US President ಡೊನಾಲ್ಡ್ ಟ್ರಂಪ್ ಗೆ ರಿಸಿನ್ (ವಿಷ) ಹೊಂದಿರುವ ಪತ್ರ ಕಳುಹಿಸಿದ ಆರೋಪದ ಮೇಲೆ ಶಂಕಿತ ಮಹಿಳೆಯ ಬಂಧನ

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ರಿಸಿನ್ (ವಿಷ) ಹೊಂದಿರುವ ಪತ್ರ ಕಳುಹಿಸಿದ ಆರೋಪದ ಮೇಲೆ ಶಂಕಿತ ಮಹಿಳೆಯೋರ್ವಳನ್ನು ಬಂಧಿಸಲಾಗಿದೆ.

Last Updated : Sep 21, 2020, 12:41 PM IST
  • ಕೆನಡಾದಿಂದ ಯುಎಸ್ ಗೆ ಬರುವಾಗ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ
  • ವಿಷವನ್ನು ಹೊಂದಿರುವ ಪತ್ರವನ್ನು ಕಳೆದ ವಾರ ಕಳುಹಿಸಲಾಗಿದೆ
  • ರಿಸಿನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ 25 ವರ್ಷ ಶಿಕ್ಷೆ ವಿಧಿಸಲಾಗಿದೆ
US President ಡೊನಾಲ್ಡ್ ಟ್ರಂಪ್ ಗೆ ರಿಸಿನ್ (ವಿಷ)  ಹೊಂದಿರುವ ಪತ್ರ ಕಳುಹಿಸಿದ ಆರೋಪದ ಮೇಲೆ ಶಂಕಿತ ಮಹಿಳೆಯ ಬಂಧನ title=

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ (Donald Trump)ಗೆ ವಿಷಕಾರಿ ಪದಾರ್ಥ(ರಿಸಿನ್) ಹೊಂದಿರುವ ಪತ್ರವನ್ನು ಕಳುಹಿಸಿದ ಶಂಕೆಯ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಮಹಿಳೆ ಕೆನಡಾದಿಂದ ಪತ್ರವನ್ನು ಕಳುಹಿಸಿದ್ದರು, ಆದರೆ ಭದ್ರತಾ ಇಲಾಖೆ ಅದನ್ನು ಪತ್ತೆಹಚ್ಚಿದೆ. ಮಹಿಳೆಯ ಗುರುತು ಬಹಿರಂಗಗೊಳಿಸಲಾಗಿಲ್ಲ. ಕೆನಡಾದಿಂದ ಅಮೆರಿಕಕ್ಕೆ ಬರುವಾಗ ಆಕೆಯನ್ನು ಗಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಕೆಯ ಬಳಿ ರೈಫಲ್ ಕೂಡ ಪತ್ತೆಯಾಗಿದೆ. ಪ್ರಕರಣದ ತನಿಖೆಯಲ್ಲಿ ಮಹಿಳೆ ಎಫ್‌ಬಿಐಗೆ ಸಹಕರಿಸುತ್ತಿದ್ದಾರೆ ಎಂದು ಕೆನಡಾದ ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ- Trump in Trouble: ಅಮೆರಿಕ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಾಜಿ ಮಾಡೆಲ್

ಕಳೆದ ವಾರ ಈ ಪತ್ರ ಬರೆಯಲಾಗಿತ್ತು
ಕಳೆದ ವಾರ ವಿಷಪೂರಿತ ಪದಾರ್ಥ ಹೊಂದಿರುವ ಮತ್ತು ಟ್ರಂಪ್ ಅವರಿಗೆ ಬರೆಯಲಾಗಿದ್ದ ಪತ್ರವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದರು. ಈ ಪತ್ರವನ್ನು ಕೆನಡಾದಿಂದ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ, ನಂತರ ಅಮೆರಿಕದ ಏಜೆನ್ಸಿಗಳು ಮಹಿಳೆಯ ಮೇಲೆ ನಿಗಾ ವಹಿಸಿವೆ. ವಾಸ್ತವವಾಗಿ, ಶ್ವೇತಭವನಕ್ಕೆ ಹೋಗುವ ಪ್ರತಿಯೊಂದು ವಸ್ತುವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ ಮತ್ತು ಈ ಪತ್ರವು ತನಿಖೆಯ ವೇಳೆ ಅಧಿಕಾರಿಗಳ ಕೈಸೇರಿದೆ.

ಇದನ್ನು ಓದಿ- 18 ಯುದ್ಧವಿಮಾನಗಳ ಮೂಲಕ Taiwan ಗಡಿ ನುಸುಳಿದ China, USಗೂ ಕೂಡ ಎಚ್ಚರಿಕೆ

ರಿಸಿನ್ (Ricin) ತುಂಬಾ ಅಪಾಯಕಾರಿ ವಿಷವಾಗಿದೆ
ರಿಕಿನ್ ಅನ್ನು ತುಂಬಾ ಮಾರಕ ವಿಷವೆಂದು ಪರಿಗಣಿಸಲಾಗಿದೆ. ಅದರಲ್ಲಿ ಒಂದು ಸಣ್ಣ ಪ್ರಮಾಣವೂ ಮನುಷ್ಯರಿಗೆ ಮಾರಕವಾಗಿದೆ. ಇದನ್ನು ಕ್ಯಾಸ್ಟರ್ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಇದನ್ನು ಪುಡಿ, ಟ್ಯಾಬ್ಲೆಟ್ ಅಥವಾ ದ್ರವ ರೂಪದಲ್ಲಿಯೂ ಬಳಸಬಹುದು. ಒಬ್ಬ ವ್ಯಕ್ತಿಯನ್ನು ಕೊಲ್ಲಲು ಇದರ 500 ಮಿ.ಗ್ರಾಂ. ಪ್ರಮಾಣ ಸಾಕಾಗುತ್ತದೆ.

ಇದನ್ನು ಓದಿ- 2021 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ನಾಮನಿರ್ದೇಶನ

ರಿಸಿನ್ ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ 25 ವರ್ಷ ಶಿಕ್ಷೆಯಾಗಿತ್ತು
2014 ರಲ್ಲಿ, ಅಂದಿನ ಅಧ್ಯಕ್ಷ ಬರಾಕ್ ಒಬಾಮ(Barack Obama) ಮತ್ತು ಇತರ ಅಧಿಕಾರಿಗಳಿಗೆ ರಿಸಿನ್ ಹೊಂದಿರುವ ಪತ್ರಗಳನ್ನು ಕಳುಹಿಸಿದ್ದಕ್ಕಾಗಿ ಮಿಸ್ಸಿಸ್ಸಿಪ್ಪಿಯ ವ್ಯಕ್ತಿಯೊಬ್ಬನಿಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೆ ವೇಳೆ 2018 ರಲ್ಲಿ, ನೌಕಾಪಡೆಯ ಮಾಜಿ ಸೈನಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಆಡಳಿತ ಅಧಿಕಾರಿಗಳಿಗೆ ರೆಸಿನ್ ಹೊಂದಿರುವ ಪತ್ರವನ್ನು ಕಳುಹಿಸುವುದನ್ನು ಒಪ್ಪಿಕೊಂಡ ಬಳಿಕ ಅವರನ್ನು ಬಂಧಿಸಲಾಗಿತ್ತು.

Trending News