Adultery: ಈ ದೇಶದಲ್ಲಿ ಅಕ್ರಮ ಸಂಬಂಧ ಹೊಂದಿದ್ದರೆ ಅನುಭವಿಸಬೇಕಾಗುತ್ತೆ ಘನಘೋರ ಶಿಕ್ಷೆ!

Indonesia set to punish sex before marriage: ಕಾನೂನಿನ ಅಂಗೀಕಾರದ ನಂತರ, ಈ ನಿರ್ಧಾರವು ಇಂಡೋನೇಷಿಯಾದ ನಾಗರಿಕರು ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ.  ಸಂಪೂರ್ಣ ಪುರಾವೆಗಳೊಂದಿಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಮಾತ್ರ ಶಿಕ್ಷೆಯು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

Written by - Bhavishya Shetty | Last Updated : Dec 4, 2022, 01:15 PM IST
    • ಅಕ್ರಮವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಜೈಲು ಶಿಕ್ಷೆ ಖಂಡಿತ
    • ಇಂಡೋನೇಷ್ಯಾದ ಸಂಸತ್ತು ಹೊಸ ಕ್ರಿಮಿನಲ್ ಕಾನೂನನ್ನು ಅಂಗೀಕರಿಸುವ ಸಾಧ್ಯತೆ
    • ಮುಂದಿನ ವಾರದಲ್ಲಿ ಹೊಸ ಕಾನೂನನ್ನು ಸಂಸತ್ತು ಅಂಗೀಕರಿಸಬಹುದು
Adultery: ಈ ದೇಶದಲ್ಲಿ ಅಕ್ರಮ ಸಂಬಂಧ ಹೊಂದಿದ್ದರೆ ಅನುಭವಿಸಬೇಕಾಗುತ್ತೆ ಘನಘೋರ ಶಿಕ್ಷೆ!  title=
Indonesia

Indonesia set to punish sex before marriage: ಇಂಡೋನೇಷ್ಯಾದ ಸಂಸತ್ತು ಈ ತಿಂಗಳು ಹೊಸ ಕ್ರಿಮಿನಲ್ ಕಾನೂನನ್ನು ಅಂಗೀಕರಿಸುವ ಸಾಧ್ಯತೆಯಿದೆ. ಅಕ್ರಮವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಕಾನೂನನ್ನು ರಚಿಸಿದ ಸಮಿತಿಯ ರಾಜಕಾರಣಿ ಬಂಬಾಂಗ್ ವುರಿಯಾಂಟೊ, ಮುಂದಿನ ವಾರದಲ್ಲಿ ಹೊಸ ಕಾನೂನನ್ನು ಸಂಸತ್ತು ಅಂಗೀಕರಿಸಬಹುದು  ಎಂದು ಹೇಳಿದರು.

ಕಾನೂನಿನ ಅಂಗೀಕಾರದ ನಂತರ, ಈ ನಿರ್ಧಾರವು ಇಂಡೋನೇಷಿಯಾದ ನಾಗರಿಕರು ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ.  ಸಂಪೂರ್ಣ ಪುರಾವೆಗಳೊಂದಿಗೆ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ ಮಾತ್ರ ಶಿಕ್ಷೆಯು ಪರಿಣಾಮಕಾರಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಅಮೆರಿಕಾದ ಬಲಿಷ್ಠ ಪಾಲುದಾರ ಎಂದ ಯುಎಸ್ ಅಧ್ಯಕ್ಷ ಬಿಡೆನ್

ಇಂಡೋನೇಷ್ಯಾ ತನ್ನ ದೇಶದಲ್ಲಿ ವಿವಾಹಪೂರ್ವ ಸಂಬಂಧಗಳನ್ನು ಕಾನೂನುಬಾಹಿರ ಅಪರಾಧವೆಂದು ಪರಿಗಣಿಸಲು ನಿರ್ಧರಿಸಿದೆ. ಈ ದೇಶವು ವ್ಯಭಿಚಾರದ ಬಗ್ಗೆ ಅತ್ಯಂತ ಕಟ್ಟುನಿಟ್ಟಾದ ಕರಡನ್ನು ಸಿದ್ಧಪಡಿಸಿದ್ದು, ಅದನ್ನು ಶೀಘ್ರದಲ್ಲೇ ಸಂಸತ್ತು ಅಂಗೀಕರಿಸಬಹುದು.

ಹೊಸ ಕರಡು ಪ್ರಕಾರ ಮದುವೆಗೆ ಮುನ್ನ ಲೈಂಗಿಕತೆ ಸಹ ನಿಷೇಧ ಮತ್ತು ತಪ್ಪಿತಸ್ಥರು ದೈಹಿಕ ಶಿಕ್ಷೆಯೊಂದಿಗೆ ಆರು ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ನಿರ್ಧಾರದಿಂದ ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಈ ಕರಡು ತಯಾರಕರು ಷರಿಯಾ ಕಾನೂನಿನ ಪ್ರಕಾರ ಇಂತಹ ಪ್ರಕರಣಗಳು ತಪ್ಪಾಗಿರುವುದು ಮಾತ್ರವಲ್ಲದೆ ಇಂಡೋನೇಷ್ಯಾದ ಪ್ರತಿಷ್ಠೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗುವುದರಿಂದ ಇಂತಹ ಕಠಿಣ ಕಾನೂನನ್ನು ತರಲಾಗುತ್ತಿದೆ ಎಂದು ವಾದಿಸಿದ್ದಾರೆ.

ಈ ಕಾನೂನು ಜಾರಿಯಾಗುವ ಮುನ್ನವೇ ಇಂತಹ ಪ್ರಕರಣಗಳು ಮುನ್ನೆಲೆಗೆ ಬಂದ ಬಳಿಕ ಮಹಿಳೆಯರಿಗೆ ಸಾರ್ವಜನಿಕವಾಗಿ ಥಳಿಸುವ ಶಿಕ್ಷೆಯನ್ನೂ ವಿಧಿಸಲಾಗಿತ್ತು. ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ ಕ್ಷಮಾದಾನ ನೀಡಲು ಅವಕಾಶವಿರಲಿಲ್ಲ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ-ಬಹುಸಂಖ್ಯಾತ ದೇಶದಲ್ಲಿ ಸರ್ಕಾರವು ಮಾಡುತ್ತಿರುವ ಬದಲಾವಣೆಗಳಲ್ಲಿ ಒಂದೆಂದರೆ, 10 ವರ್ಷಗಳ ಉತ್ತಮ ನಡವಳಿಕೆಯ ನಂತರ ಕೈದಿಗಳಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲು ಅನುಮತಿಸುವ ಒಂದು ನಿಬಂಧನೆಯಾಗಿದೆ. ಮಸೂದೆಯಲ್ಲಿ, ಗರ್ಭಪಾತವನ್ನು ಇನ್ನೂ ಅಪರಾಧದ ವರ್ಗದಲ್ಲಿ ಇರಿಸಲಾಗಿದೆ. ಆದರೆ ಅತ್ಯಾಚಾರ ಸಂತ್ರಸ್ತರಿಗೆ ವಿನಾಯಿತಿ ನೀಡಲಾಗಿದೆ.

ಈ ಸಂಹಿತೆಯ ಹಿಂದಿನ ಕರಡು ಮೂರು ವರ್ಷಗಳ ಹಿಂದೆ 2019 ರಲ್ಲಿ ಅಂಗೀಕಾರವಾಗಬೇಕಿತ್ತು. ಆದರೆ ಆ ಸಮಯದಲ್ಲಿ ಈ ಕಾನೂನಿನ ಪ್ರಸ್ತಾಪವನ್ನು ಮುಚ್ಚಿಡಲಾಗಿತ್ತು. ಇದರ ವಿರುದ್ಧ ದೇಶವ್ಯಾಪಿ ಜನರು ಪ್ರತಿಭಟನೆ ಮಾಡಿದ್ದರು. ಈ ಕಾನೂನನ್ನು ವಿರೋಧಿಸಿದ ಜನರು, ಇಂತಹ ಕಾನೂನುಗಳ ನೆಪದಲ್ಲಿ ಸರ್ಕಾರವು ನಾಗರಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಭಯಪಟ್ಟಿದ್ದರು.

ಈ ಬಾರಿಯೂ ಈ ಕಾನೂನಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಹಳೆಯ ಮಸೂದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಈ ಮಸೂದೆಯ ಬಗ್ಗೆ ಸರ್ಕಾರವೂ ಸಮಾಲೋಚನೆ ನಡೆಸಿದ್ದರೂ, ನಂತರ ಹೊಸ ಕರಡು ಬಂದಿದೆ ಎಂದು ಮಸೂದೆಯನ್ನು ಟೀಕಿಸುವ ಜನರು ಹೇಳುತ್ತಾರೆ.

ಈ ಬಾರಿಯೂ ರಾಜಧಾನಿ ಜಕಾರ್ತದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಈ ಬಾರಿ ವಿದ್ಯಾರ್ಥಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಇದೇ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಲಾಗಿತ್ತು.

ಈ ಹೊಸ ಇಂಡೋನೇಷಿಯನ್ ಮಸೂದೆಯ ಆರ್ಟಿಕಲ್ 413 (1) ರ ಪ್ರಕಾರ, ಅವನ ಅಥವಾ ಅವಳ ಪತಿ ಅಥವಾ ಹೆಂಡತಿಯಲ್ಲದ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಗೆ ಗರಿಷ್ಠ 1 ವರ್ಷದ ಕಠಿಣ ಜೈಲು ಶಿಕ್ಷೆ ಅಥವಾ ವರ್ಗ II ರ ಅಡಿಯಲ್ಲಿ ಶಿಕ್ಷೆ ವಿಧಿಸಬೇಕು. ಜೊತೆಗೆ ಭಾರೀ ದಂಡವನ್ನು ವಿಧಿಸಲಾಗುವುದು.

ಇಂಡೋನೇಷ್ಯಾ ಉದ್ಯೋಗದಾತರ ಸಂಘದ (APINDO) ಉಪ ಅಧ್ಯಕ್ಷೆ ಶಿಂತಾ ಸುಕಮ್ದಾನಿ, "ಈ ಸಾಂಪ್ರದಾಯಿಕ ಕಾನೂನಿನ ಅನುಷ್ಠಾನವು ದೇಶದಲ್ಲಿ ಕಾನೂನು ಅನಿಶ್ಚಿತತೆಯನ್ನು ಉಂಟುಮಾಡುತ್ತದೆ" ಎಂದು ಹೇಳಿದರು. ವ್ಯಾಪಾರ ಕ್ಷೇತ್ರವು ಅದರ ನಷ್ಟವನ್ನು ಭರಿಸಬೇಕಾಗುತ್ತದೆ. ಈ ನಿರ್ಧಾರದಿಂದಾಗಿ ಇಂಡೋನೇಷ್ಯಾದಲ್ಲಿ ಹೂಡಿಕೆ ಮಾಡಲು ಬಯಸುವ ಜನರು ತಮ್ಮ ಮನಸ್ಸನ್ನು ಬದಲಾಯಿಸಬಹುದು ಎಂದು ಹೇಳಿದ್ದಾರೆ.

ಇಂಡೋನೇಷ್ಯಾದಲ್ಲಿ ಇತರ ಕಟ್ಟುನಿಟ್ಟಾದ ಕಾನೂನುಗಳು ಮತ್ತು ನಿರ್ಬಂಧಗಳ ಬಗ್ಗೆ ಮಾತನಾಡುವುದಾದರೆ, ದೇಶದ ಅಧ್ಯಕ್ಷರನ್ನು ಅಥವಾ ಸರ್ಕಾರಿ ಸಂಸ್ಥೆಗಳನ್ನು ಅವಮಾನಿಸಿದರೆ, ದೇಶದ ಸಿದ್ಧಾಂತವನ್ನು ವಿರೋಧಿಸಿದರೆ ಅತ್ಯಂತ ಕಠಿಣ ಶಿಕ್ಷೆಯ ನಿಬಂಧನೆ ಇದೆ. ರಾಷ್ಟ್ರಪತಿಯನ್ನು ಅವಮಾನಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಇದನ್ನೂ ಓದಿ: Crime News: ರೇಪ್‌ ಮಾಡಿ, ಕೊಂದು ಆಕೆಯ ಮಾಂಸವನ್ನೇ ತಿಂದ ವ್ಯಕ್ತಿಗೆ ಸೆಲಿಬ್ರಿಟಿ ಸ್ಟೇಟಸ್‌!?

ಪಾಕಿಸ್ತಾನವು ಮದುವೆಗೆ ಮುನ್ನ ಲೈಂಗಿಕತೆ ಮತ್ತು ವ್ಯಭಿಚಾರವನ್ನು ಸುಗ್ರೀವಾಜ್ಞೆಯ ಅಡಿಯಲ್ಲಿ ಅಪರಾಧ ಎಂದು ಘೋಷಿಸಿದೆ. ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ, ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ಅಫ್ಘಾನಿಸ್ತಾನದಲ್ಲಿ ವಿವಾಹಪೂರ್ವ ಲೈಂಗಿಕತೆ ಮತ್ತು ವ್ಯಭಿಚಾರದ ಅಪರಾಧಿಗಳನ್ನು ಕಲ್ಲಿನಿಂದ ಹೊಡೆದು ಸಾಯಿಸುವ ಮೂಲಕ ತಾಲಿಬಾನ್ ಶಿಕ್ಷಿಸುತ್ತದೆ. ಆಗಸ್ಟ್ 2010 ರಲ್ಲಿ, ಉತ್ತರ ಅಫ್ಘಾನಿಸ್ತಾನದ ಕುಂದುಜ್ ಪ್ರಾಂತ್ಯದಲ್ಲಿ ನೂರಾರು ಹಳ್ಳಿಗರು ವಿವಾಹಪೂರ್ವ ಲೈಂಗಿಕತೆಯನ್ನು ಹೊಂದಿದ್ದಕ್ಕಾಗಿ ಯುವ ಜೋಡಿಯನ್ನು ಕಲ್ಲೆಸೆದು ಕೊಂದಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News