ಕಠ್ಮಂಡು: ನೇಪಾಳದಲ್ಲಿ ಶೈಕ್ಷಣಿಕ ಪ್ರವಾಸ ಮುಗಿಸಿ ಹಿಂದಿರುಗುವ ವೇಳೆ ಬಸ್ ಕಂದಕಕ್ಕೆ ಉರುಳಿ 23 ಮಂದಿ ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಸಲ್ಲಾಯೆನ್ ಜಿಲ್ಲೆಯ ಕಪುರ್ಕೋಟ್ನಿಂದ ಬಸ್ ಹಿಂದಿರುಗುವ ವೇಳೆ ಈ ದುರ್ಘಟನೆ ನಡೆದಿದೆ.
ಬಸ್ ನಲ್ಲಿ 34 ವಿದ್ಯಾರ್ಥಿಗಳು, ಇಬ್ಬರು ಶಿಕ್ಷರು ಮತ್ತು ಒಬ್ಬ ಚಾಲಕ ಸೇರಿದಂತೆ 37 ಮಂದಿ ಪ್ರಯಾಣಿಸುತ್ತಿದ್ದರು ಎಂದು ಜಿಲ್ಲೆಯ ಪೋಲಿಸ್ ಕಛೇರಿಯಿಂದ ಮಾಹಿತಿ ಲಭಿಸಿದೆ. ರಾಜಧಾನಿ ಕಠ್ಮಂಡುದಿಂದ 400 ಕಿ.ಮೀ ದೂರದಲ್ಲಿರುವ ರಾಮರಿ ಗ್ರಾಮದ ಬಳಿ ರಸ್ತೆಯಿಂದ ಬಸ್ ಬಿದ್ದಿದ್ದು ಸುಮಾರು 700 ಮೀಟರ್ಗಳಷ್ಟು ಆಳದಲ್ಲಿ ಬಿದ್ದಿದೆ. ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
'ಕಠ್ಮಂಡು ಪೋಸ್ಟ್' ನ ಸುದ್ದಿ ಪ್ರಕಾರ, ಕೃಷ್ಣ ಸೇನ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೈನ್ಸ್ ಪ್ರಾಜೆಕ್ಟ್ ಗಾಗಿ ಈ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ.