UK School: ವಿಚಿತ್ರ ವಾರ್ನಿಂಗ್! 'ಮಕ್ಕಳ ತಾಯಂದಿರರು ಶಾಲೆಯಲ್ಲಿ ತುಂಡುಡುಗೆ ಧರಿಸುವಂತಿಲ್ಲ'

ಶಾಲೆ ಬರೆದಿರುವ ಪತ್ರವನ್ನು ವಿರೋಧಿಸಿ ಮಗುವಿನ ತಾಯಿಯೊಬ್ಬರು ಶಾಲೆಗೆ ಇಂತಹ ಪತ್ರ ಬರೆಯುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ನಾವು ಎಂತಹ ಉಡುಗೆ ಬೇಕಾದರೂ ತೊಡಬಹುದು. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದು ಜನರು ತಿಳಿದಿರಬೇಕು ಎಂದು ಅವರು ಹೇಳಿದ್ದಾರೆ.

Written by - Nitin Tabib | Last Updated : Mar 22, 2021, 08:16 PM IST
  • ತುಂಡುಡುಗೆಯಲ್ಲಿ ವಿದ್ಯಾರ್ಥಿಗಳ ತಾಯಂದಿರರು ಶಾಲೆಗೆ ಬರುವಂತಿಲ್ಲ.
  • ವಾರ್ನಿಂಗ್ ಲೆಟರ್ ವಿರೋಧಿಸಿದ ವಿದ್ಯಾರ್ಥಿಗಳ ತಾಯಂದಿರರು.
  • ಶಾಲಾ ಆಡಳಿತದ ಲಾಜಿಕ್ ಕಂಡು ಬೆರಗಾದ ತಾಯಂದಿರರು
UK School: ವಿಚಿತ್ರ ವಾರ್ನಿಂಗ್! 'ಮಕ್ಕಳ ತಾಯಂದಿರರು ಶಾಲೆಯಲ್ಲಿ ತುಂಡುಡುಗೆ ಧರಿಸುವಂತಿಲ್ಲ' title=
UK School Asks Mothers Not To Wear Skimpy Clothes (File Photo)

ಲಂಡನ್: ಯುನೈಟೆಡ್ ಕಿಂಗ್ಡಂನ (United Kingdom) ವೆಸ್ಟ್ ಸಸೆಕ್ಸ್ ನಿಂದ ಆಶ್ಚರ್ಯಚಕಿತಗೊಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಒಂದು ಪ್ರೈಮರಿ ಶಾಲೆಯಲ್ಲಿ ಶಾಲಾ ಆಡಳಿತ ಮಕ್ಕಳ ತಾಯಂದಿರರಿಗೆ ಪತ್ರವೊಂದನ್ನು ಬರೆದು, ಮಕ್ಕಳಿಗೆ ಶಾಲೆಗೆ ಬಿಡಲು ಬರುವಾಗ ತುಂಡುಡುಗೆ  (UK School Asks Mothers Not To Wear Skimpy Clothes) ಧರಿಸಿ ಬರಬಾರದು ಎಂದು ವಾರ್ನಿಂಗ್ ನೀಡಿದೆ.

ವಿದ್ಯಾರ್ಥಿಗಳ ತಾಯಂದಿರರಿಗೆ ವಾರ್ನಿಂಗ್ ನೀಡಿದ ಶಾಲೆ
'ದಿ ಸನ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ವೆಸ್ಟ್ ಸಸೆಕ್ಸ್ ನ ಸೀಮಾರ್ ಪ್ರೈಮರಿ ಸ್ಕೂಲ್ ಬರೆದಿರುವ ಪತ್ರದಲ್ಲಿ ಮಕ್ಕಳ ತಾಯಂದಿರರು ಒಳ್ಳೆಯ ಬಟ್ಟೆಗಳನ್ನು ಧರಿಸಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು ಎನ್ನಲಾಗಿದೆ. ಒಳಉಡುಪಿನ ರೀತಿಯಲ್ಲಿರುವ ಬಟ್ಟೆಗಳನ್ನು ನೀವು ಧರಿಸುವಂತಿಲ್ಲ ಎಂದು ಹೇಳಲಾಗಿದೆ.

ಪ್ಲೇಗ್ರೌಂಡ್ ಎಟಿಕೆಟ್ಸ್ ಕಾರಣ ನೀಡಿದ ಶಾಲೆ
ಅತಿ ಹೆಚ್ಚು ತುಂಡುಡುಗೆ ಧರಿಸುವುದು ಉತ್ತಮ ರೂಢಿ ಅಲ್ಲ ಇದು ಆಟದ ಗ್ರೌಂಡ್ ಮಾರ್ಗಸೂಚಿಗಳ ಪ್ರಕಾರ ಸರಿ ಅಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ-ವಿಮಾನದ ಮೆಟ್ಟಿಲು ಏರುವ ವೇಳೆ 3 ಬಾರಿ ಎಡವಿದ ಅಮೇರಿಕ ಅಧ್ಯಕ್ಷ Joe Biden

ವಿದ್ಯಾರ್ಥಿಯೊಬ್ಬರ ತಾಯಿಯಿಂದ ವಿರೋಧ
ಶಾಲೆ ಹೊರಡಿಸಿರುವ ಈ ಪತ್ರಕ್ಕೆ ವಿದ್ಯಾರ್ಥಿಯೊಬ್ಬರ ತಾಯಿ ವಿರೋಧವ್ಯಕ್ತಪಡಿಸಿದ್ದಾರೆ. ನಾವೇನು ಧರಿಸಬೇಕು ಮತ್ತು ಏನನ್ನು ಧರಿಸಬಾರದು  ಎಂಬುದು ಶಾಲೆ ಹೇಳುವಂತಿಲ್ಲ ಎಂದು ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ಮರ್ರೋರ್ವ ವಿದ್ಯಾರ್ಥಿಯ ತಾಯಿ ಶಾಲಾ ಆಡಳಿತಕ್ಕೆ ಈ ರೀತಿಯ ಪತ್ರ ಬರೆಯುವ ಹಕ್ಕಿಲ್ಲ ಎಂದು ಹೇಳಿದ್ದಾರೆ. ಯಾವು ಯಾವುದೇ ರೀತಿಯ ಬಟ್ಟೆ ಧರಿಸಿದರೂ ಕೂಡ, ಮಹಿಳೆಯರನ್ನು ಗೌರವಿಸಬೇಕು ಎಂಬುದು ಜನರಿಗೆ ತಿಳಿದಿರಬೇಕು ಎಂದು ಅವರು ಹೇಳಿದ್ದಾರೆ. ನಾವು ಧರಿಸುವ ಬಟ್ಟೆಯ ಮೇಲೆ ಜನರ ಪ್ರಾಥಮಿಕತೆ ಇರಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಫಿಟ್ ಆಗಿರಲು Pushups ಮಾಡಿದ Tiger, ನಂಬಿಕೆ ಇಲ್ಲ ಅಂದ್ರೆ ನೀವೇ ನೋಡಿ ಈ ವೈರಲ್ ವೀಡಿಯೊ

ಶಾಲೆಯ ಈ ಆದೇಶಕ್ಕೆ ಬೆಂಬಲ ಕೂಡ ದೊರೆತಿದೆ
ಇನ್ನೊಂದೆಡೆ ಶಾಲೆ ಹೊರಡಿಸಿರುವ ಈ ಆದೇಶಕ್ಕೆ ಬೆಂಬಲ ಸೂಚಿಸಿರುವ ವಿದ್ಯಾರ್ಥಿಯೊಬ್ಬರ ತಾಯಿ, ಕೆಲ ತಾಯಂದಿರರು ಮಕ್ಕಳನ್ನು ಶಾಲೆಗೆ ಬಿಡಲು ಬರುವಾಗ ಗೌನ್, ಚಪ್ಪಲ್ ಹಾಗೂ ಮಿನಿ ಸ್ಕರ್ಟ್ ಧರಿಸಿ ಬರುತ್ತಾರೆ. ಕೆಲವರು ತಮ್ಮ ಶರೀರದ ಭಾಗಗಳು ಕಾಣಿಸಿಕೊಳ್ಳುವ ರೀತಿಯಲ್ಲಿ ಧರಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ-Goat Dance Video: ಇಂಗ್ಲಿಷ್ ಹಾಡಿಗೆ ಹೆಜ್ಜೆ ಹಾಕಿದ ಆಡುಗಳ ವಿಡಿಯೋ ಆಯ್ತು ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News