ಹುಷಾರ್...! ಈ ದೇಶದಲ್ಲಿ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ..!

ಇಂಡೋನೇಷ್ಯಾದ ಸಂಸತ್ತು ಮಂಗಳವಾರದಂದು ಮದುವೆಯ ಹೊರಗಿನ ಲೈಂಗಿಕತೆಯನ್ನು ನಿಷೇಧಿಸುವ ಕಾನೂನನ್ನು ಅನುಮೋದಿಸುವ ಮೂಲಕ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

Written by - Zee Kannada News Desk | Last Updated : Dec 7, 2022, 05:35 PM IST
  • ಹಲವಾರು ಚರ್ಚೆಗಳ ನಂತರ ಈಗ ಕ್ರಿಮಿನಲ್ ಕೋಡ್ ಗೆ ಎಲ್ಲಾ ಒಂಬತ್ತು ಪಕ್ಷಗಳು ಅನುಮೋದನೆ ನೀಡಿವೆ.
  • ಈಗ ಇಂಡೋನೇಷ್ಯಾದ ನಡೆಗೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
  • ಅಧ್ಯಕ್ಷ ಜೊಕೊ ವಿಡೊಡೊ ಅವರಿಂದ ಇನ್ನೂ ಅನುಮೋದನೆ ಪಡೆಯಬೇಕಾದ ಹೊಸ ಕೋಡ್ ಮೂರು ವರ್ಷಗಳ ನಂತರ ಜಾರಿಗೆ ಬರಲಿದೆ.
 ಹುಷಾರ್...! ಈ ದೇಶದಲ್ಲಿ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ..! title=
ಸಾಂದರ್ಭಿಕ ಚಿತ್ರ

ಜಕಾರ್ತಾ: ಇಂಡೋನೇಷ್ಯಾದ ಸಂಸತ್ತು ಮಂಗಳವಾರದಂದು ಮದುವೆಯ ಹೊರಗಿನ ಲೈಂಗಿಕತೆಯನ್ನು ನಿಷೇಧಿಸುವ ಕಾನೂನನ್ನು ಅನುಮೋದಿಸುವ ಮೂಲಕ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಹಲವಾರು ಚರ್ಚೆಗಳ ನಂತರ ಈಗ ಕ್ರಿಮಿನಲ್ ಕೋಡ್ ಗೆ ಎಲ್ಲಾ ಒಂಬತ್ತು ಪಕ್ಷಗಳು ಅನುಮೋದನೆ ನೀಡಿವೆ.ಈಗ ಇದಕ್ಕೆ ಇಂಡೋನೇಷ್ಯಾದ ನಡೆಗೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಇದನ್ನು ನಾಗರಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸ್ವಾತಂತ್ರ್ಯಗಳ ಮೇಲಿನ ದಬ್ಬಾಳಿಕೆ ಮತ್ತು ಮುಸ್ಲಿಂ-ಬಹುಸಂಖ್ಯಾತ ಇಂಡೋನೇಷ್ಯಾದಲ್ಲಿ ಮೂಲಭೂತವಾದದ ಕಡೆಗಿನ ಬದಲಾವಣೆ ಎಂದು ಅವು ಬಣ್ಣಿಸಿವೆ.

ಇದನ್ನೂ ಓದಿ : Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..

ಈ ಕುರಿತಾಗಿ ಮಾತನಾಡಿದ ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಯಸೊನ್ನಾ ಲಾವೊಲಿ “ಚರ್ಚೆಯಾದ ಪ್ರಮುಖ ವಿಷಯಗಳು ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಸರಿಹೊಂದಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ.ಆದಾಗ್ಯೂ, ದಂಡ ಸಂಹಿತೆಯ ತಿದ್ದುಪಡಿಯ ಬಗ್ಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ನಾವು ಆನುವಂಶಿಕವಾಗಿ ಪಡೆದ ವಸಾಹತುಶಾಹಿ ಕ್ರಿಮಿನಲ್ ಕೋಡ್ ಅನ್ನು ಬಿಡಲು ಇದು ಸಮಯವಾಗಿದೆ” ಎಂದು ಸಂಸತ್ತಿಗೆ ತಿಳಿಸಿದರು.

ಇದನ್ನೂ ಓದಿ : Viral Video : ಆನೆಗೆ ಕೋಲಿನಿಂದ ಹೊಡೆದ ಯುವಕ, ಕೆಣಕಿದವರನ್ನು ಸುಮ್ಮನೆ ಬಿಟ್ಟೀತಾ?

ಮದುವೆಯ ಹೊರಗಿನ ಲೈಂಗಿಕತೆಯನ್ನು ಅಪರಾಧೀಕರಿಸುವ ಕಾಯ್ದೆಯು ಪ್ರವಾಸೋದ್ಯಮಕ್ಕೆ ಮಾರಕವಾಗಲಿದೆ ಎಂದು ಇಂಡೋನೇಷ್ಯಾದ ವ್ಯಾಪಾರ ಸಂಸ್ಥೆಗಳಿಂದ ಟೀಕಿಸಲ್ಪಟ್ಟಿದೆ, ಆದರೂ ಅಧಿಕಾರಿಗಳು ಬಾಲಿಗೆ ಪ್ರಯಾಣಿಸುವ ವಿದೇಶಿಯರಿಗೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.ಅಧ್ಯಕ್ಷ ಜೊಕೊ ವಿಡೊಡೊ ಅವರಿಂದ ಇನ್ನೂ ಅನುಮೋದನೆ ಪಡೆಯಬೇಕಾದ ಹೊಸ ಕೋಡ್ ಮೂರು ವರ್ಷಗಳ ನಂತರ ಜಾರಿಗೆ ಬರಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News