PM ಕಿಸಾನ್ ಯೋಜನೆಯಡಿಯಲ್ಲಿ 4000 ರೂಪಾಯಿಗಳನ್ನು ಪಡೆಯಬಹುದು ! ನೋಂದಣಿಗಾಗಿ ಹೀಗೆ ಮಾಡಿ

ಪಿಎಂ ಕಿಸಾನ್ ಯೋಜನೆಯಡಿ ಇನ್ನೂ ಕೂಡಾ ನೊಂದಾಯಿಸದಿದ್ದರೆ, 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ಈ ಯೋಜನೆಯಡಿ ಇನ್ನೂ ಕೂಡಾ ನೋಂದಾಯಿಸದ ಅರ್ಹ ರೈತರಿಗೆ 4000 ರೂ. ಗಳನ್ನು ಕಂತುಗಳಲ್ಲಿ ನೀಡಲಾಗುವುದು.

Written by - Ranjitha R K | Last Updated : Sep 21, 2021, 03:30 PM IST
  • ಸೆಪ್ಟೆಂಬರ್ 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು.
  • ನೋಂದಾಯಿಸಿಕೊಂಡ ತಕ್ಷಣ ಪಿಎಂ ಕಿಸಾನ್ ಯೋಜನೆಯಡಿ 4000 ರೂ. ಗಳನ್ನು ನೀಡಲಾಗುತ್ತದೆ.
  • ಬೇಕಾಗಿರುವ ಅಗತ್ಯ ದಾಖಲೆಗಳು ಯಾವುವು ತಿಳಿಯಿರಿ
PM ಕಿಸಾನ್ ಯೋಜನೆಯಡಿಯಲ್ಲಿ 4000 ರೂಪಾಯಿಗಳನ್ನು ಪಡೆಯಬಹುದು ! ನೋಂದಣಿಗಾಗಿ ಹೀಗೆ ಮಾಡಿ  title=
ಸೆಪ್ಟೆಂಬರ್ 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. (file photo)

ನವದೆಹಲಿ : PM Kisan : ಪಿಎಂ  ಕಿಸಾನ್ ನ ಒಂಬತ್ತನೇ ಕಂತು ಇನ್ನೂ ನಿಮ್ಮ ಖಾತೆಗೆ ಬಂದಿಲ್ಲ ಎಂದಾದರೆ ಚಿಂತೆ ಮಾಡಬೇಕಿಲ್ಲ. ಒಟ್ಟಿಗೆ  4 ಸಾವಿರ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳಬಹುದು. ಮುಂದಿನ ಕಂತಿನಲ್ಲಿ ಸರ್ಕಾರವು, ಪಿಎಂ ಕಿಸಾನ್ ಯೋಜನೆಯಡಿ ಈ ಮೊತ್ತವನ್ನು ದ್ವಿಗುಣಗೊಳಿಸಿ ನಿಮ್ಮ ಖಾತೆಗೆ ಹಾಕಬಹುದು. ಅಂದರೆ, ಈ ಯೋಜನೆಯಡಿ (PM Kisan Scheme) ರೈತರು, 4 ಸಾವಿರ ರೂಪಾಯಿಗಳ ಲಾಭವನ್ನು ಪಡೆಯಬಹುದು. 

ಪಿಎಂ ಕಿಸಾನ್ ಯೋಜನೆಯಡಿ (PM Kisan Yojana) ಇನ್ನೂ ಕೂಡಾ ನೊಂದಾಯಿಸದಿದ್ದರೆ, 30 ರೊಳಗೆ ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ಈ ಯೋಜನೆಯಡಿ ಇನ್ನೂ ಕೂಡಾ ನೋಂದಾಯಿಸದ ಅರ್ಹ ರೈತರಿಗೆ 4000 ರೂ. ಗಳನ್ನು ಕಂತುಗಳಲ್ಲಿ ನೀಡಲಾಗುವುದು. ಸೆಪ್ಟೆಂಬರ್ 30 ರೊಳಗೆ  ನೋಂದಾಯಿಸಿಕೊಂಡ ತಕ್ಷಣ ಪಿಎಂ ಕಿಸಾನ್ ಯೋಜನೆಯಡಿ (PM Kisan Scheme) 4000 ರೂಪಾಯಿಗಳನ್ನು ನೀಡಲಾಗುತ್ತದೆ. ಅರ್ಹ ರೈತರಿಗೆ ರೂ. 4 ಸಾವಿರವನ್ನು ಸತತ 2 ಕಂತುಗಳಲ್ಲಿ ಪಡೆಯುವ ಅವಕಾಶವಿರುತ್ತದೆ. ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ  2,000 ರೂ. ಡಿಸೆಂಬರ್‌ನಲ್ಲಿಯೂ  2,000 ರೂ.  ಬ್ಯಾಂಕ್ ಖಾತೆಗೆ (Bank account) ಬರುತ್ತದೆ. 

ಇದನ್ನೂ ಓದಿ : Yamaha R15 Series New Bikes: ಯಮಾಹಾದಿಂದ ಎರಡು ಪವರ್ಫುಲ್ ಬೈಕ್ ಬಿಡುಗಡೆ, ಸಿಗಲಿವೆ ಪ್ರಿಮಿಯಂ ಬೈಕ್ ವೈಶಿಷ್ಟ್ಯಗಳು

ಅಗತ್ಯ ದಾಖಲೆಗಳು :
- ಅರ್ಹ ರೈತ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಏಕೆಂದರೆ ಸರ್ಕಾರವು ರೈತರಿಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸುತ್ತದೆ.
-ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ (Aadhaar) ಲಿಂಕ್ ಮಾಡಬೇಕು.
-ನೀವು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ, ಈ ಯೋಜನೆಯ ಲಾಭವನ್ನು ಪಡೆಯುವುದು ಸಾಧ್ಯವಿಲ್ಲ . 
-ನಿಮ್ಮ ದಾಖಲೆಗಳನ್ನು ನೀವು PM ಕಿಸಾನ್ ಅಧಿಕೃತ ವೆಬ್‌ಸೈಟ್ pmkisan.gov.in ನಲ್ಲಿ ಅಪ್‌ಲೋಡ್ ಮಾಡಬಹುದು.
- ಆಧಾರ್ ಲಿಂಕ್ ಮಾಡಲು, ಫಾರ್ಮರ್ಸ್ ಕಾರ್ನರ್ ಆಯ್ಕೆಗೆ ಹೋಗಿ ಆಧಾರ್ ವಿವರವನ್ನು ಎಡಿಟ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನೀವು ಅಪ್ಡೇಟ್ ಮಾಡಬೇಕು. 

ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂಪರ್ ಬೆಲೆ, ಇಂದಿನ ದರ ತಿಳಿಯಿರಿ…

ಪಿಎಂ ಕಿಸಾನ್ ಯೋಜನೆ :
ಪಿಎಂ ಕಿಸಾನ್ ಯೋಜನೆಯಡಿ, ಫಲಾನುಭವಿ ರೈತ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ  ಕಳುಹಿಸಲಾಗುತ್ತದೆ. 2000 ರೂಪಾಯಿಗಳಂತೆ,  ಮೂರು ಕಂತುಗಳಲ್ಲಿ ಈ ಮೊತ್ತವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ, ಸರ್ಕಾರವು ರೈತರ ಬ್ಯಾಂಕ್ ಖಾತೆಗೆ 1.38 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾಯಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News