Coronavirus: ಚೀನಾಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ ಬ್ರಿಟನ್

ಕರೋನಾ ವೈರಸ್ ಬಗ್ಗೆ ಚೀನಾ ಕೆಲವು "ಕಠಿಣ ಪ್ರಶ್ನೆಗಳಿಗೆ" ಉತ್ತರಿಸಬೇಕಾಗುತ್ತದೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್  (Dominic Raab) ಗುರುವಾರ ಹೇಳಿದ್ದಾರೆ.

Last Updated : Apr 17, 2020, 10:43 AM IST
Coronavirus: ಚೀನಾಗೆ ಬಹಿರಂಗವಾಗಿಯೇ ಬೆದರಿಕೆ ಹಾಕಿದ ಬ್ರಿಟನ್ title=

ಲಂಡನ್: ಚೀನಾದಿಂದ ಪ್ರಾರಂಭವಾದ ಕೊರೊನಾವೈರಸ್ (Coronavirus)  ವಿಶ್ವದಾದ್ಯಂತ ವಿನಾಶಕ್ಕೆ ಕಾರಣವಾಗಿದೆ. ಚೀನಾ ಇದನ್ನು ನಿವಾರಿಸಿದೆ ಆದರೆ ಇತರ ದೇಶಗಳು, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಇಟಲಿ (Italy) ಮತ್ತು ಸ್ಪೇನ್ ಅದರ ವಿಕೋಪವನ್ನು ನಿರಂತರವಾಗಿ ಎದುರಿಸುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಕರೋನಾ ಬಗ್ಗೆ ಚೀನಾ (China)ದ ಮೌನವು ಬಹುತೇಕ ಎಲ್ಲ ದೇಶಗಳನ್ನೂ ಕೆರಳಿಸಿದೆ. ಏತನ್ಮಧ್ಯೆ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗ ಹರಡುವಿಕೆಗೆ ಕಾರಣವಾದ ಚೀನಾದ ಜೊತೆ ನಮ್ಮ ವ್ಯವಹಾರ ಹಿಂದಿನಂತೆ ಇರುವುದಿಲ್ಲ ಎಂದು  ಬ್ರಿಟನ್ ಚೀನಾಗೆ  ಬೆದರಿಕೆ ಹಾಕಿದೆ.

COVID-19: ಸರಿಯಾದ ಸಮಯದಲ್ಲಿ ಕ್ರಮ ಕೈಗೊಳ್ಳದ ಹಿನ್ನೆಲೆ WHOಗೆ ಫಂಡಿಂಗ್ ನಿಲ್ಲಿಸಿದ ಡೊನಾಲ್ಡ್ ಟ್ರಂಪ್

ಕರೋನಾ ವೈರಸ್ ಬಗ್ಗೆ ಚೀನಾ ಕೆಲವು "ಕಠಿಣ ಪ್ರಶ್ನೆಗಳಿಗೆ" ಉತ್ತರಿಸಬೇಕಾಗುತ್ತದೆ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಗುರುವಾರ ಹೇಳಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗವು ಹೇಗೆ ಪ್ರಾರಂಭವಾಯಿತು ಎಂಬುದನ್ನು ಚೀನಾ ವಿವರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಮಹಿಳಾ ಜನ್‌ಧನ್ ಖಾತೆಗೆ ಜಮೆಯಾದ ಹಣ ಹಿಂಪಡೆಯುವ ಬಗ್ಗೆ ಹರಡುತ್ತಿರುವ ಈ ವದಂತಿಗೆ ಕಿವಿಗೊಡದಿರಿ

ಈ ಕುರಿತು ವರದಿಗಾರರಿಗೆ ಹೇಳಿಕೆ ನೀಡಿರುವ ರಬ್ ಈ ಬಿಕ್ಕಟ್ಟನ್ನು ಆಳವಾಗಿ ಪರಿಶೀಲಿಸಬೇಕಾಗಿದೆ. ಚೀನಾದ ನಗರವಾದ ವುಹಾನ್‌ನಲ್ಲಿ ಕೊರೋನಾವೈರಸ್ Covid-19 ಹೇಗೆ ಪ್ರಾರಂಭವಾಯಿತು ಎಂಬುದನ್ನು ಕಂಡುಹಿಡಿಯುವುದು ಅವಶ್ಯಕ. ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಚೀನಾದಲ್ಲಿ ಏನಾಯಿತು ಎಂಬುದು ಇಡೀ ಜಗತ್ತಿಗೇ ಗೊತ್ತಾಗಬೇಕಿದೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಹೇಳಿದರು.

ಸಾಂಕ್ರಾಮಿಕ ರೋಗದ ಮೂಲವನ್ನು ಒಳಗೊಂಡಂತೆ ಅದರ ಎಲ್ಲಾ ಅಂಶಗಳನ್ನು ಬಹಿರಂಗ ಪಡಿಸುವಂತೆ ಅವರು ಒತ್ತಾಯಿಸಿದರು. ಇದನ್ನು ವಿಜ್ಞಾನದ ಆಧಾರದ ಮೇಲೆ "ಸಮತೋಲಿತ ರೀತಿಯಲ್ಲಿ" ಪರಿಶೀಲಿಸಬೇಕು. ಚೀನಾ ಈ ವಿಚಾರದಲ್ಲಿ ನಿಷ್ಠೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ ರಬ್ ಈ ಸಾಂಕ್ರಾಮಿಕದ ನಂತರ ಚೀನಾದೊಂದಿಗಿನ ನಮ್ಮ ವ್ಯವಹಾರ ಸಂಬಂಧಗಳು ಹಿಂದಿನಂತೆಯೇ ಮುಂದುವರೆಯುವುದಿಲ್ಲ ಎಂಬ ಬೆದರಿಕೆ ಒಡ್ಡುವ ಮಾತುಗಳನ್ನು ಆಡಿದ್ದಾರೆ. 

COVID-19 ಲಸಿಕೆ: ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಆರಂಭಿಸಿದ ಚೀನಾ

ಜಗತ್ತಿನಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 1 ಲಕ್ಷ 42 ಸಾವಿರ ದಾಟಿದೆ ಇದರೊಂದಿಗೆ ಕರೋನಾ ಸೋಂಕಿತರ ಸಂಖ್ಯೆಯೂ 21 ಲಕ್ಷ ದಾಟಿದೆ. ಯುಕೆಯಲ್ಲಿ ಕರೋನಾ ಸೋಂಕಿನ ಸಂಖ್ಯೆ ಒಂದು ಲಕ್ಷ ದಾಟಿದ್ದರೆ ಸುಮಾರು 14,000 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅದೇ ಸಮಯದಲ್ಲಿ ಅಮೆರಿಕಾದಲ್ಲಿ ಕರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 31 ಸಾವಿರವನ್ನು ಮೀರಿದೆ. ಸ್ಪೇನ್‌ನಲ್ಲಿ ಕರೋನಾ ಸೋಂಕಿತರ ಸಂಖ್ಯೆ 1 ಲಕ್ಷ 82 ಸಾವಿರ ದಾಟಿದ್ದು ಇಲ್ಲಿಯವರೆಗೆ 19 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 74 ಸಾವಿರ ಜನರು ಈ ಕಾಯಿಲೆಯಿಂದ ಗುಣಮುಖರಾಗಿದ್ದಾರೆ.

Trending News