ಈಜಿಪ್ಟ್ ನಲ್ಲಿ ಹಾಟ್ ಏರ್ ಬಲೂನ್ ಪತನ; 1 ಸಾವು, 7 ಮಂದಿಗೆ ಗಾಯ

ದಕ್ಷಿಣದ ಲಕ್ಸಾರ್ ನಗರಕ್ಕೆ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ  ದೃಶ್ಯವೀಕ್ಷಣೆಯ ಬಲೂನ್ ನೆಲಕ್ಕೆ ಕುಸಿದ ಪರಿಣಾಮ ಓರ್ವ ಪ್ರವಾಸಿಗ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

Last Updated : Jan 5, 2018, 04:25 PM IST
ಈಜಿಪ್ಟ್ ನಲ್ಲಿ ಹಾಟ್ ಏರ್ ಬಲೂನ್ ಪತನ; 1 ಸಾವು, 7 ಮಂದಿಗೆ ಗಾಯ title=

ಲುಕ್ಸರ್ (ಈಜಿಪ್ಟ್):  ದಕ್ಷಿಣದ ಲಕ್ಸಾರ್ ನಗರಕ್ಕೆ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ  ದೃಶ್ಯವೀಕ್ಷಣೆಯ ಬಲೂನ್ ನೆಲಕ್ಕೆ ಕುಸಿದ ಪರಿಣಾಮ ಓರ್ವ ಪ್ರವಾಸಿಗ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವುದಾಗಿ ಈಜಿಪ್ಟಿನ ಅಧಿಕಾರಿಗಳು ತಿಳಿಸಿದ್ದಾರೆ. 

ನಗರದ ಪಾರೋನಿಕ್ ದೇವಾಲಯಗಳು ಮತ್ತು ಗೋಪುರಗಳ ಮೇಲಿದ್ದ ಬಲೂನು ಬಿರುಸಾದ ಗಾಳಿಯ ಒತ್ತಡದಿಂದಾಗಿ ಬಲವಂತವಾಗಿ ನೆಲಕ್ಕಪ್ಪಲಿಸಿದೆ. ಈ ಘಟನೆಯಲ್ಲಿ ಗಾಯಗೊಂಡವರ ರಾಷ್ಟ್ರೀಯತೆ ಕುರಿತು ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಹಿಂದೆಯೂ ಲಕ್ಸಾರ್ನ ಮೇಲೆ ಹಾಟ್ ಏರ್ ಬಲೂನ್ ವಿಫಲಗೊಂಡ ಘಟನೆಗಳು ಸಂಭವಿಸಿದ್ದವು. 

2013ರಲ್ಲಿ ಬಳುನಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಅದರಲ್ಲಿದ್ದ 19 ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದರು. 2016 ರಲ್ಲಿ ಹಾಟ್ ಏರ್ ಬಲೂನ್ ಒಂದು ತುರ್ತು ಭೂಸ್ಪರ್ಶ ಮಾಡಿದ ಕಾರಣ ಸುಮಾರು 22 ಚೀನೀ ಪ್ರವಾಸಿಗರು ಗಾಯಗೊಂಡ ಘಟನೆ ನಂತರ ಈಜಿಪ್ಟ್ ತಾತಕಾಲಿಕವಾಗಿ ಬಿಸಿ ಗಾಳಿ ಬಲೂನುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. 

ಅಂದಿನಿಂದ, ಬಲೂನ್ ಸವಾರಿಗಳನ್ನು ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಬಲೂನುಗಳು 2,000 ಮೀಟರ್ಗಿಂತ ಹೆಚ್ಚು ಎತ್ತರ ಹಾರುವುದನ್ನು ನಿಷೇಧಿಸಲಾಗಿದೆ.

Trending News