Russian Election 2024: ಪ್ರಚಂಡ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಪುಟಿನ್..!

Russian Election 2024:ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು.

Written by - Zee Kannada News Desk | Last Updated : Mar 19, 2024, 09:06 PM IST
  • ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ, ಚುನಾವಣಾ ವಿಜಯದ ನಂತರ, ಪುಟಿನ್ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಬಹುದು
  • ಅವರು ರಷ್ಯಾದ ಇಮೇಜ್ ಅನ್ನು ಹೆಚ್ಚಿಸುತ್ತಾರೆ
  • ಜಾಗತಿಕ ದಕ್ಷಿಣದಲ್ಲಿ ಅದರ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ
 Russian Election 2024: ಪ್ರಚಂಡ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಪುಟಿನ್..! title=

Russian Election 2024: ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಶೇಕಡಾ 87.29 ಮತಗಳನ್ನು ಪಡೆಯುವ ಮೂಲಕ ಪ್ರಚಂಡ ಗೆಲುವು ಸಾಧಿಸಿದ್ದಾರೆ.ಆ ಮೂಲಕ ಮತ್ತೊಂದು ಅಧಿಕಾರಾವಧಿಗೆ ಅಧ್ಯಕ್ಷರಾಗಲು ಸನ್ನದ್ದರಾಗಿದ್ದಾರೆ.ಡಿಸೆಂಬರ್ 1999 ರಿಂದ ಪುಟಿನ್ ರಷ್ಯಾವನ್ನು ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಮುನ್ನಡೆಸುತ್ತಿದ್ದಾರೆ.

ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು.

ಇದನ್ನೂ ಓದಿ : Weather Update: ಇನ್ನೆರಡು ದಿನ ದೇಶದ ಈ ಭಾಗಗಳಲ್ಲಿ ಮಳೆ ಎಚ್ಚರಿಕೆ ನೀಡಿದ ಐಎಂಡಿ

ಪುಟಿನ್ ತನ್ನ ವಿಜಯವನ್ನು ಉಕ್ರೇನ್ ಯುದ್ಧಕ್ಕೆ ಅಗಾಧವಾದ ಸಾರ್ವಜನಿಕ ಬೆಂಬಲದ ಸಾಕ್ಷಿಯಾಗಿ ಬಳಸುತ್ತಾರೆ ಎನ್ನಲಾಗಿದೆ.ಎಪಿ ಪ್ರಕಾರ, ಅನೇಕ ವೀಕ್ಷಕರು ಅವರು ತಮ್ಮ ನಿಲುವನ್ನು ಕಠಿಣಗೊಳಿಸುತ್ತಾರೆ ಮತ್ತು ಯುದ್ಧವನ್ನು ಉಲ್ಬಣಗೊಳಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಕ್ರೆಮ್ಲಿನ್ ಸೈನ್ಯವನ್ನು ಬಲಪಡಿಸಬಹುದು ಮತ್ತು ಹೊಸ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸಬಹುದು ಎಂದು ಕೆಲವರು ಹೇಳುತ್ತಾರೆ.

ಪುಟಿನ್ ಅವರ ಹೆಚ್ಚಿನ ಟೀಕಾಕಾರರು ಜೈಲಿನಲ್ಲಿದ್ದಾರೆ.ಪುಟಿನ್ ಅವರ ದೊಡ್ಡ ಎದುರಾಳಿ ಅಲೆಕ್ಸಿ ನವಲ್ನಿ ಕಳೆದ ತಿಂಗಳು ರಷ್ಯಾದ ಜೈಲಿನಲ್ಲಿ ನಿಧನರಾದರು.ಪುಟಿನ್ ವಿಜಯದ ನಂತರ,ರಾಜಕೀಯ ವಿರೋಧಿಗಳು ಮತ್ತು ಯುದ್ಧ ವಿಮರ್ಶಕರ ವಿರುದ್ಧ ದಮನದ ವ್ಯಾಪ್ತಿಯು ಹೆಚ್ಚಾಗುವ ಸಾಧ್ಯತೆಯಿದೆ. 

ವಿದೇಶಾಂಗ ನೀತಿ:

ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ, ಚುನಾವಣಾ ವಿಜಯದ ನಂತರ, ಪುಟಿನ್ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅಳವಡಿಸಿಕೊಳ್ಳಬಹುದು ಎಂದು ನಂಬಲಾಗಿದೆ.ಅವರು ರಷ್ಯಾದ ಇಮೇಜ್ ಅನ್ನು ಹೆಚ್ಚಿಸುತ್ತಾರೆ ಮತ್ತು ಜಾಗತಿಕ ದಕ್ಷಿಣದಲ್ಲಿ ಅದರ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News