ಮಸೂದ್ ಅಜರ್​​​ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಮತ್ತೆ ಚೀನಾ ಅಡ್ಡಿ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ '1267 ಅಲ್ ಖೈದಾ ನಿರ್ಬಂಧಗಳ ಸಮಿತಿ' ಅಡಿಯಲ್ಲಿ, ಮಸೂದ್ ಅಜರ್​​​ನನ್ನು ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪವನ್ನು ಫೆಬ್ರವರಿ 27 ರಂದು ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ತಂದಿದ್ದವು.

Last Updated : Mar 14, 2019, 09:58 AM IST
ಮಸೂದ್ ಅಜರ್​​​ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಮತ್ತೆ ಚೀನಾ ಅಡ್ಡಿ! title=
File Image

ನವದೆಹಲಿ: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್(JeM) ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು 'ಜಾಗತಿಕ ಭಯೋತ್ಪಾದಕ' ಪಟ್ಟಿಗೆ ಸೇರಿಸಲು ಸತತ ನಾಲ್ಕನೇ ಬಾರಿಗೆ ಚೀನಾ ಅಡ್ಡಿಪಡಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್​​​ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಸ್ತಾವನೆಯನ್ನು ಚೀನಾ ತಾಂತ್ರಿಕವಾಗಿ ನಿಷೇಧಿಸಿತು. 67 ಅಲ್ ಖೈದಾ ನಿರ್ಬಂಧಗಳ ಸಮಿತಿ' ಅಡಿಯಲ್ಲಿ, ಮಸೂದ್ ಅಜರ್​​​ನನ್ನು ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾಪವನ್ನು ಫೆಬ್ರವರಿ 27 ರಂದು ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳು ತಂದಿದ್ದವು.

ಈ ಹಿಂದೆ 2009, 2016  ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಅಡ್ಡಗಾಲು ಹಾಕಿದ್ದ ಚೀನಾ ಈ ಬಾರಿಯೂ ತನ್ನ ಚಾಳಿ ಮುಂದುವರೆಸಿದ್ದು, ಉಗ್ರ ಸಂಘಟನೆ ವಿರುದ್ಧ ಪ್ರಸ್ತಾವನೆ ಒಪ್ಪಿಕೊಳ್ಳಲು ಮತ್ತೊಮ್ಮೆ ಹಿಂದೇಟು ಹಾಕಿದೆ.

ಮಸೂದ್ ಅಜರ್​​​ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ವಿರೋಧ ವ್ಯಕ್ತಪಡಿಸಿರುವ ಚೀನಾ, ಅಜರ್​​​ನನ್ನು ಗ್ಲೋಬಲ್ ಟೆರರಿಸ್ಟ್ ಪಟ್ಟಿಗೆ ಸೇರಿಸಲು ಮತ್ತಷ್ಟು ಸಾಕ್ಷಿ ಮತ್ತು ಸಮಯಾವಕಾಶದ ಅವಶ್ಯಕತೆ ಇದೇ ಎಂದು ತಿಳಿಸಿದೆ.

Trending News