"ಆಫ್ಘಾನಿಸ್ತಾನಕ್ಕೆ ನಾವು ಬದ್ಧ, ಸಾಧ್ಯವಾದಲ್ಲಿ ತಾಲಿಬಾನ್ ಜೂತೆಗೂ ಕಾರ್ಯನಿರ್ವಹಿಸುತ್ತೇವೆ"

ಅಫ್ಘಾನಿಸ್ತಾನ ವಿಚಾರದಲ್ಲಿ ನಾವು ಬದ್ಧವಾಗಿದ್ದೇವೆ,ಅಗತ್ಯವಿದ್ದಲ್ಲಿ ಇಸ್ಲಾಮಿಕ್ ಉಗ್ರ ಗುಂಪಿನೊಂದಿಗೆ ಕೆಲಸ ಮಾಡುವುದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

Last Updated : Aug 21, 2021, 10:07 PM IST
  • ಅಫ್ಘಾನಿಸ್ತಾನ ವಿಚಾರದಲ್ಲಿ ನಾವು ಬದ್ಧವಾಗಿದ್ದೇವೆ,ಅಗತ್ಯವಿದ್ದಲ್ಲಿ ಇಸ್ಲಾಮಿಕ್ ಉಗ್ರ ಗುಂಪಿನೊಂದಿಗೆ ಕೆಲಸ ಮಾಡುವುದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
  • ಬೋರಿಸ್ ಜಾನ್ಸನ್ ಯುಕೆ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಬೆಂಬಲಿಸಲು ಹೆಚ್ಚುವರಿ 800 ಸೈನಿಕರನ್ನು ನಿಯೋಜಿಸುವುದಾಗಿ ಘೋಷಿಸಿದರು.
 "ಆಫ್ಘಾನಿಸ್ತಾನಕ್ಕೆ ನಾವು ಬದ್ಧ, ಸಾಧ್ಯವಾದಲ್ಲಿ ತಾಲಿಬಾನ್ ಜೂತೆಗೂ ಕಾರ್ಯನಿರ್ವಹಿಸುತ್ತೇವೆ" title=

ನವದೆಹಲಿ: ಅಫ್ಘಾನಿಸ್ತಾನ ವಿಚಾರದಲ್ಲಿ ನಾವು ಬದ್ಧವಾಗಿದ್ದೇವೆ,ಅಗತ್ಯವಿದ್ದಲ್ಲಿ ಇಸ್ಲಾಮಿಕ್ ಉಗ್ರ ಗುಂಪಿನೊಂದಿಗೆ ಕೆಲಸ ಮಾಡುವುದಾಗಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಇದನ್ನೂ ಓದಿ:ಭಾರತ-ಪಾಕಿಸ್ತಾನ ಗಡಿ ಪ್ರದೇಶಕ್ಕೆ ಭೇಟಿ ನೀಡಿದ ಸಂಸದೀಯ ಸ್ಥಾಯಿ ಸಮಿತಿ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷದ ಮೇಲೆ ಕೇಂದ್ರೀಕರಿಸಿದ ತುರ್ತು ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್, 'ನಾನು ಜನರಿಗೆ ಭರವಸೆ ನೀಡಲು ಬಯಸುವುದೇನೆಂದರೆ, ಅಫ್ಘಾನಿಸ್ತಾನಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನಮ್ಮ ರಾಜಕೀಯ ಮತ್ತು ರಾಜತಾಂತ್ರಿಕ ಪ್ರಯತ್ನಗಳು ತಾಲಿಬಾನ್, ಅಗತ್ಯವಿದ್ದರೆ, ಮುಂದುವರಿಯುತ್ತದೆ ಮತ್ತು ಅಫ್ಘಾನಿಸ್ತಾನಕ್ಕೆ ನಮ್ಮ ಬದ್ಧತೆ ಶಾಶ್ವತವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:First Taliban Fatwa: Afghanistanನಲ್ಲಿ ಮೊದಲ ತಾಲಿಬಾನಿ ಫತ್ವಾ ಜಾರಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಓದುವಂತಿಲ್ಲ!

ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ರಿಟಿಷ್ ಪ್ರಜೆಗಳು ಮತ್ತು ರಾಜತಾಂತ್ರಿಕರನ್ನು ಸ್ಥಳಾಂತರಿಸುವ ಪರಿಸ್ಥಿತಿಯು ಸ್ವಲ್ಪ ಸುಧಾರಿಸುತ್ತಿದೆ.ನಿನ್ನೆಯಿಂದ ನಾವು ಸುಮಾರು 1,000 ಜನರನ್ನು ಮತ್ತು ಇಂದು ಇನ್ನೂ 1,000 ಜನರನ್ನು ಹೊರಹಾಕಲು ಸಾಧ್ಯವಾಯಿತು" ಎಂದು ಜಾನ್ಸನ್ ಹೇಳಿದರು, ಯುಕೆಗೆ ಆಗಮಿಸುವವರು ಬ್ರಿಟಿಷ್ ಪ್ರಜೆಗಳು ಮಾತ್ರವಲ್ಲ ಅಫ್ಘಾನಿಸ್ಥಾನಿಗಳು ಅಫ್ಘಾನಿಸ್ತಾನ ಪುನರ್ವಸತಿ ಮತ್ತು ಸಹಾಯದ ಅಡಿಯಲ್ಲಿ ಬರುತ್ತಿದ್ದಾರೆ ಎಂದು ಹೇಳಿದರು.

ಬೋರಿಸ್ ಜಾನ್ಸನ್ ಯುಕೆ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಬೆಂಬಲಿಸಲು ಹೆಚ್ಚುವರಿ 800 ಸೈನಿಕರನ್ನು ನಿಯೋಜಿಸುವುದಾಗಿ ಘೋಷಿಸಿದರು.

ಇದನ್ನೂ ಓದಿ:ಭಾರತೀಯ ಪ್ರಭಾವವನ್ನು ಎದುರಿಸಲು ಅಫ್ಘಾನಿಸ್ತಾನದಲ್ಲಿ ಪಾಕ್ ಆಸಕ್ತಿ -ಯುಎಸ್ ವರದಿ

ಯುಕೆ ಮಂಗಳವಾರ ARAP ಅನ್ನು ಘೋಷಿಸಿತು, ಇದು ಅಫಘಾನ್ ಪ್ರಜೆಗಳಿಗೆ 'ದೀರ್ಘಾವಧಿಯ' ಅವಧಿಯಲ್ಲಿ ದೇಶದಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ. ಯೋಜನೆಯ ಪ್ರಕಾರ, 5,000 ಅಫ್ಘಾನ್ ನಾಗರಿಕರಿಗೆ ಮೊದಲ ವರ್ಷದಲ್ಲೇ ಆಶ್ರಯ ನೀಡಲಾಗುವುದು ಎಂದು ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಹೇಳಿದ್ದಾರೆ.ಈ ಯೋಜನೆಯು ಅಫ್ಘಾನಿಸ್ತಾನದಲ್ಲಿ ಯುಕೆಗಾಗಿ ಕೆಲಸ ಮಾಡಿದ ಆಫ್ಘನ್ನರಿಗೆ ಗ್ರೇಟ್ ಬ್ರಿಟನ್ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News