ಬಿಗ್‌ ಬಾಸ್‌ನಿಂದ ಬರ್ತಿದ್ದಂತೆ ಮದುವೆ ಬಗ್ಗೆ ನಾಚುತ್ತಲೇ ಅಪ್ಡೇಟ್‌ ಕೊಟ್ಟ ಚೈತ್ರಾ ಕುಂದಾಪುರ: ಹುಡುಗ ಯಾರು ಗೊತ್ತಾ? ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರಾ?

Chaitra Kundapur marriage: ಬಿಗ್ ಬಾಸ್ ಸೀಸನ್ 11ರಿಂದ ಕಳೆದ ವಾರ ಹೊರ ಬಿದ್ದ ಸ್ಪರ್ಧಿ ಚೈತ್ರಾ ಕುಂದಾಪುರ ತಮ್ಮ ಮದುವೆ ಬಗ್ಗೆ ಅಪ್ಡೇಟ್‌ ನೀಡಿದ್ದಾರೆ. ಮಾತಿನಿಂದಲೇ ಸಖತ್‌ ಸದ್ದು ಮಾಡಿದ್ದ ಈ ಸ್ಪರ್ಧಿ ಮದುವೆ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ,

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಬಿಗ್ ಬಾಸ್ ಸೀಸನ್ 11ರಿಂದ ಕಳೆದ ವಾರ ಹೊರ ಬಿದ್ದ ಸ್ಪರ್ಧಿ ಚೈತ್ರಾ ಕುಂದಾಪುರ ತಮ್ಮ ಮದುವೆ ಬಗ್ಗೆ ಅಪ್ಡೇಟ್‌ ನೀಡಿದ್ದಾರೆ. ಮಾತಿನಿಂದಲೇ ಸಖತ್‌ ಸದ್ದು ಮಾಡಿದ್ದ ಈ ಸ್ಪರ್ಧಿ ಮದುವೆ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ

2 /5

"ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದ ಬಗ್ಗೆ ಮನೆಯವರ ನಡುವೆ ಮಾತುಕಥೆ ನಡೆಯಬೇಕಿದೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ" ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಹೇಳಿದ್ದಾರೆ.

3 /5

ಇನ್ನು ಹುಡುಗ ಯಾರು ಎಂಬುದನ್ನು ಚೈತ್ರಾ ರಿವೀಲ್ ಮಾಡಿಲ್ಲ. ಆದರೂ ಅಭಿಮಾನಿಗಳು ಅವ್ರು ಇವ್ರು ಅಂತಾ ಗೆಸ್ ಮಾಡುತ್ತಿದ್ದಾರೆ.  ಅಷ್ಟೇ ಅಲ್ಲದೆ, ಚೈತ್ರಾ ಮದುವೆಯಾಗುವ ಹುಡುಗ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಹುದಾ? ಎಂದು ಗೆಸ್‌ ಮಾಡುತ್ತಾ ಎಲ್ಲಾ ಬ್ಯಾಚುಲರ್‌ಗಳ ಫೋಟೋದ ಪಕ್ಕ ಚೈತ್ರಾ ಕುಂದಾಪುರ ಫೋಟೋವಿಟ್ಟು ಜೋಡಿ ಹೇಗಿದೆ ಎಂದು ಮ್ಯಾಚ್ ಮಾಡುತ್ತಿದ್ದಾರೆ.  

4 /5

ಚೈತ್ರಾ ಈ ಹಿಂದೆ ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ತಮ್ಮ ಮದುವೆ ವಿಚಾರವನ್ನು ಪರೋಕ್ಷವಾಗಿ ಬಹಿರಂಗಪಡಿಸಿದ್ದರು. ಅವರ ತಾಯಿ ಕೂಡ, "ಚೈತ್ರಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವುದು ನಮಗೆ ಗೊತ್ತಿರಲಿಲ್ಲ ಕೊನೆ ಕ್ಷಣದಲ್ಲಿಈ ವಿಚಾರ ಗೊತ್ತಾಗಿತ್ತು. ಹೀಗಾಗಿ ಇಲ್ಲಿಂದ ಬಂದ ಮೇಲೆ ಮದುವೆ ಮಾಡಬೇಕು" ಎಂದು ಹೇಳಿದ್ದರು.  

5 /5

ಅಷ್ಟೇ ಅಲ್ಲದೆ, ಪ್ರತಿ ಸಲ ಬಿಗ್ ಬಾಸ್ ಮನೆಯಲ್ಲಿ ಮದುವೆ ವಿಚಾರ ಮಾತನಾಡಿದಾಗ ಚೈತ್ರಾ ಮನಸ್ಸಿನಲ್ಲೇ ಖುಷಿಪಟ್ಟಿರುವುದು ಕಂಡುಬಂದಿತ್ತು. ಆದರೆ ಈ ಹಿಂದೊಮ್ಮೆ ವ್ಯಕ್ತಿತ್ವದ ಪ್ರಶ್ನೆ ಬಂದಾಗ ಗರಂ ಆಗಿದ್ದ ಚೈತ್ರಾ, "ನಾನು ಮದುವೆ ನಿಶ್ಚಯ ಮಾಡಿಕೊಂಡು ಬಂದಿದ್ದೀನಿ. ನನ್ನ ಕ್ಯಾರೆಕ್ಟರ್ ವಿಷಯಕ್ಕೆ ಯಾವನಾದರೂ ಬಂದ್ರೇ..." ಅಂತಾ ಖಡಕ್‌ ವಾರ್ನಿಂಗ್‌ ಕೊಟ್ಟಿದ್ರು.