ವಾಷಿಂಗ್ಟನ್: ಅಮೇರಿಕಾದ ಶ್ವೇತಭವನದ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಎಚ್ ಆರ್ ಮ್ಯಾಕಮಾಸ್ಟರ್ ರವರು ಉತ್ತರ ಕೊರಿಯಾ ದೇಶದ ವಿರುದ್ದ ಯುದ್ದದ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದಂದು ಕ್ಯಾಲಿಪೋರ್ನಿಯಾದ ಸಿಮಿ ವ್ಯಾಲಿಯಲ್ಲಿರುವ ರೇಗನ್ ರಾಷ್ಟ್ರೀಯ ರಕ್ಷಣಾ ವೇದಿಕೆಯ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು "ಉತ್ತರ ಕೊರಿಯಾದ ಜೊತೆಗೆ ಯುದ್ದದ ಸ್ಪರ್ಧೆ ಅಧಿಕಗೊಂಡಿದೆ ಆದ್ದರಿಂದ ನಾವು ಅದನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುತ್ತಿದೇವೆ ಎಂದರು.ಈ ಹೇಳಿಕೆಯು ಪ್ರಮುಖವಾಗಿ ಉ.ಕೊರಿಯಾ ನವಂಬರ್ 28 ರಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆಯ ಹಿನ್ನಲೆಯಲ್ಲಿ ಬಂದಿರುವುದು ಅತ್ಯಂತ ಮಹತ್ವ ಪಡೆದಿದೆ.
ಅಧ್ಯಕ್ಷ ಟ್ರಂಪ್ ರವರು ಕೊರಿಯಾದ ಪರ್ಯಾಯ ದ್ವೀಪದಲ್ಲಿನ ಅಣ್ವಸ್ತ್ರ ನಿಶಸ್ತ್ರಿಕರಣಕ್ಕೆ ಬದ್ದರಾಗಿದ್ದು,ಅಲ್ಲದೆ ಅದಕ್ಕೆ ಶಸ್ತ್ರಾಸ್ತ್ರ ರಹಿತವಾದ ಪರಿಹಾರವನ್ನು ಸಹಕಂಡುಕೊಳ್ಳಲು ಮಾರ್ಗಗಳಿವೆ ಎಂದು ಅದು ಅಭಿಪ್ರಾಯ ಪಟ್ಟಿದೆ.ಇದನ್ನು ಚೀನಾದಿಂದ ಆರ್ಥಿಕ ದಿಗ್ಭಂದನ ಹೇರುವುದರ ಮೂಲಕ ಕಾರ್ಯರೂಪಗೊಳಿಸಬಹುದು ಎಂದು ಸಿ.ಎನ್.ಎನ್ ವರದಿ ಮಾಡಿದೆ.