ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆ ಜೆಯುಡಿ ನಿಷೇಧಿಸಿದ ಪಾಕ್

ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನೂ ಸಹ ಪಾಕಿಸ್ತಾನದಲ್ಲಿ ನಿಷೇದಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Last Updated : Feb 13, 2018, 12:06 PM IST
ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಸಂಘಟನೆ ಜೆಯುಡಿ ನಿಷೇಧಿಸಿದ ಪಾಕ್ title=

ಇಸ್ಲಾಮಾಬಾದ್‌ : ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ಥಾನ ಕಳೆದ ವಾರ ನಿಷೇಧಿತ ಭಯೋತ್ಪಾದಕ ವ್ಯಕ್ತಿಗಳು ಮತ್ತು ಸಂಘಟನೆಗಳ ಪಟ್ಟಿಗೆ ಮುಂಬೈ ದಾಳಿಯ ಮುಖ್ಯಸ್ಥ ಹಫೀಜ್ ಸಯೀದ್ ನೇತೃತ್ವದ ಭಯೋತ್ಪಾದಕ ಗುಂಪು ಜಮಾತ್-ಉದ್ ದವಾವನ್ನು ಶಾಸನಬದ್ಧವಾಗಿ ಸೇರಿಸಿದೆ.

ಅಲ್ಲದೆ, ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನೂ ಸಹ ಪಾಕಿಸ್ತಾನದಲ್ಲಿ ನಿಷೇದಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ 27 ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಈಗಾಗಲೇ ಇರುವ ಪಾಕ್‌ ಮೂಲದಫ‌ರಾಹ್‌ ಇ ಇನ್ಸಾನಿಯತ್‌ ಫೌಂಡೇಶನ್‌ (ಎಫ್ಐಎಫ್), ಲಷ್ಕರ್‌ ಎ ತೋಯ್ಬಾ ಮತ್ತು ಹರ್ಕತ್‌ ಉಲ್‌ ಮುಜಾಹಿದೀನ್‌ ಮೊದಲಾದ ಹಲವಾರು ಉಗ್ರ ಸಂಘಟನೆಗೆ ಈಗ ಪಾಕ್‌ ಸರ್ಕಾರದಿಂದ ನಿಷೇಧದ ಬಿಸಿ ಮುಟ್ಟುತ್ತಿದೆ. 

ಉಗ್ರ ನಿಗ್ರಹ ಕಾಯಿದೆ (ಎಟಿಎ) ಗೆ ಮಾಡಿರುವ ತಿದ್ದುಪಡಿಯಿಂದಾಗಿ ಆದೇಶವು ಈ ಕ್ಷಣದಿಂದಲೇ ಜಾರಿಗೊಳ್ಳಲಿದ್ದು ನಿಷೇಧಿತ ಸಂಘಟನೆಗಳ ಸ್ವತ್ತುಗಳನ್ನು ಪಾಕ್ ಸರ್ಕಾರ ಮುಟ್ಟುಗೋಲು ಹಾಕಲಿದೆ. 

ಪಾಕ್‌ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಉಗ್ರ ನಿಗ್ರಹ ವಿಧೇಯಕಕ್ಕೆ ಅಧ್ಯಕ್ಷ ಮಮ್‌ನೂನ್‌ ಹುಸೇನ್‌ ಅವರು ಕಳೆದ ಶುಕ್ರವಾರವೇ ಅನುಮೋದನೆ ನೀಡಿದ್ದಾರೆ ಮತ್ತು ಅದನ್ನ ಅಂದೇ ಸಂಜೆ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. 

Trending News