ನೇಪಾಳದಲ್ಲಿ ಬಹುಮತದತ್ತ ಎಡರಂಗ

     

Last Updated : Dec 11, 2017, 04:08 PM IST
ನೇಪಾಳದಲ್ಲಿ ಬಹುಮತದತ್ತ ಎಡರಂಗ title=

ಕಠ್ಮಂಡು: ನೇಪಾಳ ದೇಶವು ಈಗ ಮತ್ತೆ ಸ್ಥಿರ ಪ್ರಜಾತಾಂತ್ರಿಕ ವ್ಯವಸ್ಥೆಗೆ  ಮರಳುತ್ತಿದ್ದು ಅದರ ಭಾಗವಾಗಿ ಇಲ್ಲಿನ ನಡೆದ ಸಂಸದೀಯ  ಚುನಾವಣೆಯಲ್ಲಿ ಎಡಪಕ್ಷಗಳು ಬಹುಮತದತ್ತ ದಾಪುಗಾಲು ಇಟ್ಟಿದೆ. ಭಾನುವಾರದಂದು ಈಗಾಗಲೇ 89 ಸೀಟ್ ಗಳಲ್ಲಿ 72 ಸೀಟ್ ಗಳನ್ನು ಗಳಿಸಿರುವ ಎಡಪಕ್ಷಗಳು ನಾಷನಲ್ ಕಾಂಗ್ರೆಸ್ ನ್ನು ಸೋಲಿಸುವ ಮೂಲಕ ಮತ್ತೆ  ನೇಪಾಳದಲ್ಲಿ  ಹೊಸ ಅಧ್ಯಾಯವನ್ನು ಬರೆಯಲು ದಿಟ್ಟ ಹೆಜ್ಜೆ ಇಟ್ಟಿವೆ.

ಕೆ.ಪಿ. ಒಲಿಯವರ ಲೆನಿನ್ ಮತ್ತು ಮಾರ್ಕ್ಸವಾದಿ ಪಕ್ಷ ಮತ್ತು ಪ್ರಚಂಡರ ನೇಪಾಳ್ ಕಮ್ಯೂನಿಸ್ಟ್ ಪಕ್ಷ(CPN) ಪ್ರಾದೇಶಿಕ ಮತ್ತು ಸಂಸದೀಯ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡಿದ್ದವು,ಈಗ  ಭಾನುವಾರ ಚುನಾವಣಾ ಆಯೋಗದ ಪ್ರಕಾರ ಈ ಎರಡು ಪಕ್ಷಗಳು ಕ್ರಮವಾಗಿ 51. ಮತ್ತು 21 ಸೀಟ್ ಗಳನ್ನು ಗೆದ್ದಿವೆ.  

ಪ್ರಸಕ್ತ ಆಡಳಿತ ಪಕ್ಷವಾಗಿರುವ  ನ್ಯಾಷನಲ್ ಕಾಂಗ್ರೆಸ್ಸ್ ಕಳೆದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಈಗ ಅದು ಕೇವಲ 10 ಸೀಟುಗಳನ್ನು ಗೆಲ್ಲಲು ಮಾತ್ರ ಶಕ್ತವಾಗಿದೆ.ಇನ್ನೊಂದೆಡೆ ಮಾದೇಶಿ ಪಕ್ಷಗಳು 5, ಫೆಡರಲ್ ಸೋಷಿಯಲಿಸ್ಟ್ ಪೋರಂ 2,ರಾಷ್ಟ್ರೀಯ ಜನತಾ ಪಾರ್ಟಿ3, ಸೀಟುಗಳನ್ನಷ್ಟೇ ಗೆಲ್ಲಲು ಶಕ್ತವಾಗಿವೆ.

ಇನ್ನು 76 ಸೀಟಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಒಟ್ಟು 275 ಸದಸ್ಯರ ಆಯ್ಕೆಗಾಗಿ ಚುನಾವಣೆಯು ಎರಡು ಹಂತದಲ್ಲಿ ನಡೆದಿತ್ತು. ಮೊದಲ ಹಂತವಾಗಿ  ನವಂಬರ್ 26, ಎರಡನೇಯ ಹಂತವಾಗಿ  ಡಿಸೆಂಬರ್ 7 ರಂದು ಚುನಾವಣೆ ನಡೆದಿದ್ದನ್ನು ನಾವು ಇಲ್ಲಿ ಗಮನಿಸಬಹುದು.

Trending News