ನವದೆಹಲಿ: ಬ್ರಿಟನ್ ನಲ್ಲಿ ಕಂಡುಬಂದಿರುವ ಹೊಸಸ್ವರೂಪದ ಕೊರೊನಾ ವೈರಸ್ ಹಿನ್ನೆಲೆಯಲ್ಲಿ, ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲು ಭಾರತ ನಿರ್ಧರಿಸಿದೆ. ಡಿ. 31 ರ ರಾತ್ರಿ 11.59ರವರೆಗೆ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳಿಗೆ ತಾತ್ಕಾಲಿಕ ನಿಷೇಧ ಹೇರಿ ಭಾರತೀಯ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿದೆ. ಈ ನಿಷೇಧ ಡಿ.22 11.59ರಿಂದ ಜಾರಿಯಾಗಲಿದ್ದು, ಡಿ. 31 ರ ರಾತ್ರಿ 11.59ರವರೆಗೆ ಇರಲಿದೆ.
ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಹೊಸ ವೈರಸ್ ಕಾಟ :
ಬ್ರಿಟನ್ ನಲ್ಲಿ ಕಂಡುಬಂದಿರುವ ಹೊಸ ಸ್ವರೂಪದ ಕೊರೊನಾ ವೈರಸ್(Corana Virus) ಹರಡುವಿಕೆಯ ಪ್ರಮಾಣವೂ ಶೇ 70ರಷ್ಟು ವೇಗವಾಗಿದೆ ಎನ್ನಲಾಗಿದೆ. ಬ್ರಿಟನ್ ನಿಂದ ಬೇರೆಡೆ ಪ್ರಯಾಣ ಬೆಳೆಸಿರುವ ಪ್ರಯಾಣಿಕರಲ್ಲಿಯೂ ಈ ಹೊಸ ಸ್ವರೂಪದ ವೈರಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಯುರೋಪಿನ ದೇಶಗಳು ಬ್ರಿಟನ್ ಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿತ್ತು. ಅಲ್ಲದೆ, ಬ್ರಿಟನ್ ನಿಂದ ಬರುವ ವಿಮಾನಗಳಿಗೂ ನಿಷೇಧ ಹೇರಿತ್ತು.
'ಹೊಸ ಕೊರೊನಾ ವೈರಸ್ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ'
ಕೋವಿಡ್ ಉಂಟುಮಾಡುವ ವೈರಸ್ ನಿಂದಲೇ ಈ ಹೊಸ ಸ್ವರೂಪದ ವೈರಸ್ ಹುಟ್ಟಿಕೊಂಡಿದೆ ಎನ್ನಲಾಗಿದೆ. ಹೊಸ ವೈರಸ್ ನ್ನು H69/V70 ಕೊರೊನಾ ವೈರಸ್ ಎಂದ ಕರೆಯಲಾಗಿದೆ. ಆದರೆ ಈ ಹೊಸ ವೈರಸ್ ನಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
Prashant Kishor: ಪ. ಬಂಗಾಳ ಚುನಾವಣೆ: ಬಿಜೆಪಿಗೆ ಸವಾಲು ಎಸೆದ ಪ್ರಶಾಂತ್ ಕಿಶೋರ್!
ಈಗಾಗಲೇ ಕಂಡುಹಿಡಿದಿರುವ ಲಸಿಕೆಗಳು (vaccine) ಈ ಹೊಸ ವೈರಸ್ ಮೇಲೆಯೂ ಪರಿಣಾಮ ಬೀರಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಸಂಶೋಧನೆಯ ನಂತರವೇ ತಿಳಿಯಲಿದೆ. ಆದರೆ ಲಸಿಕೆಗಳು ಹೊಸ ವೈರಸ್ (new virus)ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಜ್ಙಾನಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
Ration Card ಹೊಂದಿರುವವರಿಗೆ ಸಿಗಲಿದೆ 2,500 ರೂ. ಈ ರಾಜ್ಯದ 2.5 ಕೋಟಿ ಜನರಿಗೆ ಲಾಭ