ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದಿದ್ದಕ್ಕೆ ಬಿತ್ತು 2 ಲಕ್ಷ ರೂ. ದಂಡ

ಕೊರೊನಾದ ಗಂಭೀರತೆ ಅರಿಯದೆ ಮಾಸ್ಕ್ ಧರಿಸದೇ, ಮನೆಯಿಂದ ಹೊರಬರುತ್ತಿರುವ ಅನೇಕರು ನಮ್ಮ ಮುಂದೆ ಇದ್ದಾರೆ. ಹೀಗೆ ಮಾಡುವುದರಿಂದ ತಮಗೆ ಮಾತ್ರವಲ್ಲದೆ, ಇತರರಿಗೂ ಅಪಾಯವನ್ನು ತಂದೊಡ್ಡುತ್ತಾರೆ ಎನ್ನುವುದನ್ನು ಅವರು ಮರೆಯುತ್ತಾರೆ

Written by - Ranjitha R K | Last Updated : Feb 3, 2022, 04:12 PM IST
  • ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದ ವ್ಯಕ್ತಿ
  • ವ್ಯಕ್ತಿಗೆ ಬಿತ್ತು 2 ಲಕ್ಷ ರೂಪಾಯಿಗಳ ದಂಡ
  • ಇಂಗ್ಲೆಂಡಿನ ವ್ಯಕ್ತಿಯೊಬ್ಬರಿಗೆ ಬಿಟ್ಟು ಭಾರೀ ದಂಡ
ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದಿದ್ದಕ್ಕೆ ಬಿತ್ತು 2 ಲಕ್ಷ ರೂ. ದಂಡ  title=
ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದ ವ್ಯಕ್ತಿ (file photo)

ನವದೆಹಲಿ : ಎರಡು ವರ್ಷಗಳಿಂದ ಕೊರೊನಾ ವೈರಸ್ (Coronavirus) ಜಗತ್ತನ್ನೇ ಬಾಧಿಸುತ್ತಿದೆ.  ಕೊರೊನಾದಿಂದ (Corona) ಪಾರಾಗಲು ಜನರು ಮಾಸ್ಕ್ ಧರಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. .ಯಾಕೆಂದರೆ ವೈರಸ್ ನಿಂದ ಬಚಾವಾಗಲು ಮಾಸ್ಕ್ (Mask) ಅನ್ನು ಬಹಳ ಪರಿಣಾಮಕಾರಿ ಅಸ್ತ್ರ ಎಂದೇ ಹೇಳಲಾಗುತ್ತಿದೆ. ಯಾಕೆಂದರೆ ಕರೋನಾ ಮೂರನೇ ಅಲೆಯಲ್ಲಿ ಲಸಿಕೆ ಪಡೆದವರು ಕೂಡಾ ಸೋಂಕಿತರಾಗಿದ್ದು ಕಂಡು ಬಂದಿತ್ತು. 

ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದಿದ್ದಕ್ಕೆ ದಂಡ : 
ಆದರೆ, ಕೊರೊನಾದ (Coronavirus) ಗಂಭೀರತೆ ಅರಿಯದೆ ಮಾಸ್ಕ್ ಧರಿಸದೇ, ಮನೆಯಿಂದ ಹೊರಬರುತ್ತಿರುವ ಅನೇಕರು ನಮ್ಮ ಮುಂದೆ ಇದ್ದಾರೆ. ಹೀಗೆ ಮಾಡುವುದರಿಂದ ತಮಗೆ ಮಾತ್ರವಲ್ಲದೆ, ಇತರರಿಗೂ ಅಪಾಯವನ್ನು ತಂದೊಡ್ಡುತ್ತಾರೆ ಎನ್ನುವುದನ್ನು ಅವರು ಮರೆಯುತ್ತಾರೆ.  ಇಲ್ಲೊಬ್ಬ ವ್ಯಕ್ತಿಗೆ ಮಾಸ್ಕ್ (mask) ತೆಗೆದದ್ದೇ ದುಬಾರಿಯಾಗಿ ಪರಿಣಮಿಸಿದೆ. ಈ ವ್ಯಕ್ತಿ ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ತೆಗೆದಿದ್ದಕ್ಕೆ 2 ಲಕ್ಷ ರೂ. ದಂಡ ಪಾವತಿಸಬೇಕಾಯಿತು.

ಇದನ್ನೂ ಓದಿ 5 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆಗಾಗಿ ಅನುಮೋದನೆ ಪಡೆಯಲು ಮುಂದಾದ Pfizer

ಮಾಧ್ಯಮ ವರದಿಗಳ ಪ್ರಕಾರ, ಬ್ರಿಟನ್ ನಿವಾಸಿ Christopher O’Toole ಎಂಬ ವ್ಯಕ್ತಿ ಶಾಪಿಂಗ್ ಹೋಗಿದ್ದರು. ಮಾಸ್ಕ್ ಹಾಕಿದ್ದರಿಂದ ಉಸಿರುಗಟ್ಟಿದಂತಾಗಿ, ವ್ಯಕ್ತಿ ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ ಅನ್ನು ತೆಗೆದಿದ್ದಾರೆ. ಇದೇ ಸಮಯದಲ್ಲಿ ವ್ಯಕ್ತಿಗೆ ದಂಡ  ವಿಧಿಸಲಾಗಿದೆ. 

ಬಿತ್ತು  2 ಲಕ್ಷ ದಂಡ : 
ಕೇವಲ 16 ಸೆಕೆಂಡುಗಳ ಕಾಲ ಮಾಸ್ಕ್ (fine for no mask) ತೆಗೆದಿರುವುದಾಗಿ ವ್ಯಕ್ತಿ ಹೇಳಿದ್ದಾರೆ. ಮಾಸ್ಕ್ ಹಾಕುವುದರಲ್ಲಿ ಯಾವುದೇ ತೊಂದರೆ ಇಲ್ಲ. ಬಹಳ ಹೊತ್ತಿನಿಂದ ಮಾಸ್ಕ್ ಹಾಕಿದ್ದರಿಂದ ಉಸಿರುಗಟ್ಟಿದಂತಾಗಿ ಮಾಸ್ಕ್ ತೆಗೆದಿದ್ದಾಗಿ ವ್ಯಕ್ತಿ ಹೇಳಿದ್ದಾರೆ. ಆದರೆ ಸ್ಥಳಕ್ಕೆ ಬಂದ ಪೊಲೀಸರು,    ಮಾಸ್ಕ್ ಧರಿಸದವರ ಹೆಸರನ್ನು ತೆಗೆದುಕೊಂಡು ಹೋಗಿದ್ದಾರೆ. ಕೆಲ ದಿನಗಳ ನಂತರ ಆ ವ್ಯಕ್ತಿಗೆ ಕ್ರಿಮಿನಲ್ ರೆಕಾರ್ಡ್ ಆಫೀಸ್ ನಿಂದ (criminal record office) ಪತ್ರವೊಂದು ಬಂದಿತ್ತು.ಈ ಪತ್ರದಲ್ಲಿ 10 ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ಹೇಳಲಾಗಿತ್ತು. ಆದರೆ ಈ ದಂಡದ ಮೊತ್ತವನ್ನು ಪಾವತಿಸುವ ಬದಲು, ಕ್ರಿಸ್ಟೋಫರ್ ತಾನು ಯಾಕೆ ಮಾಸ್ಕ್ ತೆಗೆದಿರುವುದಾಗಿ ವಿವರಣೆ ಮಂಡಿಸಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ದಂಡದ ಮೊತ್ತವನ್ನು 2 ಲಕ್ಷಕ್ಕೆ ಏರಿಸಲಾಗಿದೆ. 

ಇದನ್ನೂ ಓದಿ : Omicronನ ಈ ಎಲ್ಲಾ ರೂಪಾಂತರಗಳಿಂದ ಇರಲಿ ಎಚ್ಚರ, ಅಧ್ಯಯನದಲ್ಲಿ ಬಯಲಾಯಿತು ಆಘಾತಕಾರಿ ಅಂಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News