Three Headed Cheetah!: ಮೂರು ತಲೆಗಳುಳ್ಳ ಚಿರತೆಯನ್ನು ಎಲ್ಲಾದರು ನೋಡಿದ್ದೀರಾ? ನೋಡಿದ್ರೆ, ನೀವೂ ಛಾಯಾಗ್ರಾಹಕನ ಫ್ಯಾನ್ ಆಗುವಿರಿ

Three Headed Cheetah! - ಒಂದು ವೇಳೆ ನೀವೂ ಕೂಡ ಈ ಛಾಯಾಚಿತ್ರವನ್ನು ನೋಡಿ, ಒಂದೇ ಚಿರತೆಗೆ ಮೂರು ತಲೆಗಳು ಹೇಗೆ ಇರಲು ಸಾಧ್ಯ ಎಂದು ಯೋಚಿಸುತ್ತಿದ್ದರೆ, ಇದೊಂದು ವೈಲ್ಡ್ ಲೈಫ್ ಫೋಟೋಗ್ರಾಫರ್ ಕಮಾಲ್ ಆಗಿದೆ ಎಂಬುದು ಮಾತ್ರ ಸತ್ಯ. ಈ ಛಾಯಾಚಿತ್ರವನ್ನು ಕ್ಲಿಕ್ಕಿಸಿದ ಪರಿ ಒಂದೇ ಚಿರತೆಗೆ ಮೂರು ತಲೆಗಳಿವೆ ಎಂಬಂತಿದೆ. 

Written by - Nitin Tabib | Last Updated : Jan 28, 2022, 07:42 PM IST
  • ಮೂರು ತಲೆಗಳುಳ್ಳ ಚಿರತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್.
  • ಪಾಲ್ ಗೋಲ್ಡ್ ಸ್ಟೀನ್ ಅವರು ಈ ಭಾವಚಿತ್ರವನ್ನು ಕ್ಲಿಕ್ಕಿಸಿದ್ದಾರೆ.
  • ಚಿರತೆಗಳ ಸಂತತಿ ಕಡಿಮೆಯಾಗುತ್ತಿರುವುದು ಚಿಂತೆ ಹೆಚ್ಚಿಸುವ ವಿಷಯವಾಗಿದೆ.
Three Headed Cheetah!: ಮೂರು ತಲೆಗಳುಳ್ಳ ಚಿರತೆಯನ್ನು ಎಲ್ಲಾದರು ನೋಡಿದ್ದೀರಾ? ನೋಡಿದ್ರೆ, ನೀವೂ ಛಾಯಾಗ್ರಾಹಕನ ಫ್ಯಾನ್ ಆಗುವಿರಿ title=
Three Headed Cheetah (Facebook)

ನೈರೋಬಿ: Three Headed Cheetah! - ಗಂಟೆಗೆ ಸುಮಾರು 100 ಕಿ.ಮೀಗೂ ವೇಗವಾಗಿ ಧಾವಿಸುವ ಚಿರತೆಯನ್ನು (Cheetah) ವೇಗದ (Speed) ಗುರುತು ಎಂದುಪರಿಗಣಿಸಲಾಗುತ್ತದೆ. ವೇಗಕ್ಕೆ ಪರ್ಯಾಯ ಪದ  ಎಂದು ಪರಿಗಣಿಸಗುವ ಈ  ಪ್ರಾಣಿಯನ್ನು ವನ್ಯಜೀವಿ ಛಾಯಾಗ್ರಾಹಕರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಈ ಫೋಟೋವನ್ನು (Viral Photo) ನೋಡಿ ನೀವೂ ಕೂಡ ಆಶ್ಚರ್ಯಚಕಿತರಾಗುವಿರಿ.

ಮೂರು ತಲೆಗಳುಳ್ಳ ಚಿರತೆ
ಈ ಬೆರಗುಗೊಳಿಸುವ ಫೋಟೋವನ್ನು ವಿಂಬಲ್ಡನ್ ವನ್ಯಜೀವಿ ಛಾಯಾಗ್ರಾಹಕ ಪಾಲ್ ಗೋಲ್ಡ್‌ಸ್ಟೈನ್ (Wimbledon Wildlife Photographer Paul Goldstein)  ಅವರು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದಲ್ಲಿ (Kenya's Masai Mara National Park)  ಕ್ಲಿಕ್ಕಿಸಿದ್ದಾರೆ. ಈ ಫೋಟೋವನ್ನು ಪೌಲ್ ತಮ್ಮ ಫೇಸ್‌ಬುಕ್‌ (Facebook) ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ಸುಂದರವಾದ ಪ್ರಾಣಿಯ ಅದ್ಭುತ ಫೋಟೋ ಕ್ಲಿಕ್ಕಿಸುವುದೇ ಒಂದು ಸಂತೋಷ  ಎಂದು ಹೇಳುತ್ತಾ, ಇಂತಹ ಕ್ಷಣಗಳು ಮೋಡಿಮಾಡುತ್ತವೆ ಎಂದು ಬರೆದಿದ್ದಾರೆ.

ವೈರಲ್ ಆದ ಫೋಟೋ 
ವನ್ಯಜೀವಿ ಛಾಯಾಗ್ರಾಹಕರು ಒಂದೇ ಚಿರತೆಯ ಮೂರು ತಲೆಗಳು ಮೂರು ವಿಭಿನ್ನ ದಿಕ್ಕುಗಳಲ್ಲಿ ನೋಡುತ್ತಿರುವಂತೆ ತೋರುವ ರೀತಿಯಲ್ಲಿ ಈ ಫೋಟೋವನ್ನು ಸೆರೆಹಿಡಿದಿದ್ದಾರೆ. ಪಾಲ್ ಅವರ ಈ ಪೋಸ್ಟ್‌ಗೆ ಇದುವರೆಗೆ  2.1 ಸಾವಿರ ಲೈಕ್‌ಗಳು ಮತ್ತು 150 ಕ್ಕೂ ಹೆಚ್ಚು ಶೇರ್‌ಗಳು ಬಂದಿವೆ. ಈ ಫೋಟೋದಲ್ಲಿ ಚಿರತೆಯ ಮೂರು ತಲೆಗಳನ್ನು ನೋಡಿದ ಜನರು ಪಾಲ್ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ  ಮತ್ತು ಅವರ ಪರ್ಫೆಕ್ಟ್ ಟೈಮಿಂಗ್ ಮತ್ತು ತಾಳ್ಮೆಯನ್ನು ಹೊಗಳುತ್ತಿದ್ದಾರೆ.

ಇದನ್ನೂ ಓದಿ-The Gate Of Hell: ಈ ದೇವಾಲಯಕ್ಕೆ ‘ನರಕದ ದ್ವಾರ’ ಎನ್ನುತ್ತಾರೆ, ಯಾರು ಹೋದರೂ ಸಾಯುತ್ತಾರಂತೆ!

ಏಳು ಗಂಟೆಗಳ ಶ್ರಮದ ಬಳಿಕ ಸಿಕ್ಕ ಸುಂದರ ಫಲ 
ಮೂರು ಚಿರತೆಗಳ ಈ ಒಂದು ಕ್ಲಿಕ್‌ಗಾಗಿ ಪಾಲ್ ಏಳು ಗಂಟೆಗಳ ಕಾಲ ಮಳೆಯಲ್ಲಿ ಕಳೆದಿದ್ದಾರೆ. ನಂತರ ಈ ವಿಶಿಷ್ಟ ಫೋಟೋ ಅವರ  ಕ್ಯಾಮೆರಾ ಕಣ್ಣಲ್ಲಿ  ಸೆರೆಯಾಗಿದೆ. ಇಂಟರ್‌ನೆಟ್‌ನಲ್ಲಿ ಇದೀಗ ಭಾರಿ ವೈರಲ್ ಆಗಿರುವ ಈ ಫೋಟೋ ಕ್ಲಿಕ್ಕಿಸುವುದರ ಹಿಂದೆ ಇರುವ ಶ್ರಮ ನಿಜಕ್ಕೂ ಶ್ಲಾಘನೀಯ ಅಂತಾನೆ ಹೇಳಬೇಕು.

ಇದನ್ನೂ ಓದಿ-Viral Photo: ಸಾರ್ವಜನಿಕವಾಗಿ ಕಪಿಲ್ ದೇವ್‌ಗೆ ಮುತ್ತಿಟ್ಟ ರಣವೀರ್ ಸಿಂಗ್, 'Awkward kiss' ಫೋಟೋ ವೈರಲ್.!

ಚಿರತೆಗಳ ಸಂತತಿ ಕ್ಷೀಣಿಸುತ್ತಿದೆ 
ಆಫ್ರಿಕಾದಲ್ಲಿ ಇಡೀ ವಿಶ್ವದಲ್ಲೇ ಕೆಲವೇ ಚಿರತೆಗಳು ಉಳಿದಿವೆ. ತನ್ನ ಬೇಟೆಯನ್ನು ಎಂದಿಗೂ ಬಿಡದ ಚಿರತೆ ಇಂದು ತಾನೇ ಅಪಾಯದಲ್ಲಿದೆ. ದೊಡ್ಡ ಬೆಕ್ಕುಗಳ ಪ್ರಜಾತಿಗೆ ಸೇರಿದ ಈ ಪ್ರಾಣಿಗೆ ರಾತ್ರಿಯ ಹೊತ್ತು ಅಷ್ಟೊಂದು ಸರಿಯಾಗಿ ಕಾಣಿಸುವುದಿಲ್ಲ.  ಆದ್ದರಿಂದ ಇವು ಹಗಲಿನಲ್ಲಿಯೇ ಬೇಟೆಯಾಡುತ್ತವೆ. ಅಚ್ಚರಿಯ ಸಂಗತಿ ಎಂದರೆ ಇಷ್ಟು ವೇಗದ ಪ್ರಾಣಿಗೆ ಮರ ಹತ್ತಲೂ ಕಷ್ಟವಾಗುತ್ತದೆ.

ಇದನ್ನೂ ಓದಿ-ಮರದಲ್ಲಿ ಕಾಣಿಸಿಕೊಂಡಿತು ಮೂರು ತಲೆಯ ಹಾವು..! ಮೂರೂ ಹೆಡೆಗಳನ್ನು ಎತ್ತಿ ನಿಂತಿರುವ ಸರ್ಪ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News