ನಿಲ್ಲದ ರಷ್ಯಾ - ಉಕ್ರೇನ್‌ ಯುದ್ಧ: ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಉಪಗ್ರಹ!

ಇನ್ನು ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನಲ್ಲಿ ಈವರೆಗೆ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. 

Written by - Bhavishya Shetty | Last Updated : Apr 23, 2022, 11:55 AM IST
  • ಮುಂದುವರೆದ ರಷ್ಯಾ - ಉಕ್ರೇನ್‌ ಯುದ್ಧ
  • ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಮ್ಯಾಕ್ಸರ್‌ ಟೆಕ್ನಾಲಜಿಸ್‌
  • 200ಕ್ಕೂ ಹೆಚ್ಚು ಸಾಮೂಹಿಕ ಸಮಾಧಿಗಳು ಪತ್ತೆ
ನಿಲ್ಲದ ರಷ್ಯಾ - ಉಕ್ರೇನ್‌ ಯುದ್ಧ: ಸಾಮೂಹಿಕ ಸಮಾಧಿಯ ಚಿತ್ರ ಬಿಡುಗಡೆ ಮಾಡಿದ ಉಪಗ್ರಹ!  title=
Mass Grave

ಉಕ್ರೇನ್‌:  ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ನಿರಂತರ ದಾಳಿಯಿಂದ ಅಲ್ಲಿನ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ.  ಪ್ರತೀದಿನ ಉಕ್ರೇನ್‌ ಮೇಲೆ ಸೇಡು ಕಾರುತ್ತಿರುವ ರಷ್ಯಾ ಬಾಂಬ್‌ ಸೇರಿದಂತೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಈವರೆಗೆ ಉಕ್ರೇನ್‌ ತೊರೆದ ಜನರ ಸಂಖ್ಯೆ ಸುಮಾರು 50 ಲಕ್ಷಕ್ಕೂ ಹೆಚ್ಚು ಎಂದು ಬಲ್ಲ ಮೂಲಗಳು ಮಾಹಿತಿ ನೀಡಿದೆ.

ಇದನ್ನು ಓದಿ: Shocking Video: ಪತ್ನಿಯೊಂದಿಗೆ ಜಗಳವಾಡಿದ ಪತಿ, ಬೆಡ್ ಮೇಲೆ ಪತ್ನಿ ಮಾಡಿದ ಕೆಲಸ ನೋಡಿ ನೀವೂ ಬೆಚ್ಚಿಬೀಳುವಿರಿ

ಇನ್ನು ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನಲ್ಲಿ ಈವರೆಗೆ ಸುಮಾರು 5 ಸಾವಿರಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. 58 ದಿನಗಳಿಂದ  ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ದನಡೆಯುತ್ತಿದ್ದು, ಬೆಂಕಿಯುಂಡೆಗಳು ಭೂಮಿಗೆ ಅಪ್ಪಳಿಸುತ್ತಿದೆ. ಇನ್ನು ಕೀವ್‌ ಹೊರವಲಯದ ಉಪನಗರ ಬುಚಾದಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿದ್ದು, ಇದು ಯುದ್ಧದ ತೀವ್ರತೆಯನ್ನು ಬಿಂಬಿಸುತ್ತಿದೆ ಎನ್ನಬಹುದು. 

ಮ್ಯಾಕ್ಸರ್‌ ಟೆಕ್ನಾಲಜಿಸ್‌ ಉಪಗ್ರಹ ಸಾಮೂಹಿಕ ಸಮಾಧಿಯ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಮರಿಯುಪೊಲ್‌ ನಗರ ಹೊರವಲಯದ ಮ್ಯಾನ್‌ಹುಶ್ ಪಟ್ಟಣದಲ್ಲಿರುವ ಸ್ಮಶಾನದಿಂದ ಸ್ವಲ್ಪ ದೂರದಲ್ಲಿ 200ಕ್ಕೂ ಹೆಚ್ಚು ಸಾಮೂಹಿಕ ಸಮಾಧಿಗಳು ಪತ್ತೆಯಾಗಿದೆ. 

ಈ ಸಂಬಂಧ ಮಾಹಿತಿ ನೀಡಿರುವ ಉಕ್ರೇನ್ ಅಧಿಕಾರಿಗಳು, "ರಷ್ಯಾ ಸೇನೆ ಮರಿಯುಪೊಲ್‌ನ ಸುಮಾರು 9 ಸಾವಿರ ನಾಗರಿಕರನ್ನು ಕೊಂದು ನಂತರ ಮ್ಯಾನ್‌ಹುಶ್ ಪಟ್ಟಣದ ಸಮೀಪದಲ್ಲಿ ಸಾಮೂಹಿಕ ಸಮಾಧಿ ನಿರ್ಮಿಸಿದೆ. ಮರಿಯುಪೋಲ್​ ಬಂದರು ನಗರವಾಗಿದ್ದು, ಅಲ್ಲಿ ನಡೆಯುತ್ತಿರುವ ನರಮೇಧವನ್ನು ಮರೆ ಮಾಚಲು ಶವಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗಿದೆ" ಎಂದಿದ್ದಾರೆ.  

ಮರಿಯುಪೋಲ್​ನಲ್ಲಿ ಜನರನ್ನು ಕೊಲೆಗೈದು, ಮ್ಯಾನ್‌ಹುಶ್‌ನಲ್ಲಿ ಸಾಮೂಹಿಕ ಸಮಾಧಿ ಮಾಡಲಾಗುತ್ತಿದೆ. ಶವಗಳನ್ನು ಟ್ರಕ್‌ಗಳಲ್ಲಿ ‌ತಂದು ಇಲ್ಲಿ ಸುರಿಯಲಾಗುತ್ತಿದ್ದು, ಸಾಮೂಹಿಕ ಸಮಾಧಿ ಮಾಡಲಾಗುತ್ತಿದೆ ಎಂದು ಮೇಯರ್‌ ವಾಡಿಮ್‌ ಬಾಯ್‌ಶೆಂಕೊ ಆರೋಪಿಸಿದ್ದಾರೆ. ಮ್ಯಾಕ್ಸರ್‌ ಟೆಕ್ನಾಲಜಿಸ್‌ ಬಿಡುಗಡೆ ಮಾಡಿರುವ ಚಿತ್ರಗಳನ್ನು ವಿಶ್ಲೇಷಣೆ ನಡೆಸಿದ್ದು, ಸಮಾಧಿಗಳು ಮಾರ್ಚ್ ಅಂತ್ಯದಲ್ಲಿ ಶುರುವಾಗಿದ್ದು, ಇತ್ತೀಚಿನ ವಾರಗಳವರೆಗೂ ಅವುಗಳ ವ್ಯಾಪ್ತಿ ವಿಸ್ತರಿಸಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: NRI : ಕಮಲಾ ಹ್ಯಾರಿಸ್ ರಕ್ಷಣಾ ಸಲಹೆಗಾರ್ತಿ ಶಾಂತಿ ಸೇಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ

ಏಪ್ರಿಲ್‌ 17ರಂದು ಉಕ್ರೇನ್‌ನ ಮೇಲೆ ರಷ್ಯಾವು ವೈಮಾನಿಕ ದಾಳಿ ನಡೆಸಿ ಪ್ರಮುಖ ಸೇನಾ ನೆಲೆಗಳನ್ನು ಧ್ವಂಸ ಮಾಡಿದ್ದವು. ಲುಹಾನ್ಸ್ಕ್‌, ವಿನಿಟ್ಸಿಯಾ ಹಾಗೂ ಡೊನೆಟ್ಸ್ಕ್‌ ಪ್ರಾಂತ್ಯದಲ್ಲಿ ನಾಲ್ಕು ಶಸ್ತ್ರಕೋಠಿಗಳನ್ನು ಇಸ್ಕಾಂಡರ್‌ ಕ್ಷಿಪಣಿಗಳಿಂದ ಧ್ವಂಸ ಮಾಡಿತ್ತು. ಉಕ್ರೇನಿನ 12 ಮಾರಕ ಡ್ರೋನ್‌ ಮತ್ತು ಟ್ಯಾಂಕ್‌ಗಳನ್ನೂ ಸಹ ರಷ್ಯಾ ನಾಶಪಡಿಸಿದೆ ಎಂದು ತಿಳಿದುಬಂದಿದೆ. 

Trending News