ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘನೆ

 ಕುಲಭೂಷಣ್ ಜಾಧವ್ ಪ್ರಕರಣದ ವಿಚಾರವಾಗಿ ಬುಧುವಾರದಂದು ಐಸಿಜೆ ನೀಡಿರುವ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

Last Updated : Jul 18, 2019, 02:01 PM IST
ಕುಲಭೂಷಣ್ ಜಾಧವ್ ಪ್ರಕರಣ: ಐಸಿಜೆ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶ್ಲಾಘನೆ  title=
file photo

ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದ ವಿಚಾರವಾಗಿ ಬುಧುವಾರದಂದು ಐಸಿಜೆ ನೀಡಿರುವ ತೀರ್ಪಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

ಬುಧುವಾರ ಐಸಿಜೆ ಕೋರ್ಟ್ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರವಾಗಿ ಪಾಕ್ ನೀಡಿರುವ ಶಿಕ್ಷೆಯನ್ನು ಪರಾಮರ್ಶೆಗೆ ಒಳಪಡಿಸಬೇಕು ಎಂದು ತೀರ್ಪು ನೀಡಿತ್ತು. ಈ ಹಿನ್ನಲೆಯಲ್ಲಿ ಈಗ ಇಮ್ರಾನ್ ಖಾನ್ ಟ್ವೀಟ್ ಮಾಡಿ ಪಾಕಿಸ್ತಾನದ ಜನರ ಮೇಲಿನ ಅಪರಾಧಗಳಲ್ಲಿ ಅವರು ತಪ್ಪಿತಸ್ಥರಾಗಿದ್ದಾರೆ. ಪಾಕಿಸ್ತಾನ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಕಮಾಂಡರ್ ಕುಲಭೂಷಣ್ ಜಾಧವ್ ಅವರನ್ನು ಖುಲಾಸೆಗೊಳಿಸಿ, ಬಿಡುಗಡೆ ಮಾಡದಿರುವ ಐಸಿಜೆ ನಿರ್ಧಾರವನ್ನು ಶ್ಲಾಘಿಸುತ್ತೇನೆ. ಪಾಕಿಸ್ತಾನದ ಜನರ ಮೇಲಿನ ಅಪರಾಧಗಳಲ್ಲಿ ಅವರು ತಪ್ಪಿತಸ್ಥರಾಗಿದ್ದಾರೆ. ಪಾಕಿಸ್ತಾನವು ಕಾನೂನಿನ ಪ್ರಕಾರ ತನ್ನ ಕ್ರಮವನ್ನು ತೆಗೆದುಕೊಳ್ಳಲಿದೆ' ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದದ ವಿರುದ್ಧ ಬೇಹುಗಾರಿಕೆ ಆರೋಪದ ಹಿನ್ನಲೆಯಲ್ಲಿ ಪಾಕ್ ಕುಲಭೂಷಣ ಜಾಧವ್ ಅವರಿಗೆ ಗಲ್ಲುಶಿಕ್ಷೆಯನ್ನು ವಿಧಿಸಿತ್ತು, ಭಾರತವು ಪಾಕ್ ನ ನಿರ್ಧಾರವನ್ನು ಐಸಿಜೆ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈಗ ಐಸಿಜೆ ಕೋರ್ಟ್ ಕುಲಭೂಷಣ ಜಾಧವ್ ಅವರಿಗೆ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ಪಾಕ್ ಪರಾಮರ್ಶೆಗೆ ಒಳಪಡಿಸಬೇಕು ಎಂದು ತೀರ್ಪು ನೀಡಿದೆ.
 

Trending News