ಅಮೆರಿಕನ್ನರಿಗೆ ಕರೋನಾ ಲಸಿಕೆ ಯಾವಾಗ ಸಿಗುತ್ತೆ? ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲ್ಲ ಅಮೆರಿಕನ್ನರಿಗೆ ಕರೋನಾ ಲಸಿಕೆ ಎಷ್ಟು ದಿನದಲ್ಲಿ ಸಿಗುತ್ತದೆ ಎಂದು ಹೇಳಿದ್ದಾರೆ.

Last Updated : Nov 14, 2020, 11:45 AM IST
  • ಅಮೆರಿಕಾದಲ್ಲಿ ಇದುವರೆಗೆ 1.1 ಮಿಲಿಯನ್ ಜನರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ
  • ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ
  • ಪ್ರತಿಯೊಬ್ಬ ನಾಗರಿಕನು ಲಸಿಕೆ ಉಚಿತವಾಗಿ ಲಭ್ಯವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕನ್ನರಿಗೆ ಕರೋನಾ ಲಸಿಕೆ ಯಾವಾಗ ಸಿಗುತ್ತೆ? ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು? title=
File Image

ವಾಷಿಂಗ್ಟನ್: ಅಮೆರಿಕದಲ್ಲಿ ಇಲ್ಲಿಯವರೆಗೆ 11 ದಶಲಕ್ಷ ಜನರು ಕರೋನಾವೈರಸ್ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಏತನ್ಮಧ್ಯೆ ನಿರ್ಗಮಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಜನರಿಗೆ ಕರೋನಾ ಲಸಿಕೆ ಎಷ್ಟು ದಿನಗಳಲ್ಲಿ ಸಿಗಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಲಸಿಕೆ ಲಭ್ಯ:
ಅಧ್ಯಕ್ಷೀಯ ಚುನಾವಣಾ ಫಲಿತಾಂಶಗಳು ಬಹಿರಂಗವಾದ ನಂತರ ಮೊದಲ ಬಾರಿಗೆ ಸಾರ್ವಜನಿಕ ಭಾಷಣ ಮಾಡಿದ ಡೊನಾಲ್ಡ್ ಟ್ರಂಪ್ (Donald Trump) ಔಷಧ ಕಂಪನಿ ಫಿಜರ್‌ನ ಕರೋನಾ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಮುಂದಿನ ವರ್ಷದ ಏಪ್ರಿಲ್ ವೇಳೆಗೆ ಪ್ರತಿಯೊಬ್ಬ ಅಮೆರಿಕನ್ ಪ್ರಜೆಗೆ ಕರೋನಾ ಲಸಿಕೆ ಸಿಗುವ ನಿರೀಕ್ಷೆಯಿದೆ ಎಂದವರು ತಿಳಿಸಿದರು.

ಪ್ರತಿಯೊಬ್ಬ ನಾಗರಿಕರಿಗೂ ಉಚಿತ ಲಸಿಕೆ :
"ಮುಂದಿನ ಕೆಲವು ವಾರಗಳಲ್ಲಿ, ಲಸಿಕೆಯನ್ನು ಮೊದಲು ಕರೋನಾ ವಾರಿಯರ್ಸ್, ವೃದ್ಧರು ಮತ್ತು ಹೆಚ್ಚಿನ ಅಗತ್ಯವಿರುವ ಕರೋನಾವೈರಸ್ (Coronavirus) ರೋಗಿಗಳಿಗೆ ನೀಡಲಾಗುವುದು" ಎಂದು ಟ್ರಂಪ್ ಹೇಳಿದ್ದಾರೆ. ನಮ್ಮ ಹೂಡಿಕೆಯಿಂದಾಗಿ ಪ್ರತಿಯೊಬ್ಬ ನಾಗರಿಕನು ಫಿಜರ್ ಲಸಿಕೆಯನ್ನು ಉಚಿತವಾಗಿ ಪಡೆಯುತ್ತಾನೆ ಎಂದವರು ತಿಳಿಸಿದ್ದಾರೆ. ಆದರೂ ಅಗತ್ಯ ತುರ್ತು ಅನುಮೋದನೆಗಳನ್ನು ನೀಡಲು ಆಹಾರ ಮತ್ತು ಔಷಧ ಆಡಳಿತವನ್ನು ಇನ್ನೂ ಕೇಳಲಾಗಿಲ್ಲ.

ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ: AIIMS ನಿರ್ದೇಶಕರು ಹೇಳಿದ್ದಿಷ್ಟು

ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯಗಳು ಹೊಸ ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಟ್ರಂಪ್ ಎಲ್ಲಾ ಅಮೆರಿಕನ್ನರನ್ನು “ಜಾಗರೂಕರಾಗಿರಿ” ಎಂದು ಕೇಳಿದರು. ಆದರೆ ಅವರು ರಾಷ್ಟ್ರವ್ಯಾಪಿ “ಲಾಕ್‌ಡೌನ್” ಹೇರಲು ಸಿದ್ಧತೆ ನಡೆದಿದೆ ಎಂಬ ವರದಿಯನ್ನು ತಳ್ಳಿಹಾಕಿದರು.

ಭಾರತದಲ್ಲಿ ತಯಾರಾಯಿತು covid-19 ಲಸಿಕೆ: ಫೆಬ್ರವರಿಯಲ್ಲಿ ಲಭ್ಯ!

ಏತನ್ಮಧ್ಯೆ ಸಾಂಕ್ರಾಮಿಕ ರೋಗದ ಮೇಲೆ ಆಕ್ರಮಣಕಾರಿ ಕ್ರಮ ತೆಗೆದುಕೊಳ್ಳಲು ಅಥವಾ ಬಿಡೆನ್ ತಂಡದೊಂದಿಗೆ ಸಮನ್ವಯ ಸಾಧಿಸಲು ಟ್ರಂಪ್ ನಿರಾಕರಿಸಿದ್ದರಿಂದ ಅವರ ಅಧ್ಯಕ್ಷತೆಯ ಅಂತಿಮ ಎರಡು ತಿಂಗಳುಗಳಲ್ಲಿ ವೈರಸ್ ಪರಿಣಾಮಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಮುಂದಿನ ವರ್ಷ ಕರೋನಾ ಲಸಿಕೆ (Corona Vaccine)ಯನ್ನು ತ್ವರಿತವಾಗಿ ವಿತರಿಸುವ ರಾಷ್ಟ್ರದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
 

Trending News