Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಯುಎನ್ ವರದಿ

UN Report : ಈ ಪೇಪರ್ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ  ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ" ಎಂದಿದ್ದಾರೆ.   

Written by - Nitin Tabib | Last Updated : Apr 25, 2023, 04:05 PM IST
  • ಭಾರತದೊಳಗಿನ ವ್ಯತ್ಯಾಸಗಳನ್ನು ವಿವರಿಸುತ್ತಾ, ಭಾರತದ ಫೆಡರಲ್ ರಚನೆಯ ಅಡಿಯಲ್ಲಿ,
  • ರಾಜ್ಯ ಸರ್ಕಾರಗಳು ತಮ್ಮದೇ ಆದ ನೀತಿ ಆದ್ಯತೆಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ ಎಂದು ಪತ್ರಿಕೆ ಹೇಳಿದೆ.
  • ಕೇರಳ ಮತ್ತು ತಮಿಳುನಾಡಿನಲ್ಲಿ, ರಾಜ್ಯ ಸರ್ಕಾರಗಳು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದಾಗ, ಫಲವತ್ತತೆ ವೇಗವಾಗಿ ಕುಸಿಯಿತು.
Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಯುಎನ್ ವರದಿ title=

UN Report on Indian Population: ಭಾರತದ ದಕ್ಷಿಣ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕಡಿಮೆಯಾಗುತ್ತಿದೆ, ಆದರೆ ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ಕಾರ್ಮಿಕರ ವಲಸೆಯು ಅದನ್ನು ಸರಿದೂಗಿಸುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಜನಸಂಖ್ಯಾ ಲಾಭಾಂಶ ಮುಂದುವರೆಯುತ್ತಿದೆ ಎಂದು ಯುಎನ್ ವರದಿ ಬಹಿರಂಗಪಡಿಸಿದೆ..

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ (ಯುಎನ್‌ಡಿಇಎಸ್‌ಎ) ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾವನ್ನು ಹಿಂದಿಕ್ಕಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ಹೇಳಿದೆ. ಇದರಲ್ಲಿ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ಉಲ್ಲೇಖಿಸಲಾಗಿದೆ, ಆದರೆ ದೇಶದ ಒಟ್ಟಾರೆ ಫಲವತ್ತತೆ ದರವು ಈ ಮೊದಲು ಇದ್ದ 2.1 ರಿಂದ 2 ಕ್ಕೆ ಕುಸಿದಿದೆ,

ಫಲವತ್ತತೆಯ ಬದಲಿ ದರವು ಜನಸಂಖ್ಯೆಯನ್ನು ಸ್ಥಿರವಾಗಿಡಲು ಮಹಿಳೆ ಹೊಂದಿರಬೇಕಾದ ಮಕ್ಕಳ ಸಂಖ್ಯೆಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ ಮತ್ತು ಇದಕ್ಕಿಂತ ಕಡಿಮೆ ಜನಸಂಖ್ಯೆಯಲ್ಲಿ ಕ್ರಮೇಣ ಇಳಿಕೆಯನ್ನು ಅರ್ಥೈಸುತ್ತದೆ, ಚೀನಾದಲ್ಲಿ ಈ ದರ 1.2 ರಷ್ಟು ಮುಂದುವರೆದಿದೆ. 

ಇದನ್ನು ಯುವ ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯ ಕುರಿತು ಏನನ್ನು ಹೇಳಲಾಗಿದೆ
ಯುಎನ್ ವರದಿಯು ಭಾರತದಲ್ಲಿ ಒಟ್ಟಾರೆಯಾಗಿ, ತುಲನಾತ್ಮಕವಾಗಿ ಯುವ ಮತ್ತು ವಯಸ್ಸಾದ ದುಡಿಯುವ-ವಯಸ್ಸಿನ ಜನಸಂಖ್ಯೆಯ ಜನಸಂಖ್ಯಾ ಲಾಭಾಂಶವು ಒಟ್ಟು ಜನಸಂಖ್ಯೆಯ ಅನುಪಾತದಂತೆ ಹೆಚ್ಚಾಗುತ್ತದೆ ಎನ್ನಲಾಗಿದೆ. ಉತ್ತರ ಮತ್ತು ಪೂರ್ವ ರಾಜ್ಯಗಳಿಂದ ಕಾರ್ಮಿಕರ ವಲಸೆಯು ತುಲನಾತ್ಮಕವಾಗಿ ಹಳೆಯ ದಕ್ಷಿಣ ರಾಜ್ಯಗಳಲ್ಲಿ ಉದ್ಯೋಗಿಗಳ ಗಾತ್ರವನ್ನು ಹೆಚ್ಚಿಸಬಹುದು ಎಂದು ಯುಎನ್ ಪತ್ರಿಕೆ ಹೇಳಿದೆ. ಇತ್ತೀಚಿನ ಯುಎನ್ ಅಂದಾಜಿನ ಪ್ರಕಾರ, ಭಾರತದ ಜನಸಂಖ್ಯೆಯು 2064 ರ ಸುಮಾರಿಗೆ ತನ್ನ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಪತ್ರಿಕೆ ಅಂದಾಜು ವ್ಯಕ್ತಪಡಿಸಿದೆ. 

ಇದನ್ನೂ ಓದಿ-OMG ! ಕಾರ್ ಇಂಜಿನ್ ನಲ್ಲಿ 48 ಕಿ.ಮೀಗಳವರೆಗೆ ಸಿಲುಕಿಕೊಂಡ ಪುಟ್ಟ ಪ್ರಾಣ, ನಂತರ ನಡೆದಿದ್ದು ಮಾತ್ರ ಆ ದೇವರ ಇಚ್ಚೆ

ಪತ್ರಿಕೆಯ ಕುರಿತು ವರದಿಗಾರರಿಗೆ ಮಾಹಿತಿ ನೀಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ." ದೇಶಗಳು ತಮ್ಮ ಜನಸಂಖ್ಯೆಯ ಶಿಕ್ಷಣ ಮತ್ತು ಕಾರ್ಮಿಕ ಬಲದಲ್ಲಿ ಭಾಗವಹಿಸಲು ಜನರಿಗೆ ಅನುವು ಮಾಡಿಕೊಡುವತ್ತ ಗಮನಹರಿಸಬೇಕಾದ ಸಮಯ ಇದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Pee-Gate Case: ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಮತ್ತೆ ಮರುಕಳಿಸಿದ ಸಹ ಯಾತ್ರಿಯ ಮೇಲೆ ಮೂತ್ರ ವಿಸರ್ಜನೆಯ ಘಟನೆ

ವಿಶ್ವಸಂಸ್ಥೆಯ ಪತ್ರಿಕೆಯಲ್ಲಿ ಮತ್ತೇನು ಹೇಳಲಾಗಿದೆ
ಭಾರತದೊಳಗಿನ ವ್ಯತ್ಯಾಸಗಳನ್ನು ವಿವರಿಸುತ್ತಾ, ಭಾರತದ ಫೆಡರಲ್ ರಚನೆಯ ಅಡಿಯಲ್ಲಿ, ರಾಜ್ಯ ಸರ್ಕಾರಗಳು ತಮ್ಮದೇ ಆದ ನೀತಿ ಆದ್ಯತೆಗಳನ್ನು ಹೊಂದಿಸಲು ಸಾಧ್ಯವಾಗುತ್ತದೆ ಎಂದು ಪತ್ರಿಕೆ ಹೇಳಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ, ರಾಜ್ಯ ಸರ್ಕಾರಗಳು ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದಾಗ, ಫಲವತ್ತತೆ ವೇಗವಾಗಿ ಕುಸಿಯಿತು.ಈ ರಾಜ್ಯಗಳಲ್ಲಿ ಜನನ ಪ್ರಮಾಣವು ಎರಡು ದಶಕಗಳ ಹಿಂದೆ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ. ಮಾನವ ಬಂಡವಾಳದಲ್ಲಿ ಕಡಿಮೆ ಹೂಡಿಕೆ ಮಾಡಿದ ರಾಜ್ಯಗಳು ಕಠಿಣ ಕ್ರಮಗಳ ಹೊರತಾಗಿಯೂ ಫಲವತ್ತತೆಯಲ್ಲಿ ನಿಧಾನಗತಿಯ ಕುಸಿತವನ್ನು ಅನುಭವಿಸಿವೆ ಎಂದು ವರದಿ ಹೇಳಿದೆ.

ಇದನ್ನೂ ನೋಡಿ-

 

Trending News