Afghanistan Crisis: ಯುಎಸ್ ಸೇರಿದಂತೆ 100 ದೇಶಗಳೊಂದಿಗೆ ತಾಲಿಬಾನ್ ಮಾಡಿಕೊಂಡಿದೆ ಈ ಒಪ್ಪಂದ

Afghanistan Crisis News: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾವಳಿ ಮುಂದುವರಿದಿದೆ. ಅಫ್ಘಾನಿಸ್ತಾನದಿಂದ ಹೊರಹೋಗುವ ಭರವಸೆಯಲ್ಲಿ ಹೆಚ್ಚಿನ ಸಂಖ್ಯೆಯ ಅಫಘಾನ್ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಬಳಿ ಬೀಡುಬಿಟ್ಟಿದ್ದಾರೆ.

Written by - Yashaswini V | Last Updated : Aug 30, 2021, 07:27 AM IST
  • ಅಫ್ಘಾನಿಸ್ತಾನದ ಬಹುಭಾಗವನ್ನು ತಾಲಿಬಾನ್ ವಶಪಡಿಸಿಕೊಂಡಿದೆ
  • ಹಕ್ಕಾನಿ ಜಾಲವು ಕಾಬೂಲ್‌ನ ಭದ್ರತೆಯ ಹೊಣೆಗಾರಿಕೆಯನ್ನು ಹೊಂದಿದೆ
  • ತಾಲಿಬಾನ್ 100 ದೇಶಗಳಿಗೆ ಈ ಭರವಸೆ ನೀಡಿದೆ
Afghanistan Crisis: ಯುಎಸ್ ಸೇರಿದಂತೆ 100 ದೇಶಗಳೊಂದಿಗೆ ತಾಲಿಬಾನ್ ಮಾಡಿಕೊಂಡಿದೆ ಈ ಒಪ್ಪಂದ  title=
Image courtesy: Reuters

ಕಾಬೂಲ್: ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಟರ್ಕಿ ಸೇರಿದಂತೆ ಸುಮಾರು 100 ದೇಶಗಳೊಂದಿಗೆ ಅಫ್ಘಾನಿಸ್ತಾನದ ಒಪ್ಪಂದದ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಜಂಟಿ ಹೇಳಿಕೆಯನ್ನು ನೀಡಿದೆ. ಜಂಟಿ ಹೇಳಿಕೆಯ ಪ್ರಕಾರ, ತಾಲಿಬಾನ್ ಬೇರೆ ದೇಶಗಳಿಗೆ ಪ್ರಯಾಣಿಸಲು ಸರಿಯಾದ ದಾಖಲೆಗಳನ್ನು ಹೊಂದಿರುವ ಎಲ್ಲಾ ವಿದೇಶಿ ಪ್ರಜೆಗಳು ಮತ್ತು ಅಫ್ಘಾನ್ ಪ್ರಜೆಗಳು ಅಫ್ಘಾನಿಸ್ತಾನದಿಂದ ಹೊರಗೆ ಹೋಗುವುದನ್ನು ತಡೆಯುವುದಿಲ್ಲ ಎಂದು ಈ ದೇಶಗಳಿಗೆ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಹೇಳಿಕೆ ಬಿಡುಗಡೆ ಮಾಡಿದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ :
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ, ಜಂಟಿ ಹೇಳಿಕೆಯನ್ನು ನೀಡಿದ ಎಲ್ಲಾ ದೇಶಗಳು ತಮ್ಮ ನಾಗರಿಕರು ಮತ್ತು ಅವರಿಗಾಗಿ ಕೆಲಸ ಮಾಡಿದ ಅಫ್ಘಾನ್ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಹೊರತರಲು ಬದ್ಧವಾಗಿವೆ ಎಂದು ತಿಳಿಸಿದೆ.

ಇದನ್ನೂ ಓದಿ- Kabul Airport Attack: ಈ ಗಾಯವನ್ನು ನಾವು ಮರೆಯುವುದಿಲ್ಲ, ಇದಕ್ಕೆ ಕಾರಣರಾದವರನ್ನು ಹುಡುಕಿ ಕೊಲ್ಲುತ್ತೇವೆ- ಅಮೇರಿಕ ಅಧ್ಯಕ್ಷ ಜೋ ಬಿಡೆನ್

100 ದೇಶಗಳು ಅಫ್ಘಾನ್ ನಾಗರಿಕರಿಗೆ ಈ ಭರವಸೆ ನೀಡಿದೆ:
ಇದಷ್ಟೇ ಅಲ್ಲ, ಈ ಎಲ್ಲಾ ದೇಶಗಳು ಅಫ್ಘಾನಿಸ್ತಾನದ ನಾಗರಿಕರಿಗೆ (Afghan citizens) ತಮ್ಮ ದೇಶಕ್ಕೆ ಬರಲು ಅಗತ್ಯ ದಾಖಲೆಗಳನ್ನು ನೀಡುವುದನ್ನು ಮುಂದುವರಿಸುತ್ತವೆ ಎಂದೂ ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಅದೇ ಸಮಯದಲ್ಲಿ, ಈ ದೇಶಗಳು ತಾಲಿಬಾನ್ ಅಂತಹ ಅಫಘಾನ್ ಪ್ರಜೆಗಳನ್ನು ತಡೆಯುವುದಿಲ್ಲ ಎಂದು ನಿರೀಕ್ಷಿಸುವುದಾಗಿಯೂ ತಿಳಿಸಿವೆ.

ಕಾಬೂಲ್ ವಿಮಾನ ನಿಲ್ದಾಣ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾವಳಿ ಮುಂದುವರಿದಿದೆ. ಅಫ್ಘಾನಿಸ್ತಾನದಿಂದ ಹೊರಹೋಗುವ ಭರವಸೆಯಲ್ಲಿ ಹೆಚ್ಚಿನ ಸಂಖ್ಯೆಯ ಅಫಘಾನ್ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ (Kabul Airport) ಬಳಿ ಬೀಡುಬಿಟ್ಟಿದ್ದಾರೆ ಮತ್ತು ಯಾವುದೇ ರೀತಿಯಲ್ಲಿ ತಮ್ಮ ದೇಶದಿಂದ ಹೊರಗೆ ಹೋಗಲು ಬಯಸುತ್ತಾರೆ. ಅಫ್ಘಾನಿಸ್ತಾನದ ಬಹುತೇಕ ಭಾಗಗಳನ್ನು ಭಯೋತ್ಪಾದಕ ಸಂಘಟನೆ ತಾಲಿಬಾನ್ ಆಕ್ರಮಿಸಿಕೊಂಡಿದೆ. ಆದಾಗ್ಯೂ, ಹಕ್ಕಾನಿ ಜಾಲವು ಕಾಬೂಲ್‌ನ ಭದ್ರತೆಯ ಹೊಣೆಗಾರಿಕೆಯನ್ನು ಹೊಂದಿದೆ.

ಇದನ್ನೂ ಓದಿ- Kabul Airport ಬಳಿ ರಾಕೆಟ್ ದಾಳಿ, ಸ್ಫೋಟದಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ

ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. . ಅವರು ಮಿಲಿಟರಿ ವಿಭಾಗವನ್ನೂ ಪ್ರವೇಶಿಸಿದ್ದಾರೆ. ಅಮೆರಿಕದ ಸೈನಿಕರಿಗೆ ವಿಮಾನ ನಿಲ್ದಾಣದ ಒಂದು ಸಣ್ಣ ಭಾಗ ಮಾತ್ರ ಉಳಿದಿದೆ ಎಂದು ಇತ್ತೀಚೆಗೆ ತಾಲಿಬಾನ್ ಹೇಳಿಕೊಂಡಿತ್ತು. ಆದರೆ, ತಾಲಿಬಾನ್ ನ ಈ ಹಕ್ಕನ್ನು ಅಮೆರಿಕ ತಿರಸ್ಕರಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News