ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನದ ಪ್ರಗತಿ ತೃಪ್ತಿ ತಂದಿಲ್ಲ-ಶ್ವೇತ ಭವನ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಪ್ರಗತಿ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Last Updated : Feb 23, 2018, 11:03 AM IST
ಭಯೋತ್ಪಾದನೆ ನಿಗ್ರಹದಲ್ಲಿ ಪಾಕಿಸ್ತಾನದ ಪ್ರಗತಿ ತೃಪ್ತಿ ತಂದಿಲ್ಲ-ಶ್ವೇತ ಭವನ title=

ವಾಷಿಂಗ್ಟನ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ಪ್ರಗತಿ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅಮೇರಿಕಾ ತನ್ನ ಕಾರ್ಯಗಳಿಗಾಗಿ ಪಾಕಿಸ್ತಾನವನ್ನು ಜವಾಬ್ದಾರರನ್ನಾಗಿ ಮಾಡುತ್ತಿದೆ ಎಂದು ಕೂಡ ವೈಟ್ ಹೌಸ್  ಹೇಳಿದೆ.

"ನಾವು ಪಾಕಿಸ್ತಾನದೊಂದಿಗೆ ನಮ್ಮ ಸಂಬಂಧದಲ್ಲಿ ಸ್ವಲ್ಪ ಸ್ಪಷ್ಟತೆಯನ್ನು ಪುನರ್ಸ್ಥಾಪಿದ್ದೇವೆ. ಇದೇ  ಮೊದಲ ಬಾರಿಗೆ ನಾವು ಈ ವಿಚಾರದಲ್ಲಿ ಪಾಕಿಸ್ತಾನವನ್ನು ಜವಾಬ್ದಾರರನ್ನಾಗಿ ಮಾಡುತ್ತಿದ್ದೇವೆ" ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ರಾಜ್ ಷಾ ತಿಳಿಸಿದ್ದಾರೆ. 

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪಾಕಿಸ್ತಾನವು ಈ ವಿಷಯದಲ್ಲಿ ಸಾಧಾರಣ ಪ್ರಗತಿ ಸಾಧಿಸಿರುವುದನ್ನು ನಾವು ಕಂಡಿದ್ದೇವೆ. ಆದರೆ ಪಾಕಿಸ್ತಾನದ ವಿಚಾರಕ್ಕೆ ಬಂದಾಗ ಟ್ರಂಪ್ ಅವರು ಈ ಪ್ರಗತಿಗೆ ತೃಪ್ತಿ ಹೊಂದಿಲ್ಲ" ಎಂದು ಶಾ ಹೇಳಿದರು. 

ಮತ್ತೊಂದು ಸುದ್ದಿಗೋಷ್ಠಿಯಲ್ಲಿ, ದಕ್ಷಿಣ ಏಷ್ಯಾ ನೀತಿ ಪಾಕಿಸ್ತಾನಕ್ಕೆ ಅವಕಾಶವನ್ನು ನೀಡುತ್ತದೆ ಎಂದು ಪೆಂಟಗನ್ ಹೇಳಿದ್ದಾರೆ.

"ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತಷ್ಟು ಕ್ತಮಗಳನ್ನು ಕಾಯ್ಗೊಳ್ಳಲು ಅವಕಾಶವಿದೆ. ಆದರೆ ಅದು ಪಾಕಿಸ್ತಾನದ ಆಸಕ್ತಿಯ ಮೇಲೆ ನಿರ್ಧರಿತವಾಗಿದೆ. ಇಯು ಉತ್ತಮ ಅವಕಾಶವಾಗಿದ್ದು, ಪಾಕಿಸ್ತಾನದ ಪಾಲ್ಗೊಳ್ಳುವಿಕೆಯನ್ನು ನಾವು ಸ್ವಾಗತಿಸುತ್ತೇವೆ" ಎಂದು ಶ್ವೇತ ಭವನದ ಮುಖ್ಯ ಪತ್ರಿಕಾ ವಕ್ತಾರ ಪೆಂಟಗನ್ ತಿಳಿಸಿದ್ದಾರೆ. 

Trending News