ಜುಲೈ ಅಂತ್ಯಕ್ಕೆ ಕುಲ್ ಭೂಷಣ್ ಜಾಧವ್ ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆ

ಕುಲ್ ಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ತೀರ್ಪನ್ನು ಈ ತಿಂಗಳ ಕೊನೆಯಲ್ಲಿ ಪ್ರಕಟಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Last Updated : Jul 4, 2019, 07:33 PM IST
ಜುಲೈ ಅಂತ್ಯಕ್ಕೆ ಕುಲ್ ಭೂಷಣ್ ಜಾಧವ್ ಪ್ರಕರಣದ ತೀರ್ಪು ಹೊರಬೀಳುವ ಸಾಧ್ಯತೆ  title=

ನವದೆಹಲಿ: ಕುಲ್ ಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತನ್ನ ತೀರ್ಪನ್ನು ಈ ತಿಂಗಳ ಕೊನೆಯಲ್ಲಿ ಪ್ರಕಟಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

48 ವರ್ಷದ ಮಾಜಿ ನೌಕಾ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ 2017 ರ ಏಪ್ರಿಲ್ 11 ರಂದು ಗೂಡಚರ್ಯೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು, ಈ ತೀರ್ಪನ್ನು ಪ್ರಶ್ನಿಸಿ ಭಾರತ ಐಸಿಜೆಗೆ ಮೊರೆಹೋಗಿತ್ತು .ಆದ್ದರಿಂದ ಮೇ 18, 2017 ರಂದು, ಐಸಿಜೆ ಯ 10 ಸದಸ್ಯರ ಪೀಠವು ಪ್ರಕರಣವನ್ನು ತೀರ್ಪು ನೀಡುವವರೆಗೂ ಜಾಧವ್ ಅವರನ್ನು ಗಲ್ಲಿಗೇರಿಸದಂತೆ ಪಾಕಿಸ್ತಾನವನ್ನು ನಿರ್ಬಂಧಿಸಿತು.

ಈ ವರ್ಷದ ಫೆಬ್ರವರಿಯಲ್ಲಿ ಜಾಧವ್ ಅವರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಮಾಡಿದ ಐದು ಮನವಿಗಳನ್ನು ಐಸಿಜೆ ತಿರಸ್ಕರಿಸಿತು. ಈ ಪ್ರಕರಣದ ನಾಲ್ಕು ದಿನಗಳ ವಿಚಾರಣೆ ಫೆಬ್ರವರಿ 18 ರಂದು ಹೇಗ್‌ನ ಐಸಿಜೆ ಕೇಂದ್ರ ಕಚೇರಿಯಲ್ಲಿ ಪ್ರಾರಂಭವಾಯಿತು.  

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, "ಕುಲಭೂಷಣ್ ಜಾಧವ್ ಪ್ರಕರಣವನ್ನು ಕೆಲವೇ ವಾರಗಳಲ್ಲಿ ಘೋಷಿಸಲಾಗುವುದು. ಪ್ರಕರಣದಲ್ಲಿ ಮೌಖಿಕ ಸಲ್ಲಿಕೆಗಳನ್ನು ಮಾಡಲಾಗಿದೆ" ಎಂದು ವಿವರಿಸಿದರು. ಇನ್ನು ಮುಂದುವರೆದು ಈ ತೀರ್ಪನ್ನು ಅಂತರರಾಷ್ಟ್ರೀಯ ನ್ಯಾಯಾಲಯವು ಘೋಷಿಸಬೇಕಾಗಿದೆ. ದಿನಾಂಕವನ್ನು ಅವರು ನಿಗದಿಪಡಿಸಲಿದ್ದಾರೆ " ಎಂದು ಕುಮಾರ್ ಹೇಳಿದರು.

Trending News