ಪಾಕಿಸ್ತಾನದ ಲಾಹೋರ್‌ನಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ

ಪಾಕಿಸ್ತಾನದ ಪಂಜಾಬ್ ಪೊಲೀಸರ ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್ (ಸಿಟಿಡಿ) ಭಯೋತ್ಪಾದಕ ಹಣಕಾಸು ಪ್ರಕರಣಕ್ಕೆ ಸಂಬಂಧಿಸಿದಂತೆ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಬುಧವಾರ ಬಂಧಿಸಿದೆ.

Last Updated : Jul 17, 2019, 01:51 PM IST
ಪಾಕಿಸ್ತಾನದ ಲಾಹೋರ್‌ನಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಬಂಧನ title=
File Photo(Pic Courtesy: Reuters)

ಲಾಹೋರ್: ಭಯೋತ್ಪಾದಕ ಹಣಕಾಸು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪಂಜಾಬ್ ಪೊಲೀಸರ ಕೌಂಟರ್ ಟೆರರಿಸಂ ಡಿಪಾರ್ಟ್ಮೆಂಟ್ (ಸಿಟಿಡಿ) 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಬುಧವಾರ ಬಂಧಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ದ್ವಿಪಕ್ಷೀಯ ಭೇಟಿಗೆ ಕೆಲವು ದಿನಗಳ ಮೊದಲು ಈ ಬಂಧನವಾಗಿದೆ.

ಸಯೀದ್ ಲಾಹೋರ್‌ನಿಂದ ಗುಜ್ರಾನ್‌ವಾಲಾಕ್ಕೆ ತೆರಳುತ್ತಿದ್ದಾಗ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ಸಹ-ಸಂಸ್ಥಾಪಕ ಮತ್ತು ನಿಷೇಧಿತ ಉಗ್ರ ಗುಂಪಿನ ಜಮಾಅತ್-ಉದ್-ದವಾ (ಜುಡಿ) ಮತ್ತು ಫಲಾ-ಎ-ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್)  ಮುಖ್ಯಸ್ಥನನ್ನು ಈಗ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎನ್ನಲಾಗಿದೆ.

ಸಿಟಿಡಿ, ಭಯೋತ್ಪಾದಕ ಹಣಕಾಸು ವಿರುದ್ಧದ ಪ್ರಮುಖ ದೌರ್ಜನ್ಯದಲ್ಲಿ, ಜುಲೈನಲ್ಲಿ "ಭಯೋತ್ಪಾದಕ ಶಂಕಿತರಿಗೆ ಹಣವನ್ನು ಸಂಗ್ರಹಿಸಲು" ಐದು ಟ್ರಸ್ಟ್ಗಳನ್ನು ಬಳಸಿದ್ದಕ್ಕಾಗಿ ಜುಡಿ ಮುಖ್ಯಸ್ಥ ಮತ್ತು 12 ಸಹಾಯಕರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿದೆ.

 ಈ ಪ್ರಕರಣದಲ್ಲಿ ನಿನ್ನೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಹಫೀಜ್ ಗೆ ನಿರೀಕ್ಷಣಾ ಜಾಮೀನು ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

Trending News