರ್ವಹಿಸುತ್ತಿವೆ. ನೀವು ಸಹ ಆಧಾರ್ ಕಾರ್ಡ್‌ನಲ್ಲಿ ಯಾವುದಾದರೂ  ಬದಲಾವಣೆಗಳನ್ನು ಮಾಡಲು ಬಯಸುವುದಾದರೆ ಅದನ್ನು ಹೇಗೆ ಮಾಡಬಹುದು ಎಂಬುದರ ಬಗೆಗಿನ  ಸಂಪೂರ್ಣ ಮಾಹಿತಿ ಇಲ್ಲಿದೆ..

ನಕಲಿ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರ..!
ಆಧಾರ್ (Aadhaar) ನವೀಕರಣದ ಹೆಸರಿನಲ್ಲಿ, ಕೆಲವು ನಕಲಿ ವೆಬ್‌ಸೈಟ್‌ಗಳು ಜನರನ್ನು ಮೋಸಗೊಳಿಸುತ್ತಿವೆ. ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಮಾಡುವ ರೀತಿಯಲ್ಲಿಯೇ ಈ ವೆಬ್‌ಸೈಟ್‌ಗಳಲ್ಲಿಯೂ ಎಲ್ಲಾ  ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಬಳಕೆದಾರರನ್ನು ಮೋಸಗೊಳಿಸುವ ಸಲುವಾಗಿ, ನಕಲಿ ವೆಬ್‌ಸೈಟ್‌ಗಳು ಸಾಮಾನ್ಯ ಸೇವಾ ಕೇಂದ್ರದಂತೆ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ : Aadhaar card ಇಲ್ಲದೆ ಸಿಗಲ್ಲ Ration-Pension! ಇಲ್ಲಿದೆ ಸತ್ಯಾಸತ್ಯತೆ

ಆಧಾರ್ ನವೀಕರಿಸಲು ಸರಿಯಾದ ಮಾರ್ಗ :
ನಿಮ್ಮ ಆಧಾರ್ ಕಾರ್ಡ್‌ನಲ್ಲಿನ ಯಾವುದೇ ಮಾಹಿತಿಯು ತಪ್ಪಾಗಿದ್ದರೆ ಅಥವಾ ಕಾಲಾನಂತರದಲ್ಲಿ ನವೀಕರಿಸಲ್ಪಟ್ಟಿದ್ದರೆ,  ಆಧಾರ್ ಕಾರ್ಡ್‌ನ ಅಧಿಕೃತ ವೆಬ್‌ಸೈಟ್‌ UIDAIಗೆ ಭೇಟಿ ನೀಡಬಹುದು. ಆಧಾರ್ ನ ಅಧಿಕೃತ  ವೆಬ್ ಸೈಟ್ WWW.UIDAI.IN. ವೆಬ್‌ಸೈಟ್‌ನಲ್ಲಿ ಕೆಲವು ಸಾಮಾನ್ಯ ಸೇವಾ ಕೇಂದ್ರದ ಹೆಸರುಗಳನ್ನು ನೀಡಲಾಗಿದೆ. ಆ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬಹುದು..

ಇದನ್ನೂ ಓದಿ :ಈಗ ಚಿಟಿಕೆ ಹೊಡೆಯುವುದರಲ್ಲಿ Aadhaarನಲ್ಲಿ ಬದಲಾವಣೆ ಸಾಧ್ಯ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News