ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ವಾಜಿರಿಸ್ತಾನದಲ್ಲಿ ದೊಡ್ಡ ಭಯೋತ್ಪಾದಕ ದಾಳಿ (Terror attack) ನಡೆದಿದ್ದು, ಇದರಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಬಲೂಚಿಸ್ತಾನದ ಒರ್ಮರಾದಲ್ಲಿರುವ ಸ್ಟೇಟ್ ಆಯಿಲ್ ಅಂಡ್ ಗ್ಯಾಸ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ (ಒಜಿಡಿಸಿಎಲ್) ನ ಬೆಂಗಾವಲು ಮೇಲೆ ದಾಳಿ ನಡೆದಿದ್ದು ಇದರಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಅದೇ ಸಮಯದಲ್ಲಿ ಉತ್ತರ ವಾಜಿರಿಸ್ತಾನದಲ್ಲಿ ನಡೆದ ಎರಡನೇ ದಾಳಿಯಲ್ಲಿ ಕನಿಷ್ಠ ಆರು ಸೈನಿಕರು ಮೃತಪಟ್ಟಿದ್ದಾರೆ.
ಬಲೂಚಿಸ್ತಾನದಲ್ಲಿ 8 ಸೈನಿಕರು ಸಾವನ್ನಪ್ಪಿದ್ದಾರೆ:-
ಬಲೂಚಿಸ್ತಾನ್ (Balochistan) ದಾಳಿಯಲ್ಲಿ ತೈಲ ಮತ್ತು ಅನಿಲ ಅಭಿವೃದ್ಧಿ ಕಂಪನಿಯ ಏಳು ಉದ್ಯೋಗಿಗಳು ಮತ್ತು ಪಾಕಿಸ್ತಾನ ಗಡಿನಾಡು ಪಡೆಗಳ ಎಂಟು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರಿಗೆ ಬಿರಿಯಾನಿ ನೀಡುತ್ತಿದ್ದ ಪಾಕಿಸ್ತಾನದಲ್ಲಿ ಈಗ ಹಿಟ್ಟಿಗೂ ಪರದಾಟ
ಆರಂಭದಲ್ಲಿ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಈ ದಾಳಿಯನ್ನು ನಡೆಸಿದೆ ಎಂದು ಹೇಳಲಾಗಿತ್ತು, ಆದರೆ ನಂತರ ಹೊಸ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವುದಾಗಿ ತಿಳಿದುಬಂದಿದೆ.
ಉತ್ತರ ವಾಜಿರಿಸ್ತಾನದಲ್ಲಿ 6 ಸೈನಿಕರು ಹುತಾತ್ಮ:
ಪಾಕಿಸ್ತಾನದ (Pakistan) ಪ್ರಕ್ಷುಬ್ಧ ವಾಯುವ್ಯ ಬುಡಕಟ್ಟು ಪ್ರದೇಶವಾದ ಉತ್ತರ ವಾಜಿರಿಸ್ತಾನದಲ್ಲಿ ಭಯೋತ್ಪಾದಕರು ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿ ಸೇರಿದಂತೆ ಕನಿಷ್ಠ ಆರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಯುಎನ್‌ನಲ್ಲಿ ಪಾಕಿಸ್ತಾನದ ಮೇಲೆ ಭಾರತದ ವಾಗ್ಧಾಳಿ
ಉತ್ತರ ವಾಜಿರಿಸ್ತಾನದ ರಾಜಮಕ್ ಪ್ರದೇಶದ ಬಳಿ ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಭಯೋತ್ಪಾದಕರು ಐಇಡಿ (IED)ಯನ್ನು ಸ್ಫೋಟಿಸಿದ್ದಾರೆ ಎಂದು ಪಾಕಿಸ್ತಾನ ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯಲ್ಲಿ ಓರ್ವ ಕ್ಯಾಪ್ಟನ್ ಮತ್ತು ಇತರ ಐದು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ