3 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನೆಡೆ..! ತಲೆಕೆಳಗಾಯ್ತಾ ʼಕೈʼ ಗ್ಯಾರಂಟಿ ಪ್ಲಾನ್‌..?

Five states Election Results 2023 Live : ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸ್‌ಗಡದಲ್ಲಿ ಬಿಜೆಪಿ ಭರ್ಜರಿ ಮುನ್ನೆಡೆ ಸಾಧಿಸುತ್ತಿದೆ. ಪ್ರಾರಂಭದಲ್ಲಿ ಮುನ್ನೆಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಸಧ್ಯ ಹಿನ್ನೆಡೆಯಾಗಿದೆ.  ತೆಲಂಗಾಣದಲ್ಲಿ ಮಾತ್ರ ಕೈ ಉತ್ತಮ ಸ್ಥಾನದಲ್ಲಿದೆ.

Written by - Krishna N K | Last Updated : Dec 3, 2023, 11:23 AM IST
  • 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
  • ಮಧ್ಯ ಪ್ರದೇಶ, ರಾಜಸ್ಥಾನ, ಛತ್ತಿಸ್‌ಗಡದಲ್ಲಿ ಬಿಜೆಪಿ ಭರ್ಜರಿ ಮುನ್ನೆಡೆ ಸಾಧಿಸುತ್ತಿದೆ.
  • ಪ್ರಾರಂಭದಲ್ಲಿ ಮುನ್ನೆಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಸಧ್ಯ ಹಿನ್ನೆಡೆಯಾಗಿದೆ.
3 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನೆಡೆ..! ತಲೆಕೆಳಗಾಯ್ತಾ ʼಕೈʼ ಗ್ಯಾರಂಟಿ ಪ್ಲಾನ್‌..? title=

Election Results 2023 Live : ಪಂಚ ರಾಜ್ಯಗಳ ಪೈಕಿ ಸಧ್ಯ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮೊದಲಿಗೆ ನಾಲ್ಕು ರಾಜ್ಯಗಳಲ್ಲಿ ಮುನ್ನೆಡೆ ಕಾಯ್ದುಕೊಂಡು ಬಂದ ಕೈ ಪಾಳಯಕ್ಕೆ ಇದೀಗ ಹಿನ್ನೆಡೆಯಾಗಿದ್ದು, ತೆಲಂಗಾಣ ಹೊರತು ಪಡಿಸಿ 4 ರಾಜ್ಯಗಳಲ್ಲಿ ಕಾಂಗ್ರೆಸ್‌ ಹಿನ್ನೆಡೆ ಅನುಭವಿಸುತ್ತಿದೆ.

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಕಾಂಗ್ರೆಸ್‌ ಹಿನ್ನೆಡೆಯಾಗುತ್ತಿದೆ. ತೆಲಂಗಾಣ ಹೊರತು ಪಡಿಸಿ ಬಿಜೆಪಿ ಭರ್ಜರಿ ಮುನ್ನೆಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಬಿಆರ್‌ಎಸ್‌ ಪಕ್ಷಕ್ಕೆ ಹಿನ್ನೆಡೆ ಸಾಧಿಸುತ್ತಿದ್ದು, ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಸ್ಥಾಪಿಸುವ ಮುನ್ಸೂಚನೆ ವ್ಯಕ್ತವಾಗಿದೆ. 

ಇದನ್ನೂ ಓದಿ: Rajasthan Election Results 2023: ಕಾಂಗ್ರೆಸ್ ಗೆದ್ದರೆ... ರಾಜಸ್ಥಾನದ ಮುಖ್ಯಮಂತ್ರಿ ಯಾರು?

ಇನ್ನು ಫಲಿತಾಂಶಗಳನ್ನು ನೋಡುವುದಾದರೆ ಸಧ್ಯ ಬಿಜೆಪಿ ಮಧ್ಯ ಪ್ರದೇಶದಲ್ಲಿ 137, ರಾಜಸ್ಥಾನ 114 ಮತ್ತು ಛತ್ತೀಸ್‌ ಗಢದಲ್ಲಿ 48 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿದೆ. ಆದ್ರೆ, ತೆಲಂಗಾಣದಲ್ಲಿ ಕೇವಲ 08 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮುನ್ನೆಡೆ ಸಾಧಿಸಿದೆ. 

ಕಾಂಗ್ರೆಸ್‌ ಫಲಿತಾಂಶ ನೋಡುವುದಾದರೆ, ಮಧ್ಯ ಪ್ರದೇಶದಲ್ಲಿ 92, ರಾಜಸ್ಥಾನ 70 ಮತ್ತು ಛತ್ತೀಸ್‌ ಗಢದಲ್ಲಿ 40 ಸ್ಥಾನಗಳಲ್ಲಿ ಮುನ್ನೆಡೆ ಕಾಯ್ದುಕೊಂಡು ಬಂದಿದೆ. ತೆಲಂಗಾಣದಲ್ಲಿ 64 ಕ್ಷೇತ್ರಗಳಲ್ಲಿ ಕೈ ಪಡೆ ಭರ್ಜರಿ ಮುನ್ನೆಡೆ ಸಾಧಿಸಿದೆ. ಆದ್ರೆ ಒಂದು ರಾಜ್ಯ ಬಿಟ್ಟರೆ ಮಿಕ್ಕ ಮೂರು ರಾಜ್ಯಗಳಲ್ಲಿ ಭಾರೀ ಹಿನ್ನೆಡೆ ಅನುಭವಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News