ಚೀನಾದಲ್ಲಿ 3000 ದಾಟಿದೆ COVID-19ಗೆ ಬಲಿಯಾದವರ ಸಂಖ್ಯೆ, ಇತ್ತೀಚಿನ ಪರಿಸ್ಥಿತಿ ಹೇಗಿದೆ?

ಚೀನಾದಲ್ಲಿ ಸೋಮವಾರ ತಡರಾತ್ರಿಯ ಹೊತ್ತಿಗೆ, ಕರೋನಾದ ಒಟ್ಟು ದೃಢಪಡಿಸಿದ ಪ್ರಕರಣಗಳು 80,881 ತಲುಪಿದೆ.

Last Updated : Mar 17, 2020, 11:06 AM IST
ಚೀನಾದಲ್ಲಿ 3000 ದಾಟಿದೆ COVID-19ಗೆ ಬಲಿಯಾದವರ ಸಂಖ್ಯೆ, ಇತ್ತೀಚಿನ ಪರಿಸ್ಥಿತಿ ಹೇಗಿದೆ?  title=

ಬೀಜಿಂಗ್: ಚೀನಾದಲ್ಲಿ ಕರೋನಾದಿಂದ ಮೃತಪಟ್ಟವರ ಸಂಖ್ಯೆ 3,226ಕ್ಕೆ ತಲುಪಿದೆ. ಇದೇ ವೇಳೆ 80,881 ಜನರಿಗೆ ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಚೀನಾದಲ್ಲಿ ನಾವೆಲ್ ಕರೋನಾ ವೈರಸ್ ನ 21 ಹೊಸ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಚೀನಾದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಚೀನಾದ ಹುಬೈ ಪ್ರಾಂತ್ಯದಲ್ಲಿ 12 ಮಂದಿ ಹಾಗೂ ಶಾಂಕ್ಸಿ ಪ್ರಾಂತ್ಯದಲ್ಲಿ ಒಬ್ಬರು ಕರೋನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಇದಲ್ಲದೆ 45 ಹೊಸ ಕರೋನಾವೈರಸ್ ಪ್ರಕರಣಗಳ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಸೋಮವಾರ 930 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮರಳಿದ್ದಾರೆ. ಪ್ರಸ್ತುತ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.

ಚೀನಾದಲ್ಲಿ ಸೋಮವಾರ ತಡರಾತ್ರಿವರೆಗೆ  ಕರೋನಾ ವೈರಸ್ (CoronaVirus) ದೃಢಪಟ್ಟವರ ಸಂಖ್ಯೆ 80,881ಕ್ಕೆ ತಲುಪಿದೆ. ಇದರಲ್ಲಿ 8,976 ಮಂದಿಯ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. 68,679 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 3,226 ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇದಲ್ಲದೆ ಇನ್ನೂ 128 ಮಂದಿ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿದೆ.ರೋಗಿಗಳ ಸಂಪರ್ಕಕ್ಕೆ ಬಂದ 9,351 ಜನರನ್ನು ಇನ್ನೂ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಆಯೋಗ ಮಾಹಿತಿ ಹಂಚಿಕೊಂಡಿದೆ.

ಅಷ್ಟೇ ಅಲ್ಲದೆ ಸೋಮವಾರ ತಡರಾತ್ರಿವರೆಗೆ ಹಾಂಕಾಂಗ್‌ನಲ್ಲಿ ನಾಲ್ಕು ಸಾವು ಸೇರಿದಂತೆ 157 ಪ್ರಕರಣವನ್ನು ದೃಢಪಡಿಸಲಾಗಿದೆ. ಮಕಾವು ಪ್ರದೇಶದಲ್ಲಿ 11, ತೈಪೆಯಲ್ಲಿ 1 ಸಾವುಗಳು ಸೇರಿದಂತೆ 67 ಪ್ರಕರಣಗಳು ದೃಢಪಟ್ಟಿದೆ. ಈ ಹಿಂದೆ, ಹಾಂಕಾಂಗ್‌ನಲ್ಲಿ 88, ಮಕಾವುದಲ್ಲಿ 10 ಮತ್ತು ತೈವಾನ್‌ನಲ್ಲಿ 22 ಜನರು ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Trending News