Aadhar card lock : ಕೆಲವೊಂದು ವೇಳೆ ಯಾವುದೋ ಕೆಲಸ ಭರದಲ್ಲಿ ನಾವು ಆಧಾರ್ ಕಾರ್ಡ್ ಅನ್ನು ಕಳೆದುಕೊಳ್ಳುತ್ತೇವೆ. ಅಂತಹ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಎನಾಗುವುದಿಲ್ಲ ಬಿಡು ಅಂತ ಅಲಸ್ಯ ವಹಿಸಿದ್ರೆ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಿದೆ ಆಧಾರ್ ಕಳೆದ್ರೆ ತಕ್ಷಣ ಏನು ಮಾಡ್ಬೇಕು..? ಇಲ್ಲಿವೆ ಸಲಹೆಗಳು..
ಪ್ರಸ್ತುತ ಪ್ರತಿ ಭಾರತೀಯರಿಗೆ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಭಾರತೀಯ ನಾಗರೀಕರಿಗೆ ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ನೀವೂ ಸಹ ಆಧಾರ್ ಕಾರ್ಡ್ ಹೊಂದಿದ್ದರೆ ನಿಮಗಿಗೆ ಒಂದು ಮಹತ್ವದ ಮಾಹಿತಿ.
ಆಧಾರ್ ಹೆಸರಿನಲ್ಲಿಯೂ ಮೋಸ ಮಾಡುವ ಅನೇಕ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ಕಾರ್ಡ್ ಮಾಡಿಸುವ ಅಥವಾ ಆಧಾರ್ ತಿದ್ದುಪಡಿ ಮತ್ತು ಆಧಾರ್ ನವೀಕರಿಸುವ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಗಳು ಕಾರ್ಯನಿರ್ವಹಿಸುತ್ತಿವೆ.
ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆ ಬಗ್ಗೆ ಹಲವು ಪ್ರಶ್ನೆಗಳು ಚರ್ಚೆಯಲ್ಲಿದೆ. ಅಲ್ಲದೆ, ಜನರು ಆಧಾರ್ ಕಾರ್ಡ್ ನವೀಕರಿಸಲು(ಅಪ್ಡೇಟ್ ಮಾಡಲು) ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.