ಮನೆಯ ಈ ದಿಕ್ಕಿನಲ್ಲಿ ಕಿಟಕಿ ಇದ್ದರೆ ದುಡಿದ ಹಣವೆಲ್ಲಾ ನೀರಿನಂತೆ ಹರಿದು ಹೋಗುವುದು! ಒಂದೇ ಒಂದು ಪೈಸೆ ಕೈಯ್ಯಲ್ಲಿ ನಿಲ್ಲುವುದಿಲ್ಲ

Correct Vastu Direction of Window : ಯಾವುದೇ ಮನೆಯ ಕಿಟಕಿಯನ್ನು ಶುದ್ಧ ಗಾಳಿ ಮತ್ತು ಬೆಳಕಿನ ಉದ್ದೇಶಕ್ಕಾಗಿ ಇರಿಸಲಾಗುತ್ತದೆ. ಆದರೆ ಅದು ಸರಿಯಾದ ದಿಕ್ಕಿನಲ್ಲಿ ಇದ್ದರೆ ಮಾತ್ರ ಮನೆಗೆ ಬೆಳಕು, ಇಲ್ಲವಾದರೆ ನಕಾರಾತ್ಮಕ ಶಕಿಗೆ ಕಾರಣವಾಗಿ ಮನೆಯನ್ನಿ ಕತ್ತಲು ಮಾಡಿ ಬಿಡುತ್ತದೆ.   

Written by - Ranjitha R K | Last Updated : Jan 14, 2025, 04:59 PM IST
  • ಶುದ್ಧ ಗಾಳಿ ಮತ್ತು ಬೆಳಕಿನ ಉದ್ದೇಶಕ್ಕಾಗಿ ಮನೆಯಲ್ಲಿ ಕಿಟಕಿ
  • ಮನೆಯ ಕಿಟಕಿ ಈ ದಿಕ್ಕಿಗೆ ಇರಬೇಕು
  • ಈ ದಿಕ್ಕಿನಲ್ಲಿ ಕಿಟಕಿ ಇದ್ದರೆ ಸಮೃದ್ದಿ
ಮನೆಯ ಈ ದಿಕ್ಕಿನಲ್ಲಿ ಕಿಟಕಿ ಇದ್ದರೆ ದುಡಿದ ಹಣವೆಲ್ಲಾ ನೀರಿನಂತೆ ಹರಿದು ಹೋಗುವುದು! ಒಂದೇ ಒಂದು ಪೈಸೆ ಕೈಯ್ಯಲ್ಲಿ ನಿಲ್ಲುವುದಿಲ್ಲ   title=

Correct Vastu Direction of Window : ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಜೀವನದಲ್ಲಿ ದಕ್ಷತೆ ಮತ್ತು ಯಶಸ್ಸು ಬೇಕಿದ್ದರೆ ನಮ್ಮ ಮನೆಯ ಕಿಟಕಿ ಯಾವ ದಿಕ್ಕಿಗೆ ಇದೆ ಎನ್ನುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಕಿಟಕಿಗಳು ಗಾಳಿ ಬೆಳಕನ್ನು ಮಾತ್ರವಲ್ಲದೆ ಸಂತೋಷ ಮತ್ತು ಅದೃಷ್ಟವನ್ನು ಕೂಡಾ ತರುತ್ತವೆ.   

ಯಾವುದೇ ಮನೆಯ ಕಿಟಕಿಯನ್ನು ಶುದ್ಧ ಗಾಳಿ ಮತ್ತು ಬೆಳಕಿನ ಉದ್ದೇಶಕ್ಕಾಗಿ ಇರಿಸಲಾಗುತ್ತದೆ. ಆದರೆ ಅದು ಸರಿಯಾದ ದಿಕ್ಕಿನಲ್ಲಿ ಇದ್ದರೆ ಮಾತ್ರ ಮನೆಗೆ ಬೆಳಕು, ಇಲ್ಲವಾದರೆ ನಕಾರಾತ್ಮಕ ಶಕಿಗೆ ಕಾರಣವಾಗಿ ಮನೆಯನ್ನು ಕತ್ತಲು ಮಾಡಿ ಬಿಡುತ್ತದೆ. 

ಇದನ್ನೂ ಓದಿ : ಮಹಾದೇವ ನಂದಿಯಂತೆಯೇ ಪ್ರೀತಿಸುವ ಏಕೈಕ ರಾಶಿ... ಈ ಜನರು ಮಹಾಪಾಪ ಮಾಡಿದ್ದರೂ ಕ್ಷಮಿಸಿ ಬದುಕಿನ ದಿಕ್ಕನ್ನೇ ಅದೃಷ್ಟದತ್ತ ವಾಲಿಸುವ ಸಾಕ್ಷಾತ್‌ ಮಹೇಶ್ವರ

ಮನೆಯ ಉತ್ತರ ದಿಕ್ಕಿಗೆ ಕಿಟಕಿ ಇದ್ದರೆ ಆ ಮನೆಯಲ್ಲಿ ಸಂತೋಷ  ಸಮೃದ್ಧಿ ತುಂಬಿ ತುಳುಕುತ್ತದೆ. ಆದರೆ ಮನೆಯ ದಕ್ಷಿಣ ದಿಕ್ಕಿಗೆ ಯಾವುದೇ ಕಾರಣಕ್ಕೂ ಕಿಟಕಿ ಇರಲೇಬಾರದು. ಒಂದು ವೇಳೆ ಈ ದಿಕ್ಕಿಗೆ ಕಿಟಕಿ ಇದ್ದರೆ ಅದನ್ನು ಸದಾ ಮುಚ್ಚಿಯೇ ಇಡಬೇಕು. 

ಮಾತ್ರವಲ್ಲ ಈ ದಿಕ್ಕಿನಲ್ಲಿ ಇರುವ ಕಿಟಕಿ ಬಳಿ ಗಿಡವನ್ನು ನೆಡಬೇಕು.ದಕ್ಷಿಣ ದಿಕ್ಕು ಯಮನ ದಿಕ್ಕು, ಆದ್ದರಿಂದ ಈ ದಿಕ್ಕಿನಲ್ಲಿ ಕಿಟಕಿಗಳನ್ನು ನಿರ್ಮಿಸುವುದು ಸರಿಯಲ್ಲ. ಈ ದಿಕ್ಕಿನಲ್ಲಿ ಇರುವ ಕಿಟಕಿಯನ್ನು ಬಳಸುವುದರಿಂದ ನಕಾರಾತ್ಮಕ ಶಕ್ತಿ, ಮಾನಸಿಕ ತೊಂದರೆ ಮತ್ತು ರೋಗಗಳು ಹೆಚ್ಚಾಗುವ ಸಾಧ್ಯತೆಯಿದೆ.

ವಿಂಡ್ ಚೈನ್ ಬಳಕೆ ಪ್ರಯೋಜನಕಾರಿ :
ಕಿಟಕಿಯು ಪಶ್ಚಿಮ ಅಥವಾ ಈಶಾನ್ಯಕ್ಕೆ ಇದ್ದರೆ ಅಲ್ಲಿ ವಿಂಡ್ ಚೈಮ್ ಹಾಕಬೇಕು. ಇದು ಸಮೃದ್ಧ ಮತ್ತು ಉತ್ತಮ ಜೀವನಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : ಸಂಕ್ರಾಂತಿ ಶುಭ ದಿನವೇ ಧನಯೋಗ !ಈ ರಾಶಿಯವರ ಬಾಳಲ್ಲಿ ಇಂದಿನಿಂದ ತುಂಬುವುದು ಕುಬೇರ ಖಜಾನೆ !ಇನ್ನು ನಿಮ್ಮದು ಸುಖ ಭೋಗದ ಜೀವನ

ಊಟದ ಕೋಣೆಯ ಕಿಟಕಿ ಹಾನಿಕಾರಕ :
ಮನೆಯ ಊಟದ ಕೋಣೆಯಲ್ಲಿ ಹೆಚ್ಚು ಕಿಟಕಿಗಳಿರುವುದರಿಂದ ಡೈನಿಂಗ್ ಟೇಬಲ್ ನ ವಾತಾವರಣ ಹಾಳಾಗುವ ಸಾಧ್ಯತೆ ಹೆಚ್ಚಿದ್ದು, ಮನೆಯ ಸದಸ್ಯರ ನಡುವೆ ವೈಮನಸ್ಸು ಮೂಡುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದ್ದರಿಂದ, ಡೈನಿಂಗ್ ಹಾಲ್ ನಲ್ಲಿರುವ ಕಿಟಕಿಯನ್ನು ಯಾವಾಗಲೂ ಮುಚ್ಚಿಡಬೇಕು.  

ಸ್ಲೈಡಿಂಗ್ ವಿಂಡೋ :
ಇನ್ನು ಮನೆಯಲ್ಲಿ ಸ್ಲೈಡಿಂಗ್ ವಿಂಡೋಗಳಿದ್ದರೆ ಅವುಗಳಲ್ಲಿ ಅರ್ಧದಷ್ಟು ಮುಚ್ಚಿಡಿ. ನಂತರ ಅಲ್ಲಿ ವಿಂಡ್ ಚೈಮ್ ಅನ್ನು ನೇತುಹಾಕಿ. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News