ಜಗತ್ತು ಇನ್ನೂ COVID ನಿಂದ ಮುಕ್ತವಾಗಿಲ್ಲ, ಹೆಚ್ಚಿನ ರೂಪಾಂತರಗಳನ್ನು ನಿರೀಕ್ಷಿಸಲಾಗಿದೆ: WHO ಎಚ್ಚರಿಕೆ

COVID-19: ಇತರ ವೈರಸ್‌ಗಳಂತೆ ಕೊರೊನಾ ವೈರಸ್‌ನೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಜಗತ್ತು ಕಲಿಯುತ್ತದೆ ಎಂದು WHO ಮುಖ್ಯ ವಿಜ್ಞಾನಿ ಹೇಳಿದರು.

Edited by - Zee Kannada News Desk | Last Updated : Feb 11, 2022, 09:48 PM IST
  • ಕೊರೊನಾ ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಎಚ್ಚರಿಕೆ ನೀಡಿದೆ
  • ಜಗತ್ತು ಇನ್ನೂ COVID ನಿಂದ ಮುಕ್ತವಾಗಿಲ್ಲ, ಹೆಚ್ಚಿನ ರೂಪಾಂತರಗಳನ್ನು ನಿರೀಕ್ಷಿಸಲಾಗಿದೆ
  • ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿಕೆ
ಜಗತ್ತು ಇನ್ನೂ COVID ನಿಂದ ಮುಕ್ತವಾಗಿಲ್ಲ, ಹೆಚ್ಚಿನ ರೂಪಾಂತರಗಳನ್ನು ನಿರೀಕ್ಷಿಸಲಾಗಿದೆ: WHO ಎಚ್ಚರಿಕೆ  title=
ಕೊರೊನಾ ವೈರಸ್

ನವದೆಹಲಿ: ಕೊರೊನಾ ವೈರಸ್ (Corona Virus) ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಎಚ್ಚರಿಕೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ಅಂತ್ಯಗೊಂಡಿಲ್ಲ. ಏಕೆಂದರೆ ಹೆಚ್ಚಿನ ಕೊರೊನಾ ವೈರಸ್ ರೂಪಾಂತರಗಳಿವೆ ಎಂದು ಹೇಳಿರುವುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. 

ಇದನ್ನೂ ಓದಿ:ಈ ವೈರಸ್ ಮೆದುಳಿನಲ್ಲಿ ಅಡಗಿಕೊಳ್ಳಬಹುದು, ಚಿಕಿತ್ಸೆಯ ನಂತರವೂ ಮರುಕಳಿಸಬಹುದು.!

ವೈರಸ್ ರೂಪಾಂತರಗೊಳ್ಳುವುದನ್ನು ಜಗತ್ತು ನೋಡಿದೆ. ಆದ್ದರಿಂದ ಹೆಚ್ಚಿನ ರೂಪಾಂತರಗಳು ಇರುತ್ತವೆ. ಆದ್ದರಿಂದ ನಾವು ಸಾಂಕ್ರಾಮಿಕ ರೋಗದ ಅಂತ್ಯದಲ್ಲಿಲ್ಲ ಎಂದು ಸ್ವಾಮಿನಾಥನ್ (Swaminathan) ಹೇಳಿದ್ದಾರೆ.

ಬ್ಲೂಮ್‌ಬರ್ಗ್‌ಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ, ಸ್ವಾಮಿನಾಥನ್ ಈ ಹಿಂದೆ ಜನವರಿ 27 ರಂದು ಸಾಂಕ್ರಾಮಿಕ ರೋಗವು ಯಾವಾಗ ಕೊನೆಗೊಳ್ಳುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

"ಈ ಸಮಯದಲ್ಲಿ ನಾವು ತೆಗೆದುಕೊಳ್ಳುತ್ತಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಬಿಡುವುದು ಮೂರ್ಖತನವಾಗಿದೆ. ನಾವು ಅದನ್ನು ಮುಂದುವರಿಸಬೇಕಾಗಿದೆ ಮತ್ತು 2022 ರ ಅಂತ್ಯದ ವೇಳೆಗೆ ನಾವು ಉತ್ತಮ ಸ್ಥಾನದಲ್ಲಿರುತ್ತೇವೆ. ಒಂದು ರೂಪಾಂತರವು ಎಲ್ಲಿಯಾದರೂ ಉದ್ಭವಿಸಬಹುದು. ನಾವು ಇನ್ನೂ ಜಾಗರೂಕರಾಗಿರಬೇಕು" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Omicron Variant Symptoms: ಲಸಿಕೆ ಪಡೆದವರು, ಪಡೆಯದವರಲ್ಲಿ ಕಾಣಿಸುತ್ತಿರುವ ಓಮಿಕ್ರಾನ್‌ನ ಲಕ್ಷಣಗಳಿವು, ಜಾಗರೂಕರಾಗಿರಿ

ಇತರ ವೈರಸ್‌ಗಳಂತೆ ಕೊರೊನಾ ವೈರಸ್‌ನೊಂದಿಗೆ (Covid-19) ಹೇಗೆ ಬದುಕಬೇಕು ಎಂಬುದನ್ನು ಜಗತ್ತು ಕಲಿಯುತ್ತದೆ ಎಂದು ಮುಖ್ಯ ವಿಜ್ಞಾನಿ ಹೇಳಿದ್ದಾರೆ.

ನಾವು ಜಾಗತಿಕವಾಗಿ ಉತ್ತಮ ಕಣ್ಗಾವಲು ವ್ಯವಸ್ಥೆಯನ್ನು ಹೊಂದಿದ್ದೇವೆ. ನೀವು ಸಾಮಾನ್ಯ ಉಸಿರಾಟದ ಸೋಂಕು ಅಥವಾ ಜ್ವರವನ್ನು ಹೊಂದಿದ್ದರೂ ಸಹ, ಮಾಸ್ಕ್ (Mask) ಹಾಕಿಕೊಳ್ಳುವುದು ಒಳ್ಳೆಯದು" ಎಂದು ಅವರು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News