ನೂತನ ಶ್ರೀಲಂಕಾ ಪ್ರಧಾನ ಮಂತ್ರಿಯಾಗಿ ಮಹಿಂದಾ ರಾಜಪಕ್ಸೆ ನೇಮಕ

ಕೊಲಂಬೊ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರನ್ನು ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ. ಹಾಲಿ ಮುಖ್ಯ ಪ್ರತಿಪಕ್ಷ ನಾಯಕರಾದ ಮಹಿಂದಾ ರಾಜಪಕ್ಸೆ ಅವರು ಈಗಿನ ವಿಕ್ರಮಸಿಂಘೆ ಅವರು ಔಪಚಾರಿಕವಾಗಿ ಕೆಳಗಿಳಿದ ನಂತರ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

Last Updated : Nov 20, 2019, 08:45 PM IST
 ನೂತನ ಶ್ರೀಲಂಕಾ ಪ್ರಧಾನ ಮಂತ್ರಿಯಾಗಿ ಮಹಿಂದಾ ರಾಜಪಕ್ಸೆ ನೇಮಕ  title=
file photo

ನವದೆಹಲಿ: ಕೊಲಂಬೊ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು ತಮ್ಮ ಹಿರಿಯ ಸಹೋದರ ಮಹಿಂದಾ ರಾಜಪಕ್ಸೆ ಅವರನ್ನು ನೂತನ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ. ಹಾಲಿ ಮುಖ್ಯ ಪ್ರತಿಪಕ್ಷ ನಾಯಕರಾದ ಮಹಿಂದಾ ರಾಜಪಕ್ಸೆ ಅವರು ಈಗಿನ ವಿಕ್ರಮಸಿಂಘೆ ಅವರು ಔಪಚಾರಿಕವಾಗಿ ಕೆಳಗಿಳಿದ ನಂತರ ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎಎಫ್‌ಪಿ ವರದಿ ಮಾಡಿದೆ.

ಈ ಹಿಂದೆ ವಿವಾದಾತ್ಮಕ ಕ್ರಮದ ಮೂಲಕ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಮಹಿಂದಾ ಅವರನ್ನು ಅಕ್ಟೋಬರ್ 26, 2018 ರಂದು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಆದರೆ ತದನಂತರ ಸುಪ್ರೀಂಕೋರ್ಟ್ ನಿರ್ಣಾಯಕ ತೀರ್ಪಿನ ನಂತರ ಅವರು ರಾಜಿನಾಮೆ ನೀಡಿದರು. ಮೈತ್ರಿಪಾಲ ಸಿರಿಸೇನಾ ಸಂಸತ್ತನ್ನು ವಿಸರ್ಜಿಸುವುದು ಕಾನೂನುಬಾಹಿರ ಎಂದು ಆಗ ಸುಪ್ರೀಂಕೋರ್ಟ್ ನಂತರ ಸರ್ವಾನುಮತದಿಂದ ಘೋಷಿಸಿತು.

ಮಹಿಂದಾ 2005 ರಲ್ಲಿ ಉನ್ನತದ ಹುದ್ದೆಗೆ ಏರುವ ಮೂಲಕ ದಕ್ಷಿಣ ಏಷ್ಯಾದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಯಕರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು1970 ರಲ್ಲಿ ತಮ್ಮ 24 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಸಂಸದರಾಗಿ ಆಯ್ಕೆಯಾಗಿದ್ದರು. ಮೂರು ದಶಕಗಳ ಕಾಲದ ಎಲ್ಟಿಟಿಇ ಹೋರಾಟವನ್ನು ಅಂತ್ಯಗೊಳಿಸುವಲ್ಲಿ ರಾಜಪಕ್ಷೆ ಸಹೊದರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ.

Trending News