Russian Election 2024:ಚುನಾವಣೆಗೂ ಮೊದಲು, ರಷ್ಯಾದಲ್ಲಿ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಸರ್ಕಾರದ ಭವಿಷ್ಯದ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಚುನಾವಣೆಯ ಮೊದಲು ಸರ್ಕಾರದ ಪ್ರಚಾರಕ ಡಿಮಿಟ್ರಿ ಕಿಸೆಲಿಯೊವ್ ಅವರೊಂದಿಗಿನ ಸಂದರ್ಶನದಲ್ಲಿ, ಪುಟಿನ್ ಚುನಾವಣೆಯ ನಂತರ ಸರ್ಕಾರದಲ್ಲಿ ಬದಲಾವಣೆಯನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗೆ ಪುಟಿನ್, "ನಾವು ಚುನಾವಣೆಯ ನಂತರ, ಮತಗಳ ಎಣಿಕೆಯ ಬಗ್ಗೆ ಮಾತನಾಡಬೇಕಾಗಿದೆ" ಎಂದು ಹೇಳಿದರು.
ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ.
ಪ್ರಧಾನಿ ನರೇಂದ್ರ ಮೋದಿಯನ್ನು ರಷ್ಯಾದ "ದೊಡ್ಡ ಸ್ನೇಹಿತ ಎಂದು ಕರೆದಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನವು ದೇಶದ ಆರ್ಥಿಕತೆಯ ಮೇಲೆ "ನಿಜವಾದ ಪ್ರಭಾವಶಾಲಿ ಪರಿಣಾಮವನ್ನು" ಹೊಂದಿದೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿಯುದ್ಧದ ಪರಿಸ್ಥಿತಿ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಭಾರತವು ಅಲ್ಲಿನ ತನ್ನ ಪ್ರಜೆಗಳಿಗೆ ತೊರೆಯಲು ಸೂಚಿಸಿದೆ.
'ಉಕ್ರೇನ್ನಾದ್ಯಂತ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಹಗೆತನದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಉಕ್ರೇನ್ಗೆ ಪ್ರಯಾಣಿಸದಂತೆ ಸೂಚಿಸಲಾಗಿದೆ.ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್ನಲ್ಲಿರುವ ಭಾರತೀಯ ನಾಗರಿಕರು ಉಕ್ರೇನ್ನಿಂದ ಬೇಗನೆ ಹೊರಡಲು ಸಲಹೆ ನೀಡಿದ್ದಾರೆ'ಎಂದು ಉಕ್ರೇನ್ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.
ಉಕ್ರೇನ್ ಯುಎಸ್ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಗೆ ಸೇರಿಸಿಕೊಂಡರೆ, ಉಕ್ರೇನ್ನಲ್ಲಿನ ಸಂಘರ್ಷವು ಮೂರನೇ ಮಹಾಯುದ್ಧವಾಗಿ ಉಲ್ಬಣಗೊಳ್ಳುವುದು ಖಾತರಿಪಡಿಸುತ್ತದೆ ಎಂದು ರಷ್ಯಾದ ಭದ್ರತಾ ಮಂಡಳಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಉಕ್ರೇನ್ನ ಮಿಲಿಟರಿ ಶರಣಾದರೆ ಮಾಸ್ಕೋ ಮಾತುಕತೆಗೆ ಸಿದ್ಧವಾಗಿದೆ ಎಂದು ರಷ್ಯಾ ಹೇಳಿದೆ.ಉಕ್ರೇನ್ ಆಕ್ರಮಣದ ಮೊದಲ ದಿನವು ತನ್ನ ಎಲ್ಲಾ ಗುರಿಗಳನ್ನು ಸಾಧಿಸಿದೆ ಮತ್ತು 83 ಭೂ-ಆಧಾರಿತ ಉಕ್ರೇನಿಯನ್ ಗುರಿಗಳನ್ನು ನಾಶಪಡಿಸಿದೆ ಎಂದು ಮಾಸ್ಕೋ ತಿಳಿಸಿದೆ.
ಕ್ರೆಮ್ಲಿನ್ ನಾಯಕ ವ್ಲಾಡಿಮಿರ್ ಪುಟಿನ್ ಒಬ್ಬ ಕೊಲೆಗಾರನೆಂಬ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಅವರು ಕ್ಷಮೆಯಾಚಿಸಬೇಕೆಂದು ರಷ್ಯಾದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಈ ಪ್ರವಾಸವು ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ನಿರ್ದೇಶನ, ಹೊಸ ಶಕ್ತಿ ಮತ್ತು ಹೊಸ ವೇಗ ನೀಡುತ್ತದೆ ಎಂದು ಹೇಳಿದ್ದಾರೆ. 20 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ಮತ್ತು ಪೂರ್ವ ಆರ್ಥಿಕ ವೇದಿಕೆಯ (ಇಇಎಫ್) ಐದನೇ ಸಭೆಯಲ್ಲಿ ಭಾಗವಹಿಸಲು ಮೋದಿ ಬುಧವಾರ ವ್ಲಾಡಿವೋಸ್ಟಾಕ್ಗೆ ಆಗಮಿಸಿ ರಷ್ಯಾದ ಸರ್ಕಾರಿ ಸ್ವಾಮ್ಯದ ಟಾಸ್ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.